ಹೊಸಪೇಟೆಯಲ್ಲಿ ‘ಜೇಮ್ಸ್’ ಪ್ರೀ-ರಿಲೀಸ್ ಕಾರ್ಯಕ್ರಮ; ಹಾಜರಿ ಹಾಕಲಿದ್ದಾರೆ ಟಾಲಿವುಡ್ ದಿಗ್ಗಜರು?
ಪುನೀತ್ ನಿಧನ ಹೊಂದಿದಾಗ ಅನೇಕ ಸ್ಟಾರ್ಗಳು ಬೆಂಗಳೂರಿಗೆ ಬಂದು ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಈಗ ‘ಜೇಮ್ಸ್’ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಈ ಸ್ಟಾರ್ಗಳು ಆಗಮಿಸುವ ಮೂಲಕ ಪುನೀತ್ಗೆ ವಿಶೇಷವಾಗಿ ಗೌರವ ಸಲ್ಲಿಕೆ ಮಾಡುತ್ತಿದ್ದಾರೆ.
ಪುನೀತ್ ರಾಜ್ಕುಮಾರ್ (Puneeth Rajkumar) ನಟನೆಯ ‘ಜೇಮ್ಸ್’ ಚಿತ್ರದ (James Movie) ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಈ ಸಿನಿಮಾ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಕಾದು ಕೂತಿದ್ದಾರೆ. ಈಗ ಚಿತ್ರತಂಡ ಮಾರ್ಚ್ 6ರಂದು ಹೊಸಪೇಟೆಯಲ್ಲಿ ಭರ್ಜರಿ ಪ್ರೀ-ರಿಲೀಸ್ ಇವೆಂಟ್ ನಡೆಸಲು ನಿರ್ಧರಿಸಿದೆ. ಈ ಕಾರ್ಯಕ್ರಮಕ್ಕೆ ಜ್ಯೂ.ಎನ್ಟಿಆರ್ (Jr. Ntr) ಹಾಗೂ ಚಿರಂಜೀವಿ ಅತಿಥಿಗಳಾಗಿ ಆಗಮಿಸಲಿದ್ದಾರೆ ಎನ್ನಲಾಗುತ್ತಿದೆ. ರಾಜ್ಕುಮಾರ್ ಕುಟುಂಬಕ್ಕೂ ಟಾಲಿವುಡ್ಗೂ ಒಳ್ಳೆಯ ನಂಟಿದೆ. ಅಲ್ಲಿನ ಸ್ಟಾರ್ ನಟರು ಬೆಂಗಳೂರಿಗೆ ಬಂದಾಗ ರಾಜ್ ಕುಟುಂಬದವರನ್ನು ಭೇಟಿ ಮಾಡುತ್ತಾರೆ. ಪುನೀತ್ ನಿಧನ ಹೊಂದಿದಾಗ ಅನೇಕ ಸ್ಟಾರ್ಗಳು ಬೆಂಗಳೂರಿಗೆ ಬಂದು ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಈಗ ‘ಜೇಮ್ಸ್’ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಈ ಸ್ಟಾರ್ಗಳು ಆಗಮಿಸುವ ಮೂಲಕ ಪುನೀತ್ಗೆ ವಿಶೇಷವಾಗಿ ಗೌರವ ಸಲ್ಲಿಕೆ ಮಾಡುತ್ತಿದ್ದಾರೆ.
ಇದನ್ನೂ ಓದಿ: Puneeth Rajkumar: ‘ಜೇಮ್ಸ್’ ಚಿತ್ರದಲ್ಲಿ ಪುನೀತ್ ಸಖತ್ ಮಾಸ್ ಆ್ಯಂಡ್ ಕ್ಲಾಸ್; ಇಲ್ಲಿವೆ ಫೋಟೋಗಳು
ರಿಲೀಸ್ಗೂ ಮೊದಲೇ ಥಿಯೇಟರ್ನಲ್ಲಿ ಸದ್ದು ಮಾಡುತ್ತಿದೆ ಪುನೀತ್ ನಟನೆಯ ‘ಜೇಮ್ಸ್’ ಚಿತ್ರ