Actor Chetan: ನಟ ಚೇತನ್​ಗೆ ಜಾಮೀನು; ಆಕ್ಷೇಪಾರ್ಹ ಟ್ವೀಟ್​ ಪ್ರಕರಣದಲ್ಲಿ ರಿಲೀಫ್​

32 ನೇ ಎಸಿಎಂಎಂ ನ್ಯಾಯಾಲಯದಿಂದ ಚೇತನ್​ಗೆ ಜಾಮೀನು ಸಿಕ್ಕಿದೆ. ಕೆಲ ಷರತ್ತುಗಳನ್ನು ಹಾಕಿ ಜಾಮೀನು ನೀಡಲಾಗಿದೆ. ಇದರಿಂದ ನಟನಿಗೆ ಕೊಂಚ ರಿಲೀಫ್​ ಆಗಿದೆ.

Actor Chetan: ನಟ ಚೇತನ್​ಗೆ ಜಾಮೀನು; ಆಕ್ಷೇಪಾರ್ಹ ಟ್ವೀಟ್​ ಪ್ರಕರಣದಲ್ಲಿ ರಿಲೀಫ್​
ಚೇತನ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Feb 25, 2022 | 6:40 PM

ಸದಾ ವಿವಾದದ ಮೂಲಕ ಸುದ್ದಿಯಾಗುವ ನಟ ಚೇತನ್​ (Actor Chetan) ಅವರು ಆಕ್ಷೇಪಾರ್ಹ ಟ್ವೀಟ್​ ಮಾಡಿ ಇಕ್ಕಟ್ಟಿಗೆ ಸಿಲುಕಿದ್ದರು. ಮಂಗಳವಾರ (ಫೆಬ್ರವರಿ 22) ಅವರನ್ನು ಬಂಧಿಸಿ, ಬುಧವಾರ (ಫೆಬ್ರವರಿ 23) 8ನೇ ಎಸಿಎಂಎಂ ಕೋರ್ಟ್‌ (ACMM Court) ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್​ ಆದೇಶ ಹೊರಡಿಸಿತ್ತು. ಈಗ 32 ನೇ ಎಸಿಎಂಎಂ ನ್ಯಾಯಾಲಯದಿಂದ ಚೇತನ್​ಗೆ ಜಾಮೀನು ಸಿಕ್ಕಿದೆ. ಕೆಲ ಷರತ್ತುಗಳನ್ನು ಹಾಕಿ ಜಾಮೀನು ನೀಡಲಾಗಿದೆ. ಇದರಿಂದ ನಟನಿಗೆ ಕೊಂಚ ರಿಲೀಫ್​ ಆಗಿದೆ.

ಚೇತನ್​ಗೆ ಜಾಮೀನು ನೀಡಲು ಕೆಲ ಷರತ್ತುಗಳನ್ನು ಹಾಕಲಾಗಿದೆ. ಒಂದು ಲಕ್ಷ ರೂ. ಬಾಂಡ್ ಕೊಡಬೇಕು. ಇಬ್ಬರ ಶ್ಯೂರಿಟಿ ಹಾಕಬೇಕು. ಪೊಲೀಸರು ನಡೆಸುವ ತನಿಖೆಗೆ ಸಹಕರಿಸಬೇಕು ಎಂಬುದು ಷರತ್ತಿನಲ್ಲಿದೆ. ಇತ್ತೀಚೆಗೆ ಹಿಜಾಬ್​ ವಿವಾದ ಸಾಕಷ್ಟು ಸುದ್ದಿಯಾಗಿತ್ತು. ​ಫೆಬ್ರವರಿ 16ರಂದು ಟ್ವೀಟ್​ ಮಾಡಿದ್ದ ಚೇತನ್, ಅದರಲ್ಲಿ ಹಿಜಾಬ್​ ವಿಚಾರವನ್ನು ಪ್ರಸ್ತಾಪಿಸಿದ್ದರು. ಅಲ್ಲದೆ, ಹೈಕೋರ್ಟ್​ ಜಡ್ಜ್​​ ಒಬ್ಬರ ವಿರುದ್ಧ ಅಕ್ಷೇಪಾರ್ಹ ವ್ಯಾಖ್ಯಾನ ಮಾಡಿದ್ದರು. ಇದರ ವಿರುದ್ಧ ಶೇಷಾದ್ರಿಪುರಂ ಪೊಲೀಸರು ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡಿದ್ದರು.

ಚೇತನ್​ಗೆ ನ್ಯಾಯಾಂಗ ಬಂಧನ ವಿಧಿಸಿದ ನಂತರದಲ್ಲಿ ಮಾತನಾಡಿದ್ದ ಅವರ ಪತ್ನಿ ಮೇಘಾ, ‘ಚೇತನ್​ ತುಂಬ ಚೆನ್ನಾಗಿ ಇದ್ದಾರೆ. ಯಾರೂ ಚಿಂತೆ ಮಾಡಬೇಡಿ. ಅವರು ಧೈರ್ಯವಾಗಿದ್ದಾರೆ. ಈ ಘಟನೆಯಿಂದ ಅವರಿಗೆ ಏನೂ ತೊಂದರೆ ಆಗುವುದಿಲ್ಲ. ಅವರು ಆತಂಕಕ್ಕೆ ಒಳಗಾಗಿಲ್ಲ. ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಜನರು ನನಗೆ ಕರೆ ಮಾಡುತ್ತಿದ್ದಾರೆ. ಎಲ್ಲರೂ ಬೆಂಬಲ ನೀಡುತ್ತಿದ್ದಾರೆ. ನಮ್ಮ ವಕೀಲರ ತಂಡ ಇದೆ. ಎಲ್ಲರೂ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ನಾವು ಕಾನೂನಿನ ಮೂಲಕ ಹೋರಾಟ ಮಾಡುತ್ತೇವೆ’ ಎಂದಿದ್ದರು.

ಸಿನಿಮಾ ಹೊರತಾಗಿ ಹಲವು ಕಾರಣಗಳಿಂದಾಗಿ ಚೇತನ್​ ಸುದ್ದಿಯಲ್ಲಿ ಇರುತ್ತಾರೆ. ತಮ್ಮ ಸಿದ್ಧಾಂತದ ಕಾರಣದಿಂದ ಅವರು ಕೆಲವರ ವಿರೋಧ ಕಟ್ಟಿಕೊಂಡಿದ್ದಾರೆ. ಈಗ ಜಾಮೀನು ದೊರೆತಿರುವುದರಿಂದ ಅವರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ.

 ಇದನ್ನೂ ಓದಿ: Chetan kumar: ‘ಆ ದಿನಗಳು’ ಖ್ಯಾತಿಯ ನಟ ಚೇತನ್‌ಗೆ 14 ದಿನ ನ್ಯಾಯಾಂಗ ಬಂಧನ 

‘ಚೇತನ್​ ಬಗ್ಗೆ ಚಿಂತೆ ಬೇಡ, ಸ್ಟ್ರಾಂಗ್​​ ಆಗಿದ್ದಾರೆ’; ನ್ಯಾಯಾಂಗ ಬಂಧನ ಕುರಿತು ನಟನ ಪತ್ನಿ ಪ್ರತಿಕ್ರಿಯೆ

Published On - 6:29 pm, Fri, 25 February 22

ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು