AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಾಖಲೆಯ ವೀಕ್ಷಣೆ ಕಾಣುತ್ತಿದೆ ‘ಜೇಮ್ಸ್​’ ಟೀಸರ್​; ನಂಬರ್ 1 ಟ್ರೆಂಡಿಂಗ್​ನಲ್ಲಿ ಅಪ್ಪು ಸಿನಿಮಾ

ಇಂದು (ಫೆಬ್ರವರಿ 11) ಬೆಳಗ್ಗೆ 11 ಗಂಟೆ 11 ನಿಮಿಷಕ್ಕೆ ‘ಜೇಮ್ಸ್​’ ಚಿತ್ರದ ಟೀಸರ್​ ರಿಲೀಸ್​ ಆಯಿತು. ‘ಪಿಆರ್​ಕೆ ಆಡಿಯೋ’ದಲ್ಲಿ ಚಿತ್ರದ ಟೀಸರ್​ ರಿಲೀಸ್​ ಆಗಿದ್ದು, ಅಭಿಮಾನಿಗಳು ಪುನೀತ್​ ಅವರನ್ನು ಕಣ್ತುಂಬಿಕೊಳ್ಳೋಕೆ ಮುಗಿಬೀಳುತ್ತಿದ್ದಾರೆ.

ದಾಖಲೆಯ ವೀಕ್ಷಣೆ ಕಾಣುತ್ತಿದೆ ‘ಜೇಮ್ಸ್​’ ಟೀಸರ್​; ನಂಬರ್ 1 ಟ್ರೆಂಡಿಂಗ್​ನಲ್ಲಿ ಅಪ್ಪು ಸಿನಿಮಾ
ಪುನೀತ್
TV9 Web
| Edited By: |

Updated on:Feb 11, 2022 | 7:30 PM

Share

ಪುನೀತ್​ ರಾಜ್​ಕುಮಾರ್ (Puneeth Rajkumar) ಇಲ್ಲ ಎಂಬ ನೋವಿನಲ್ಲೇ ‘ಜೇಮ್ಸ್​’ ಚಿತ್ರದ ಟೀಸರ್​ಅನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ. ಪ್ರತಿ ದೃಶ್ಯಗಳಲ್ಲೂ ಅವರನ್ನು ನೆನಪುಮಾಡಿಕೊಳ್ಳಲಾಗುತ್ತಿದೆ. ಸೋಶಿಯಲ್​ ಮೀಡಿಯಾದಲ್ಲಿ ‘ಜೇಮ್ಸ್​’ ಟೀಸರ್​ನ (James Teaser) ಸ್ಕ್ರೀನ್​ಶಾಟ್​ಗಳನ್ನು ಹಂಚಿಕೊಳ್ಳಲಾಗುತ್ತಿದೆ. ಈ ಚಿತ್ರದ ಟೀಸರ್​ಅನ್ನು ನೋಡೋಕೆ ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ. ಹೀಗಾಗಿ, ಟೀಸರ್​ 7 ಗಂಟೆಗಳಲ್ಲಿ 40 ಲಕ್ಷಕ್ಕೂ ಅಧಿಕ ವೀಕ್ಷಣೆ ಕಂಡಿದೆ. ಪರಭಾಷೆಗಳಲ್ಲೂ ಟೀಸರ್ ರಿಲೀಸ್​ ಆಗಿದ್ದು ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳು ಈ ಟೀಸರ್​ಅನ್ನು ನೋಡಿ ನಿಜಕ್ಕೂ ಸಂಭ್ರಮಿಸುತ್ತಿದ್ದಾರೆ. ಹೀಗಾಗಿ, ಯೂಟ್ಯೂಬ್​ನಲ್ಲಿ (YouTube)  ಈ ಟೀಸರ್​ ಟ್ರೆಂಡಿಂಗ್​ನಲ್ಲಿ ನಂಬರ್​ 1 ಇದೆ.

ಇಂದು (ಫೆಬ್ರವರಿ 11) ಬೆಳಗ್ಗೆ 11 ಗಂಟೆ 11 ನಿಮಿಷಕ್ಕೆ ‘ಜೇಮ್ಸ್​’ ಚಿತ್ರದ ಟೀಸರ್​ ರಿಲೀಸ್​ ಆಯಿತು. ‘ಪಿಆರ್​ಕೆ ಆಡಿಯೋ’ದಲ್ಲಿ ಚಿತ್ರದ ಟೀಸರ್​ ರಿಲೀಸ್​ ಆಗಿದ್ದು, ಅಭಿಮಾನಿಗಳು ಪುನೀತ್​ ಅವರನ್ನು ಕಣ್ತುಂಬಿಕೊಳ್ಳೋಕೆ ಮುಗಿಬೀಳುತ್ತಿದ್ದಾರೆ. ಈ ಮೊದಲು ಸಿನಿಮಾದ ಹಲವು ಪೋಸ್ಟರ್​ಗಳು ರಿಲೀಸ್​ ಆಗಿ ಧೂಳೆಬ್ಬಿಸಿದೆ. ಆದರೆ, ಚಿತ್ರತಂಡದ ಕಡೆಯಿಂದ ಯಾವುದೇ ಟೀಸರ್​ ರಿಲೀಸ್​ ಆಗಿರಲಿಲ್ಲ. ಇಂದು ಟೀಸರ್​ ರಿಲೀಸ್​ ಮಾಡಿರುವ ಚಿತ್ರತಂಡ, ಅಭಿಮಾನಿಗಳಿಗೆ ಖುಷಿ ನೀಡಿದೆ.

ಸಂಜೆ 6 ಗಂಟೆ ಸುಮಾರಿಗೆ ಈ ಟೀಸರ್​ 4 ಮಿಲಿಯನ್​ ವೀಕ್ಷಣೆ ಕಂಡಿದೆ. ಸುಮಾರು 58 ಸಾವಿರಕ್ಕೂ ಅಧಿಕ ಕಮೆಂಟ್​ಗಳು ಈ ಟೀಸರ್​ಗೆ ಬಂದಿವೆ. 4.35 ಲಕ್ಷ ಲೈಕ್ಸ್​ ಗಿಟ್ಟಿಸಿಕೊಂಡಿದೆ. ‘ಜೇಮ್ಸ್ ಟೀಸರ್ ಇತಿಹಾಸ ಸೃಷ್ಟಿಸಬೇಕು’ ಎಂದು ಕೆಲವರು ಬರೆದುಕೊಂಡಿದ್ದಾರೆ. ‘ಒಂದಾನೊಂದು ಊರಲ್ಲಿ ಒಬ್ಬ ರಾಜನಿದ್ದ , ಯುದ್ಧವಿಲ್ಲದೆ ರಾಜ್ಯವನ್ನು ಗೆದ್ದಿದ್ದ’ ಎಂದು ಕೆಲವರು ಕಮೆಂಟ್​ ಮಾಡಿದ್ದಾರೆ.

ಪುನೀತ್ ‘ಜೇಮ್ಸ್​’ ಸಿನಿಮಾದ ಡಬ್ಬಿಂಗ್​ ಕೆಲಸ ಮಾಡಿರಲಿಲ್ಲ. ಹೀಗಾಗಿ, ಈ ಕೆಲಸವನ್ನು ಅವರ ಸಹೋದರ ಶಿವರಾಜ್​ಕುಮಾರ್ ಮಾಡಿದ್ದಾರೆ. ‘ನನಗೆ ರೆಕಾರ್ಡ್​ ಬ್ರೇಕ್​ ಮಾಡಿಯೇ’ ಅಭ್ಯಾಸ ಎನ್ನುವ ಡೈಲಾಗ್​ ಪ್ರೇಕ್ಷಕರಿಗೆ ಖುಷಿ ನೀಡಿದೆ. ಇಂತಹ ಹಲವು ಡೈಲಾಗ್​ಗಳು ಸಿನಿಮಾದಲ್ಲಿದೆ ಎನ್ನಲಾಗಿದೆ. ಈ ಡೈಲಾಗ್​ಗಳಿಗೆ ಚಿತ್ರಮಂದಿರಗಳಲ್ಲಿ ಸಿಳ್ಳೆ ಬೀಳೋದು ಪಕ್ಕಾ. ಟೀಸರ್​ನಲ್ಲಿ ಚಿತ್ರದ ರಿಲೀಸ್​ ದಿನಾಂಕವನ್ನೂ ಉಲ್ಲೇಖ ಮಾಡಲಾಗಿದೆ. ಮಾರ್ಚ್​ 17ರಂದು ಈ ಸಿನಿಮಾ ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ.

ಟೀಸರ್​ ನೋಡಿ ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳು  ಫಿದಾ ಆಗಿದ್ದಾರೆ. ಎಲ್ಲರಿಂದಲೂ ಪಾಸಿಟಿವ್​ ಪ್ರತಿಕ್ರಿಯೆ ಸಿಗುತ್ತಿದೆ. ಈ ಮೂಲಕ ‘ಜೇಮ್ಸ್​’ ಸಿನಿಮಾ ಮೇಲಿದ್ದ ನಿರೀಕ್ಷೆ ದುಪ್ಪಟ್ಟಾಗಿದೆ. ‘ಪರಭಾಷೆಯ ಯಾವ ಚಿತ್ರಕ್ಕೂ ಜೇಮ್ಸ್​ ಸಿನಿಮಾ ಟೀಸರ್​ ಕಮ್ಮಿ ಇಲ್ಲ. ಅಪ್ಪು ಅವರು ತುಂಬ ಯಂಗ್​ ಆಗಿ ಕಾಣಿಸುತ್ತಿದ್ದಾರೆ. ಈ ರೀತಿ ಕ್ವಾಲಿಟಿ ಸಿನಿಮಾ ನೀಡಿದರೆ ನಾವು ಹಿಂದೆಂದಿಗಿಂತಲೂ ಭರ್ಜರಿಯಾಗಿ ಸೆಲೆಬ್ರೇಟ್​ ಮಾಡುತ್ತೇವೆ’ ಎಂದು ಅಭಿಮಾನಿಗಳು ಹಾಡಿ ಹೊಗಳಿದ್ದಾರೆ. ‘ಪುನೀತ್​ ರಾಜ್​ಕುಮಾರ್​ ಅವರು ನಮಗೆ ಸ್ಫೂರ್ತಿ. ಜೇಮ್ಸ್​ ಎಷ್ಟು ದಿನ ಪ್ರದರ್ಶನ ಕಾಣಲಿದೆಯೋ ಅಷ್ಟು ದಿನಗಳ ಕಾಲ ಚಿತ್ರಮಂದಿರದ ಎದುರು ಅನ್ನದಾನ, ನೇತ್ರದಾನ ಮುಂತಾದ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ’ ಎಂದಿದ್ದಾರೆ ಅಪ್ಪು ಫ್ಯಾನ್ಸ್​.

ಇದನ್ನೂ ಓದಿ: ‘ಜೇಮ್ಸ್​ ಚಿತ್ರವನ್ನು ನಾನು ಪ್ರಚಾರ ಮಾಡಿದ್ರೆ ತುಂಬಾ ಚೀಪ್​ ಆಗತ್ತೆ, ಅದನ್ನು ಅಭಿಮಾನಿಗಳು ನೋಡಿಕೊಳ್ತಾರೆ’ ಪಾಟರಿಟೌನ್ ಮೆಟ್ರೊ ನಿಲ್ದಾಣಕ್ಕೆ ಪುನೀತ್ ರಾಜ್​ಕುಮಾರ್ ಹೆಸರು ಇರಿಸಲು ಮನವಿ: ಪ್ರಧಾನಿ ಕಚೇರಿ ಸ್ಪಂದನೆ

Published On - 7:06 pm, Fri, 11 February 22

ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ಉಚ್ಛಾಟಿತ ಶಾಸಕ ಯತ್ನಾಳ್​ ಸಂಪರ್ಕದಲ್ಲಿದ್ಯಾ BJP ಹೈಕಮಾಂಡ್​?
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
ತಮ್ಮ ಬಟ್ಟೆ ಬಗ್ಗೆ ಅಶ್ಲೀಲ ಕಾಮೆಂಟ್​ ಮಾಡಿದವರಿಗೆ ತಿರುಗೇಟು ಕೊಟ್ಟ ಶಾಸಕಿ
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
'ಐದನೇ ಒಂದು ಭಾಗದಷ್ಟು ನಿಧಿ ಕುಟುಂಬಕ್ಕೆ ಕೊಡ್ತೀವಿ'
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ಅರ್ಧ ಕೆಜಿ ಚಿನ್ನ ಸರ್ಕಾರಕ್ಕೆ ಕೊಟ್ಟಾಕೆಗೆ ಇರಲು ಮನೆಯೂ ಇಲ್ಲ: ಸಹೋದರ ಅಳಲು
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!
ತಮಿಳು ಮಾತನಾಡಿದ ರಾಹುಲ್: ಪಂದ್ಯದ ನಡುವೆ 'ರಾಷ್ಟ್ರಭಾಷೆ'ಯ ಚರ್ಚೆ!