Shivamogga Voilence: ಶಿವಮೊಗ್ಗದಲ್ಲಿ ನಿಷೇಧಾಜ್ಞೆ ನಡುವೆ ಹಲ್ಲೆ ನಡೆಸಿದ್ದ ಇಬ್ಬರ ಬಂಧನ

ಶಿವಮೊಗ್ಗದ ಗೋಪಾಳದ ಪದ್ಮಾ ಟಾಕೀಸ್ ಬಳಿ ವೆಂಕಟೇಶ್ ಎಂಬ ವ್ಯಕ್ತಿ ಮೇಲೆ ನಾಲ್ವರು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಪರಾರಿ ಆಗಿದ್ದರು. ನಾಯಿ ತೆಗೆದುಕೊಂಡು ವಾಕಿಂಗ್ ಹೋಗಿದ್ದ ವೇಳೆ ಈ ಘಟನೆ ನಡೆದಿದ್ದು ಈಗ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

Shivamogga Voilence: ಶಿವಮೊಗ್ಗದಲ್ಲಿ ನಿಷೇಧಾಜ್ಞೆ ನಡುವೆ ಹಲ್ಲೆ ನಡೆಸಿದ್ದ ಇಬ್ಬರ ಬಂಧನ
ಸಲ್ಮಾನ್, ಸೈಯದ್ ಸುಬಾನ್ ಬಂಧಿತ ಆರೋಪಿಗಳು
Follow us
TV9 Web
| Updated By: ಆಯೇಷಾ ಬಾನು

Updated on: Mar 04, 2022 | 9:36 PM

ಶಿವಮೊಗ್ಗ: ನಗರದಲ್ಲಿ ನಿಷೇಧಾಜ್ಞೆ ನಡುವೆ ಹಲ್ಲೆ ನಡೆಸಿದ್ದ ಇಬ್ಬರ ಬಂಧನವಾಗಿದೆ. ಸಲ್ಮಾನ್, ಸೈಯದ್ ಸುಬಾನ್ನನ್ನು ಪೊಲೀಸರು ಬಂಧಿಸಿದ್ದಾರೆ. ಗೋಪಾಳ ಬಡಾವಣೆಯ ಪದ್ಮಾ ಟಾಕೀಸ್ ಬಳಿ ವೆಂಕಟೇಶ್ ಮೇಲೆ ಮೂವರು ಸೇರಿ ಕಲ್ಲಿನಿಂದ ಹಲ್ಲೆಗೈದಿದ್ದರು. ನಿಷೇಧಾಜ್ಞೆ ನಡುವೆ ಹಲ್ಲೆ ನಡೆದಿದ್ದರಿಂದ ಆತಂಕ ಮನೆಮಾಡಿತ್ತು. ನಿನ್ನೆ ರಾತ್ರಿಯಿಂದ ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣವಿತ್ತು. ಕ್ಷಿಪ್ರ ಕಾರ್ಯಾಚರಣೆ ನಡೆಸಿ ತುಂಗಾನಗರ ಠಾಣೆ ಪೊಲೀಸರು ಸಲ್ಮಾನ್, ಸೈಯದ್ ಎಂಬ ಇಬ್ಬರನ್ನು ಬಂಧಿಸಿದ್ದಾರೆ.

ಘಟನೆ ವಿವರ ಫೆಬ್ರವರಿ 20 ರ ರಾತ್ರಿ ಬಜರಂಗದಳ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣದ ಬಳಿಕ ಶಿವಮೊಗ್ಗ ನಗರ ಹೊತ್ತಿ ಉರಿದಿತ್ತು. ನಗರದಲ್ಲಿ ಫೆಬ್ರವರಿ 20 ರಿಂದ ಮಾರ್ಚ್ 4 ರ ವರೆಗೂ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿತ್ತು. ಜಿಲ್ಲೆಯಲ್ಲಿ ಪೊಲೀಸ್ ಬಂದೋಬಸ್ತ್ ಜೋರಾಗಿತ್ತು. ಆದ್ರೆ, ಇಷ್ಟೆಲ್ಲಾ ಬಂದೋಬಸ್ತ್ ಇದ್ರೂ ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ. ಶಿವಮೊಗ್ಗದ ಗೋಪಾಳದ ಪದ್ಮಾ ಟಾಕೀಸ್ ಬಳಿ ವೆಂಕಟೇಶ್ ಎಂಬ ವ್ಯಕ್ತಿ ಮೇಲೆ ನಾಲ್ವರು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಪರಾರಿ ಆಗಿದ್ದರು. ನಾಯಿ ತೆಗೆದುಕೊಂಡು ವಾಕಿಂಗ್ ಹೋಗಿದ್ದ ವೇಳೆ ಈ ಘಟನೆ ನಡೆದಿದ್ದು, ನಾಲ್ವರು ಕಿಡಿಗೇಡಿಗಳು ಮತ್ತು ವೆಂಕಟೇಶ್ ನಡುವೆ ಸಿಲ್ಲಿ ವಿಚಾರಕ್ಕೆ ವಾಗ್ವಾದವಾಗಿದೆ. ಈ ನಡುವೆ ಆಕ್ರೋಶಗೊಂಡ ನಾಲ್ವರು ದುಷ್ಕರ್ಮಿಗಳು ವೆಂಕಟೇಶ್ ಮೇಲೆ ಕಲ್ಲುಗಳಿಂದ ದಾಳಿ ಮಾಡಿದ್ದಾರೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ವೆಂಕಟೇಶ್ನನ್ನು ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವಿಷ್ಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಸಂಸದ ಬಿ.ವೈ.ರಾಘವೇಂದ್ರ ಭೇಟಿ ನೀಡಿ ಗಾಯಾಳು ಆರೋಗ್ಯ ವಿಚಾರಿಸಿ, ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದರು.

ಇದನ್ನೂ ಓದಿ: ಇನ್ನೂ ಖಾರ್ಕಿವ್​ನಲ್ಲಿ ಸಿಲುಕಿರುವವರಿಗೆ ರಷ್ಯಾದ ಮೂಲಕ ಬರುವುದೊಂದೇ ಉಳಿದಿರುವ ದಾರಿ ಎನ್ನುತ್ತಾರೆ ವಾಪಸ್ಸು ಬಂದಿರುವ ವಿದ್ಯಾರ್ಥಿ

ಗಾಂಜಾ ಎಣ್ಣೆಯಲ್ಲಿ ಚಾಕೋಲೇಟ್! ಒಡಿಸಾದ ಇಬ್ಬರು ಐನಾತಿಗಳು ಮಹದೇವಪುರದಲ್ಲಿ ಅರೆಸ್ಟ್