ರಿಲೀಸ್​ಗೂ ಮೊದಲೇ ಥಿಯೇಟರ್​ನಲ್ಲಿ ಸದ್ದು ಮಾಡುತ್ತಿದೆ ಪುನೀತ್​ ನಟನೆಯ ‘ಜೇಮ್ಸ್​’ ಚಿತ್ರ 

TV9kannada Web Team

TV9kannada Web Team | Edited By: Rajesh Duggumane

Updated on: Feb 11, 2022 | 9:18 PM

ಚಿತ್ರಮಂದಿರದವರು ಪುನೀತ್​ಗೆ ವಿಶೇಷ ಗೌರವ ಸಲ್ಲಿಕೆ ಮಾಡುತ್ತಿದ್ದಾರೆ. ಚಿತ್ರಮಂದಿರದವರು ಸ್ವ ಇಚ್ಛೆಯಿಂದ ಟೀಸರ್ ಪ್ರಸಾರ ಮಾಡುತ್ತಿದ್ದಾರೆ. ಈ ಬಗ್ಗೆ ಚಿತ್ರದ ನಿರ್ದೇಶಕ ಚೇತನ್​ ಕುಮಾರ್ ಮಾತನಾಡಿದ್ದಾರೆ.

ಪುನೀತ್​ ರಾಜ್​ಕುಮಾರ್ ಇಲ್ಲ ಎಂಬ ನೋವಿನಲ್ಲೇ ‘ಜೇಮ್ಸ್​’ ಚಿತ್ರದ ಟೀಸರ್​ಅನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ. ಪ್ರತಿ ದೃಶ್ಯಗಳಲ್ಲೂ ಅವರನ್ನು ನೆನಪುಮಾಡಿಕೊಳ್ಳಲಾಗುತ್ತಿದೆ. ಈ ಚಿತ್ರದ ಟೀಸರ್​ಅನ್ನು ನೋಡೋಕೆ ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ. ಹೀಗಾಗಿ, ಟೀಸರ್​ 7 ಗಂಟೆಗಳಲ್ಲಿ 40 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಪರಭಾಷೆಗಳಲ್ಲೂ ಟೀಸರ್ ರಿಲೀಸ್​ ಆಗಿದ್ದು ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ಈ ಟೀಸರ್​ಅನ್ನು ನೋಡಿ ನಿಜಕ್ಕೂ ಸಂಭ್ರಮಿಸುತ್ತಿದ್ದಾರೆ. ಹೀಗಾಗಿ, ಯೂಟ್ಯೂಬ್​ನಲ್ಲಿ ಈ ಟೀಸರ್​ ಟ್ರೆಂಡಿಂಗ್​ನಲ್ಲಿ ನಂಬರ್​ 1 ಇದೆ. ಚಿತ್ರಮಂದಿರದವರು ಪುನೀತ್​ಗೆ ವಿಶೇಷ ಗೌರವ ಸಲ್ಲಿಕೆ ಮಾಡುತ್ತಿದ್ದಾರೆ. ಚಿತ್ರಮಂದಿರದವರು ಸ್ವ ಇಚ್ಛೆಯಿಂದ ಟೀಸರ್ ಪ್ರಸಾರ ಮಾಡುತ್ತಿದ್ದಾರೆ. ಈ ಬಗ್ಗೆ ಚಿತ್ರದ ನಿರ್ದೇಶಕ ಚೇತನ್​ ಕುಮಾರ್ ಮಾತನಾಡಿದ್ದಾರೆ.

ಇದನ್ನೂ ಓದಿ: ‘ಜೇಮ್ಸ್​ ಚಿತ್ರವನ್ನು ನಾನು ಪ್ರಚಾರ ಮಾಡಿದ್ರೆ ತುಂಬಾ ಚೀಪ್​ ಆಗತ್ತೆ, ಅದನ್ನು ಅಭಿಮಾನಿಗಳು ನೋಡಿಕೊಳ್ತಾರೆ’

ದಾಖಲೆಯ ವೀಕ್ಷಣೆ ಕಾಣುತ್ತಿದೆ ‘ಜೇಮ್ಸ್​’ ಟೀಸರ್​; ನಂಬರ್ 1 ಟ್ರೆಂಡಿಂಗ್​ನಲ್ಲಿ ಅಪ್ಪು ಸಿನಿಮಾ

 

 

 

Follow us on

Click on your DTH Provider to Add TV9 Kannada