‘ಮಗಳು ವಂಶಿಕಾಳಿಂದ ಜನರು ನನ್ನನ್ನು ಮತ್ತೆ ಪ್ರೀತಿಸುತ್ತಿದ್ದಾರೆ’; ಮಾಸ್ಟರ್ ಆನಂದ್ ಭಾವುಕ ನುಡಿ
ಮಾಸ್ಟರ್ ಆನಂದ್ ಅವರು ಬಾಲ ಕಲಾವಿದನಾಗಿ ಚಿತ್ರರಂಗಕ್ಕೆ ಕಾಲಿಟ್ಟವರು. ನಂತರ ನಿರೂಪಕನಾಗಿ, ನಟನಾಗಿ ಮಿಂಚಿದರು. ಈಗ ಅವರ ಮಗಳು ವಂಶಿಕಾಳಿಂದಾಗಿ ಅವರನ್ನು ಮತ್ತಷ್ಟು ಜನರು ಗುರುತಿಸುತ್ತಿದ್ದಾರೆ.
‘ನನ್ನಮ್ಮ ಸೂಪರ್ಸ್ಟಾರ್’ (Nannamma Super Star) ವೇದಿಕೆ ಮೇಲೆ ಮಾಸ್ಟರ್ ಆನಂದ್ (Master Anand) ಮಗಳು ವಂಶಿಕಾಮಿಂಚುತ್ತಿದ್ದಾಳೆ. ಅವಳನ್ನು ನೋಡೋದು ಎಂದರೆ ವೀಕ್ಷಕರಿಗೆ ಎಲ್ಲಿಲ್ಲದ ಖುಷಿ. ಅವಳು ಮಾಡುವ ತಲೆಹರಟೆ ಕೆಲಸಗಳು, ಅವಳ ಚೂಟಿ ಮಾತುಗಳು ಸಖತ್ ಇಷ್ಟ ಆಗುತ್ತದೆ. ವಂಶಿಕಾ ಮಾತಿಗೆ ಇಳಿದರೆ ಯಾರನ್ನು ಬೇಕಾದರೂ ಸೋಲಿಸುತ್ತಾಳೆ. ಈ ಮೊದಲು ‘ನನ್ನಮ್ಮ ಸೂಪರ್ ಸ್ಟಾರ್’ ವೇದಿಕೆ ಏರಿದ್ದ ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ ಅವರನ್ನು ಮಾತಿನಲ್ಲಿ ಸೋಲಿಸಿದ್ದಳು ವಂಶಿಕಾ (Vanshika). ಈ ಕಾರ್ಯಕ್ರಮದಿಂದ ಕರ್ನಾಟಕದಾದ್ಯಂತ ಅವಳು ಜನಪ್ರಿಯತೆ ಪಡೆದುಕೊಂಡಿದ್ದಾಳೆ. ಈ ಬಗ್ಗೆ ಅವರ ಕುಟುಂಬದವರಿಗೆ ಸಖತ್ ಖುಷಿ ಇದೆ. ಈ ಕುರಿತು ಮಾಸ್ಟರ್ ಆನಂದ್ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
‘ನನ್ನಮ್ಮ ಸೂಪರ್ ಸ್ಟಾರ್’ ಕಾರ್ಯಕ್ರಮ ಕಿರುತೆರೆ ವೀಕ್ಷಕರಿಗೆ ಇಷ್ಟವಾಗಿದೆ. ಇದರಲ್ಲಿ ನೀಡುವ ನಾನಾ ಟಾಸ್ಕ್ಗಳು ಗಮನ ಸೆಳೆಯುತ್ತಿವೆ. ಸೆಲೆಬ್ರಿಟಿ ಮಕ್ಕಳು ಮಾಡುವ ಕೀಟಲೆಗಳು ಒಂದೆರಡಲ್ಲ. ಈ ಕಾರ್ಯಕ್ರಮ ಪ್ರಸಾರ ಆರಂಭ ಆದಾಗಿನಿಂದ ನಟ-ನಿರೂಪಕ ಮಾಸ್ಟರ್ ಆನಂದ್ ಅವರ ಪುತ್ರಿ ವಂಶಿಕಾ ಸಿಕ್ಕಾಪಟ್ಟೆ ಮಿಂಚುತ್ತಿದ್ದಾಳೆ. ಈ ಪುಟಾಣಿಯ ಮಾತುಗಳನ್ನು ಕೇಳಿ ಬೆರಗಾಗದವರೇ ಇಲ್ಲ. ದೊಡ್ಡ ವೇದಿಕೆ ಏರಿದಾಗ ಯಾರಿಗಾದರೂ ಭಯವಾಗುತ್ತದೆ. ಆದರೆ, ವಂಶಿಕಾ ಆ ರೀತಿ ಭಯಪಟ್ಟುಕೊಂಡಿಲ್ಲ. ಅವಳು ಸದಾ ಮಾತನಾಡುತ್ತಲೇ ಇರುತ್ತಾಳೆ. ವಂಶಿಕಾ ಇಂದ ಮಾಸ್ಟರ್ ಆನಂದ್ ಅವರ ಖ್ಯಾತಿಯೂ ಹೆಚ್ಚಿದೆ.
ಮಾಸ್ಟರ್ ಆನಂದ್ ಅವರು ಬಾಲ ಕಲಾವಿದನಾಗಿ ಚಿತ್ರರಂಗಕ್ಕೆ ಕಾಲಿಟ್ಟವರು. ನಂತರ ನಿರೂಪಕನಾಗಿ, ನಟನಾಗಿ ಮಿಂಚಿದರು. ಈಗ ಅವರ ಮಗಳು ವಂಶಿಕಾಳಿಂದಾಗಿ ಅವರನ್ನು ಮತ್ತಷ್ಟು ಜನರು ಗುರುತಿಸುತ್ತಿದ್ದಾರೆ. ಈ ವಿಚಾರದಲ್ಲಿ ಅವರಿಗೆ ಖುಷಿ ಇದೆ. ಈ ಬಗ್ಗೆ ಆನಂದ್ ಅವರು ಹೇಳಿಕೊಂಡಿದ್ದಾರೆ.
‘ಎರಡುಮೂರು ಘಟನೆಗಳು ನಡೆದವು. ಕಾರಲ್ಲಿ ಹೋಗುವಾಗ ಅಭಿಮಾನಿಗಳು ಕೈ ಮಾಡಿ ನಿಲ್ಸಿದ್ರು. ನನ್ನ ಬಳಿ ಸೆಲ್ಫೀ ತೆಗೆದುಕೊಳ್ಳೋಕೆ ಈ ರೀತಿ ಮಾಡ್ತಾ ಇರಬಹುದು ಅಂದುಕೊಂಡೆ. ನಾನು ಕಾರನ್ನು ನಿಲ್ಲಿಸಿದೆ. ‘ವಂಶಿಕಾ ಹಿಂದೆ ಇದಾರೆ, ಮುಂದೆ ಕರೀರಿ. ಅವಳ ಜತೆ ಸೆಲ್ಫೀ ತೆಗೆದುಕೊಳ್ಳಬೇಕು’ ಅಂದ್ರು. ನನ್ನತ್ರ ಸೆಲ್ಫೀ ತೆಗೆದುಕೊಳ್ಳದೇ ನಡೆದು ಬಿಟ್ಟರು. ಮಾಲ್ಗೆ ಹೋದ್ರೆ ನಾನು ಕ್ಯಾಮೆರಾಮ್ಯಾನ್ ಆಗ್ಬೇಕು. ಎಲ್ಲರೂ ನನ್ನತ್ರ ಮೊಬೈಲ್ ಕೊಟ್ಟು, ಮಗಳ ಜತೆ ಫೋಟೋ ತೆಗೆದುಕೊಡಿ ಅಂತಾರೆ. ತುಂಬಾ ಖುಷಿ ಆಗುತ್ತದೆ. ನನ್ನ ಮಗಳಿಂದ ಜನರು ನನ್ನನ್ನು ಮತ್ತೆ ಪ್ರೀತಿಸೋಕೆ ಶುರು ಮಾಡಿದ್ದಾರೆ. ನನ್ನ ನೋಡೋ ಆ್ಯಂಗಲ್ ಚೇಂಜ್ ಆಗಿದೆ’ ಎಂದು ಸಂತಸ ಹೊರಹಾಕುತ್ತಾರೆ ಮಾಸ್ಟರ್ ಆನಂದ್.
ಇದನ್ನೂ ಓದಿ: ನಿವೇದಿತಾ ಗೌಡ ಅವರನ್ನೇ ಮಣಿಸಿದ ಮಾತಿನ ಮಲ್ಲಿ ವಂಶಿಕಾ; ಮಾಸ್ಟರ್ ಆನಂದ್ ಪುತ್ರಿಯ ಮಸ್ತ್ ಮಾತುಕತೆ
ಮಾಸ್ಟರ್ ಆನಂದ್ ಮಗಳು ವಂಶಿಕಾ ಭರ್ಜರಿ ಶಾಪಿಂಗ್; ವಿಡಿಯೋ ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕ ಸೃಜನ್ ಲೋಕೇಶ್