ಇನ್ನೂ ಖಾರ್ಕಿವ್​ನಲ್ಲಿ ಸಿಲುಕಿರುವವರಿಗೆ ರಷ್ಯಾದ ಮೂಲಕ ಬರುವುದೊಂದೇ ಉಳಿದಿರುವ ದಾರಿ ಎನ್ನುತ್ತಾರೆ ವಾಪಸ್ಸು ಬಂದಿರುವ ವಿದ್ಯಾರ್ಥಿ

ಇನ್ನೂ ಖಾರ್ಕಿವ್​ನಲ್ಲಿ ಸಿಲುಕಿರುವವರಿಗೆ ರಷ್ಯಾದ ಮೂಲಕ ಬರುವುದೊಂದೇ ಉಳಿದಿರುವ ದಾರಿ ಎನ್ನುತ್ತಾರೆ ವಾಪಸ್ಸು ಬಂದಿರುವ ವಿದ್ಯಾರ್ಥಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 04, 2022 | 8:58 PM

ಖಾರ್ಕಿವ್ ಒಂದು ಯುದ್ಧವಲಯವಾಗಿದ್ದು ಇಂದಿನಿಂದ (ಶುಕ್ರವಾರ) ರೈಲು ಸಂಚಾರವೂ ಸ್ಥಗಿತಗೊಂಡಿರುವುದರಿಂದ ಅಲ್ಲಿ ಸಿಲುಕಿರುವವರು ಪೋಲೆಂಡ್ ಗಡಿ ಪ್ರದೇಶಕ್ಕೆ ಬರುವುದು ಇನ್ನು ಬಹಳ ಕಷ್ಟ ಎಂದು ಸಂಜಯ ಹೇಳುತ್ತಾರೆ.

ಭಯಾನಕ ಯುದ್ಧ ನಡೆಯುತ್ತಿರುವ ಉಕ್ರೇನಿನ ಖಾರ್ಕಿವ್ ನಗರದಿಂದ ಭಾರತಕ್ಕೆ ವಾಪಸ್ಸು ಬಂದಿರುವ ದಾವಣಗೆರೆಯ ಸಂಜಯ (Davanagere Sanjay) ಅವರು ತಾನು ಸುರಕ್ಷಿತವಾಗಿ ವಾಪಸ್ಸು ಬಂದಿದ್ದು ಅದೃಷ್ಟವೆಂದು ಹೇಳುತ್ತಾರೆ. ನಿನ್ನೆಯವರೆಗೆ (ಗುರುವಾರ) ಖಾರ್ಕಿವ್ ನಲ್ಲಿ (Kharkiv) ನಡೆಯುತ್ತಿದ್ದ ರೈಲು ಸಂಚಾರ (train travel) ಇವತ್ತಿನಿಂದ ನಿಲ್ಲಿಸಲಾಗಿದೆಯಂತೆ. ರೈಲಿನಲ್ಲೂ ಕೇವಲ ಉಕ್ರೇನಿನ ಜನ ಮತ್ತು ಬೇರೆ ದೇಶಗಳ ಮಹಿಳೆಯರನ್ನು ಮಾತ್ರ ಅವಕಾಶ ಕಲ್ಪಿಸಿದ್ದರಿಂದ ಬಹಳಷ್ಟು ಜನ ದಾರಿಕಾಣದೆ 17 ಕಿಮೀ ದೂರ ನಡೆದು ಬೇರೆ ನಗರ ತಲುಪಿದ್ದಾರೆ ಅಂತ ಸಂಜಯ ದೆಹಲಿಯಲ್ಲಿರುವ ಟಿವಿ9 ವರದಿಗಾರನಿಗೆ ತಿಳಿಸಿದರು. ರೇಲ್ವೆ ಸ್ಟೇಶನ್ ಗಳಲ್ಲಿ ಪೋಲೀಸರು ಗನ್ ಗಳನ್ನು ಹಿಡಿದು ನಿಂತಿದ್ದಾರೆ ಮತ್ತು ಕೇವಲ ಸ್ಥಳೀಯರನ್ನು ಮತ್ತು ಮಹಿಳೆಯರನ್ನು ಮಾತ್ರ ಒಳಗೆ ಬಿಡುತ್ತಿದ್ದಾರೆ ಎಂದು ಅವರು ಹೇಳಿದರು.

ಅಂದಹಾಗೆ ಸಂಜಯ ಮತ್ತು ನಾಲ್ಕು ದಿನಗಳ ಹಿಂದೆ ಮೃತಪಟ್ಟ ನವೀನ್ ಶೇಖರಪ್ಪ ಗ್ಯಾನಗೌಡರ್ ಸ್ನೇಹಿತರು.

ಖಾರ್ಕಿವ್ ಒಂದು ಯುದ್ಧವಲಯವಾಗಿದ್ದು ಇಂದಿನಿಂದ (ಶುಕ್ರವಾರ) ರೈಲು ಸಂಚಾರವೂ ಸ್ಥಗಿತಗೊಂಡಿರುವುದರಿಂದ ಅಲ್ಲಿ ಸಿಲುಕಿರುವವರು ಪೋಲೆಂಡ್ ಗಡಿ ಪ್ರದೇಶಕ್ಕೆ ಬರುವುದು ಇನ್ನು ಬಹಳ ಕಷ್ಟ ಎಂದು ಸಂಜಯ ಹೇಳುತ್ತಾರೆ. ಅವರನ್ನು ಕೇವಲ ರಷ್ಯಾದ ಮೂಲಕ ಭಾರತಕ್ಕೆ ಕರೆತರುವುದು ಸಾಧ್ಯ ಎಂದು ಹೇಳುವ ಅವರು ತಾನು ಒಂದು ದಿನ ಮೊದಲು ಹೊರಟಿದ್ದಕ್ಕೆ ಸ್ವದೇಶ ತಲುಪುವುದು ಸಾಧ್ಯವಾಯಿತು ಇಲ್ಲದಿದ್ದರೆ ಅಲ್ಲಿ ಸಿಲುಕಬೇಕಾಗುತಿತ್ತು ಎಂದರು.

ಖಾರ್ಕಿವ್ ನಗರದಲ್ಲಿ ಇನ್ನೂ ಸಿಲುಕಿರುವ ಭಾರತೀಯರು ಅಲ್ಲಿಂದ ಆಚೆ ಬರಬೇಕಾದರೆ ರಷ್ಯನ್ ಸೇನೆಯ ಮೊರೆ ಹೋಗಬೇಕು ಎಂದು ಸಂಜಯ ಹೇಳುತ್ತಾರೆ. ನಗರದಲ್ಲಿ ಯಾವುದೇ ಬಗೆಯ ಸಾರಿಗೆ ವ್ಯವಸ್ಥೆ ಇಲ್ಲ, ಹಾಗಾಗಿ ರಷ್ಯನ್ ಸೇನೆಯ ಸಹಾಯದಿಂದ ಆ ದೇಶಕ್ಕೆ ಹೋಗಿ ಭಾರತಕ್ಕೆ ಬರಬೇಕು ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: Russia- Ukrain Crisis: ಬ್ರಿಕ್ಸ್​ನ ನ್ಯೂ ಡೆವಲಪ್​ಮೆಂಟ್​ ಬ್ಯಾಂಕ್​ನಿಂದ ರಷ್ಯಾದಲ್ಲಿ ಎಲ್ಲ ಹೊಸ ವಹಿವಾಟುಗಳ ಸ್ಥಗಿತ