Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನನಗೆ ನೀಡಿದ್ದ ಗನ್​ಮ್ಯಾನ್​ ಹಿಂಪಡೆಯಲಾಗಿದೆ’; ನಟ ಚೇತನ್​ ಅಸಮಾಧಾನ

‘ನನಗೆ ನೀಡಿದ್ದ ಗನ್​ಮ್ಯಾನ್​ ಹಿಂಪಡೆಯಲಾಗಿದೆ’; ನಟ ಚೇತನ್​ ಅಸಮಾಧಾನ

TV9 Web
| Updated By: ರಾಜೇಶ್ ದುಗ್ಗುಮನೆ

Updated on:Mar 04, 2022 | 7:36 PM

ನ್ಯಾಯಾಂಗ ಬಂಧನದ ಬಳಿಕ ಅವರಿಗೆ ನೀಡಲಾಗಿದ್ದ ಗನ್​ಮ್ಯಾನ್ ವಾಪಸ್ ಪಡೆಯಲಾಗಿದೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್​ ಪಂತ್​ ಅವರನ್ನು ಚೇತನ್ ಭೇಟಿ ಆಗಿದ್ದಾರೆ.

ವಿವಾದಾತ್ಮಕ ಟ್ವೀಟ್​ ಹಿನ್ನೆಲೆಯಲ್ಲಿ ನಟ ಚೇತನ್​ (Actor Chetan) ಅವರನ್ನು ಬಂಧಿಸಿ, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಈಗ ಅವರು ಜಾಮೀನು ಪಡೆದು ಬಿಡುಗಡೆ ಹೊಂದಿದ್ದಾರೆ. ನ್ಯಾಯಾಂಗ ಬಂಧನದ ಬಳಿಕ ಅವರಿಗೆ ನೀಡಲಾಗಿದ್ದ ಗನ್​ಮ್ಯಾನ್ ವಾಪಸ್ ಪಡೆಯಲಾಗಿದೆ. ಈ ಹಿನ್ನೆಲೆಯಲ್ಲಿ ನಗರ ಪೊಲೀಸ್ ಆಯುಕ್ತ ಕಮಲ್​ ಪಂತ್​ ಅವರನ್ನು ಚೇತನ್ ಭೇಟಿ ಆಗಿದ್ದಾರೆ. ಆ ಬಳಿಕ ಮಾತನಾಡಿದ ಚೇತನ್, ‘ಗೌರಿ ಲಂಕೇಶ್ ಹತ್ಯೆಯ ಬಳಿಕ ನನಗೆ ಗನ್ ಮ್ಯಾನ್ ನೀಡಲಾಗಿತ್ತು. ಆದರೆ, ಈಗ ಅದನ್ನು ಹಿಂಪಡೆಯಲಾಗಿದೆ. ಮೊದಲಿನಿಂದಲೂ ನನಗೆ ಜೀವ ಬೆದರಿಕೆಯಿದೆ. ಗನ್ ಮ್ಯಾನ್ ನೀಡುವಂತೆ ಮನವಿ ಮಾಡಿದ್ದೇನೆ. ಮನೆ ಬಳಿ ಬೀಟ್ ವ್ಯವಸ್ಥೆ ಹೆಚ್ಚಿಸುವುದಾಗಿ ಭರವಸೆ ನೀಡಿದ್ದಾರೆ. ನನ್ನ ಒಸಿಐ (Overseas Citizen Of India) ರದ್ದುಪಡಿಸುವ ಬಗ್ಗೆ ಕೆಲ ಮಾಧ್ಯಮಗಳಲ್ಲಿ ವರದಿಯಾಗಿದೆ. ನಾನೂ ಭಾರತೀಯ, ಕನ್ನಡಿಗನೇ. ಯಾವುದೇ ರೀತಿಯಲ್ಲೂ ಒಸಿಐ ನಿಯಮ ಉಲ್ಲಂಘಿಸಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ:  ಜಾಮೀನು ಸಿಕ್ಕರೂ ನಟ ಚೇತನ್​ಗೆ ಇಲ್ಲ ಬಿಡುಗಡೆ ಭಾಗ್ಯ! ಕಾರಣವಿಷ್ಟೆ

Actor Chetan: ನಟ ಚೇತನ್​ಗೆ ಜಾಮೀನು; ಆಕ್ಷೇಪಾರ್ಹ ಟ್ವೀಟ್​ ಪ್ರಕರಣದಲ್ಲಿ ರಿಲೀಫ್​

Published on: Mar 04, 2022 07:31 PM