AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆರಳೆಣಿಕೆಯಷ್ಟಿರುವ ಮುಸಲ್ಮಾನ್ ಗೂಂಡಾಗಳಿಂದ ಇಡೀ ಮುಸ್ಲಿಂ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ: ಕೆ ಎಸ್ ಈಶ್ವರಪ್ಪ

ಬೆರಳೆಣಿಕೆಯಷ್ಟಿರುವ ಮುಸಲ್ಮಾನ್ ಗೂಂಡಾಗಳಿಂದ ಇಡೀ ಮುಸ್ಲಿಂ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ: ಕೆ ಎಸ್ ಈಶ್ವರಪ್ಪ

TV9 Web
| Edited By: |

Updated on: Mar 05, 2022 | 7:55 PM

Share

ಮೊನ್ನೆಯಷ್ಟೇ ಹರ್ಷನನ್ನು ಕಳೆದುಕೊಂಡು ಹಿಂದೂ ಯುವಕರು ರೋಷದಿಂದ ಕುದಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ನಾಯಕರು ಗೂಂಡಾ ಎಲಿಮೆಂಟ್​ಗಳನ್ನು ಹದ್ದು ಬಸ್ತಿನಲ್ಲಿಡಬೇಕು ಎಂದು ಈಶ್ವರಪ್ಪ ಹೇಳಿದರು.

ಶಿವಮೊಗ್ಗ ಶಾಂತವಾಗಿದೆ ಅಂದುಕೊಳ್ಳುವಷ್ಟರಲ್ಲಿ ಕೋಮು ಸೌಹಾರ್ದತೆ ಮತ್ತು ಸಮಾಜದ ಸ್ವಾಸ್ಥ್ಯ ಕೆಡಿಸುವ ಮತ್ತೊಂದು ಕೃತ್ಯ ಬೆಳಕಿಗೆ ಬಂದಿದೆ. ಶಿವಮೊಗ್ಗದಲ್ಲೇ ಇರುವ ಹಿರಿಯ ಸಚಿವರ ಕೆಎಸ್ ಈಶ್ವರಪ್ಪ (KS Eshwarappa) ಘಟನೆ ಬಗ್ಗೆ ಮಾಧ್ಯಮದವರಿಗೆ ವಿವರಣೆ ನೀಡಿದರು. ಬಿಜೆಪಿ ಕಾರ್ಯಕರ್ತ (BJP worker) ಪ್ರಕಾಶ್ (Prakash)  ಎನ್ನುವವರ ಸಹೋದರ ವೆಂಕಟೇಶ್ (Venkatesh) ಮೇಲೆ 3-4 ಮುಸ್ಲಿಂ ಗೂಂಡಾಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ವೆಂಕಟೇಶ್ ಅವರು ತಮ್ಮ ನಾಯಿಯೊಂದಿಗೆ ವಾಕಿಂಗ್ ಹೋಗಿದ್ದಾಗ ಅವರನ್ನು ಮನಬಂದಂತೆ ಥಳಿಸಲಾಗಿದೆ. ವೆಂಕಟೇಶ್​ಗೆ ತೀವ್ರ ರಕ್ತಸ್ರಾವವಾಗಿದೆ ಮತ್ತು ಅವರನ್ನು ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿದೆ ಎಂದು ಈಶ್ಪರಪ್ಪ ಹೇಳಿದರು. ನಗರದಲ್ಲಿ ಹೆಚ್ಚುತ್ತಿರುವ ಹಿಂಸಾಚಾರದ ಬಗ್ಗೆ ಕಳವಳ ಮತ್ತು ಆಕ್ರೋಷ ವ್ಯಕ್ತಪಡಿಸಿದ ಸಚಿವರು, ಕೇವಲ ಬೆರಳೆಣಿಕೆಯಷ್ಟಿರುವ ಮುಸಲ್ಮಾನ್ ಗೂಂಡಾಗಳಿಂದ ಪೂರ್ತಿ ಮುಸ್ಲಿಂ ಸಮುದಾಯಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದರು.

ಮುಸ್ಲಿಂ ಗೂಂಡಾಗಳು ನಡೆಸುತ್ತಿರುವ ಹಲ್ಲೆಗಳಿಗೆ ಹಿಂದೂ ಯುವಕರು ಪ್ರತಿಯಾಗಿ ಹಲ್ಲೆ ನಡೆಸಲಾರಂಭಿಸಿದರೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ. ಮೊನ್ನೆಯಷ್ಟೇ ಹರ್ಷನನ್ನು ಕಳೆದುಕೊಂಡು ಹಿಂದೂ ಯುವಕರು ರೋಷದಿಂದ ಕುದಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಸ್ಲಿಂ ಸಮುದಾಯದ ನಾಯಕರು ಗೂಂಡಾ ಎಲಿಮೆಂಟ್​ಗಳನ್ನು ಹದ್ದು ಬಸ್ತಿನಲ್ಲಿಡಬೇಕು ಎಂದು ಈಶ್ವರಪ್ಪ ಹೇಳಿದರು.

ವೆಂಕಟೇಶ್ ದೇವರ ದಯೆಯಿಂದ ಅಪಾಯದಿಂದ ಪಾರಾಗಿದ್ದಾನೆ. ಆದರೆ ಮುಸ್ಲಿಂ ಗೂಂಡಾಗಳ ಮಿತಿಮೀರಿದ ವರ್ತನೆ ಹಿಂದೂ ಸಮಾಜದ ತಾಳ್ಮೆಯನ್ನು ಪರೀಕ್ಷಿಸುತ್ತಿದೆ. ಬಹಳ ದಿನ ಅವರನ್ನು ತಡೆಯಲು ಸಾಧ್ಯವಾಗದು. ಮುಸ್ಲಿಂ ನಾಯಕರು ಇದರ ಬಗ್ಗೆ ಯೋಚಿಸಬೇಕು. ಅವರು ತಮ್ಮ ಸಮುದಾಯದಲ್ಲಿರುವ ಗೂಂಡಾಗಳನ್ನು ಸರ್ಕಾರದ ವಶಕ್ಕೆ ಒಪ್ಪಿಸಲಿ. ಸಮಾಜದಲ್ಲಿ ಶಾಂತಿ ನೆಲಸಬೇಕಾದರೆ ಅವರು ಅದನ್ನು ಮಾಡಲೇಬೇಕಿದೆ ಎಂದು ಈಶ್ವರಪ್ಪ ಹೇಳಿದರು.

ಇದನ್ನೂ ಓದಿ:  Shivamogga Voilence: ಶಿವಮೊಗ್ಗದಲ್ಲಿ ನಿಷೇಧಾಜ್ಞೆ ನಡುವೆ ಹಲ್ಲೆ ನಡೆಸಿದ್ದ ಇಬ್ಬರ ಬಂಧನ