ಮತ್ತೊಬ್ಬ ರೇಲ್ವೇಸ್ ಉದ್ಯೋಗಿಯಿಂದ ಪ್ರಾಣಾಪಾಯದಲ್ಲಿದ್ದ ಪ್ರಯಾಣಿಕ ಬದುಕುಳಿದ, ಈ ಬಾರಿಯ ಘಟನೆ ಕಲಬುರಗಿಯಲ್ಲಿ

ಮತ್ತೊಬ್ಬ ರೇಲ್ವೇಸ್ ಉದ್ಯೋಗಿಯಿಂದ ಪ್ರಾಣಾಪಾಯದಲ್ಲಿದ್ದ ಪ್ರಯಾಣಿಕ ಬದುಕುಳಿದ, ಈ ಬಾರಿಯ ಘಟನೆ ಕಲಬುರಗಿಯಲ್ಲಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 25, 2022 | 11:18 PM

ಅಲ್ಲೇ ಕರ್ತವ್ಯ ಮೇಲಿದ್ದ ಪ್ರವೀಣ್ ಕೂಡಲೇ ಸಹಾಯಕ್ಕಾಗಿ ಧಾವಿಸಿ ಅವರನ್ನು ದೂರ ಎಳೆದು ನಿಶ್ಚಿತ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಅವರ ಸಾಹಸಕ್ಕೆ ನಮ್ಮದೊಂದು ಸಲಾಂ!

ಈ ಬಾರಿಯ ಶೌರ್ಯ-ಸಾಹಸದ (gallantry awards) ಪ್ರಶಸ್ತಿಗಳಲ್ಲಿ ಕೆಲವನ್ನು ಸರ್ಕಾರಿ ರೇಲ್ವೇ ಪೊಲೀಸ್ ಸಿಬ್ಬಂದಿಗೆ ಮೀಸಲಿಡಬೇಕಾಗಬಹುದು. ಮೊನೆಯಷ್ಟೇ ನಾವು ಬೆಂಗಳೂರಿನ ಯಶವಂತಪುರ ರೇಲ್ವೇ ಸ್ಟೇಷನ್ ನಲ್ಲಿ ರೇಲ್ವೇ ರಕ್ಷಕ ದಳದ ಸಹಾಯಕ ಸಬ್-ಇನ್ಸ್ ಪೆಕ್ಟರ್ ಆಗಿ ಕೆಲಸ ಮಾಡುವ ಡಿ ಚಂದ್ರಪ್ಪ (D Chandrappa) ಎನ್ನುವವರು ನಿಲ್ದಾಣದಲ್ಲಿ ಕೂತಿದ್ದ ಪ್ರಯಾಣಿಕರೊಬ್ಬರು ಹೃದಯಾಘಾತಕ್ಕೊಳಗಾಗಿ (heart attack) ಕುಸಿದು ಬಿದ್ದು ಸಾವಿನೊಂದಿಗೆ ಹೋರಾಡುತ್ತಿದ್ದಾಗ, ಅವರಿಗೆ ಪ್ರಥಮ ಚಿಕಿತ್ಸೆ ನೀಡಿ, ಅಂಬ್ಯುಲೆನ್ಸ್ ಗೆ ಕರೆ ಮಾಡಿ ಹತ್ತಿರದ ಆಸ್ಪತ್ರೆಯೊಂದಕ್ಕೆ ಕಳಿಸಿ ಪ್ರಾಣ ಉಳಿಸಿದ್ದರು. ಮಾನವೀಯ ಕಳಕಳಿ ಮತ್ತು ಸಮಯ ಪ್ರಜ್ಞೆಯ ಆ ವಿಡಿಯೋವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಾಗಿದೆ.

ಕಲಬುರಗಿಯ ರೈಲು ನಿಲ್ದಾಣದಲ್ಲಿ ಸರ್ಕಾರೀ ರೇಲ್ವೇ ಪೊಲೀಸ್ (ಜಿ ಆರ್ ಪಿ) ಆಗಿ ಕರ್ತವ್ಯ ನಿರ್ವಹಿಸುವ ಪ್ರವೀಣ್ ಸಹ ಒಬ್ಬ ಪ್ರಯಾಣಿಕನ ಪ್ರಾಣ ಉಳಿಸಿದ್ದಾರೆ. ಗುರುವಾರ ರಾತ್ರಿ ಹಾಸನ‌-ಸೊಲ್ಲಾಪರ ರೈಲು ಕಲಬುರಗಿ ನಿಲ್ದಾಣಕ್ಕೆ ಆಗಮಿಸಿ ಇನ್ನೂ ಚಲಿಸುತ್ತಿರುವಾಗಲೇ ಇಳಿಯುವ ಪ್ರಯತ್ನ ಮಾಡಿದ ಪ್ರಯಾಣಿಕರೊಬ್ಬರು ಆಯ ತಪ್ಪಿ ಬಿದ್ದು ಬಿಟ್ಟಿದ್ದಾರೆ. ಅವರು ಟ್ರೇನಿನ ಕೆಳಗೆ ಹೋಗಿ ಬಿಡುವ ಅಪಾಯವೂ ಇತ್ತು. ಹಾಗೇನಾದರೂ ಆಗಿದ್ದರೆ ಅವರು ಬದುಕಿ ಉಳಿಯುವುದು ಕಷ್ಟವಾಗುತ್ತಿತ್ತು.

ಆದರೆ ಅಲ್ಲೇ ಕರ್ತವ್ಯ ಮೇಲಿದ್ದ ಪ್ರವೀಣ್ ಕೂಡಲೇ ಸಹಾಯಕ್ಕಾಗಿ ಧಾವಿಸಿ ಅವರನ್ನು ದೂರ ಎಳೆದು ನಿಶ್ಚಿತ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಅವರ ಸಾಹಸಕ್ಕೆ ನಮ್ಮದೊಂದು ಸಲಾಂ!

ವಿಶೇಷ ಮಾಹಿತಿ: 

ಉಕ್ರೇನಲ್ಲಿ ಸಿಲುಕಿರುವ ಕರ್ನಾಟಕದ ವಿದ್ಯಾರ್ಥಿಗಳ ಹಾಗೂ ಕನ್ನಡಿಗರ ಬಗ್ಗೆ ಮಾಹಿತಿಗೆ ವೆಬ್ ಪೋರ್ಟಲ್ ಸ್ಥಾಪನೆ ಮಾಡಲಾಗಿದೆ. KSDMA ಮಾಹಿತಿಗಾಗಿ ವೆಬ್ ಪೋರ್ಟಲ್ ಸ್ಥಾಪಿಸಿದೆ. ಉಕ್ರೇನಲ್ಲಿ ಸಿಲುಕಿದವರ ವಿವರ, ವಿದೇಶಾಂಗ ಇಲಾಖೆ, ಭಾರತ ಸರ್ಕಾರದ ವೆಬ್ಸೈಟ್ನಿಂದ ಸಂಗ್ರಹಿಸಿದ ಮಾಹಿತಿ, ಹೆಲ್ಪ್ಲೈನ್, ಇ-ಮೇಲ್, ಮಾರ್ಗಸೂಚಿ ಮಾಹಿತಿ, ಎಲ್ಲಾ ಮಾಹಿತಿಗಳನ್ನು ಹೊಂದಿರುವ ವೆಬ್ ಪೋರ್ಟಲ್ ಸ್ಥಾಪಿಸಲಾಗಿದೆ.

ವೆಬ್ ಪೋರ್ಟಲ್ ಲಿಂಕ್: http://Ukraine.Karnataka.tech

ಇದನ್ನೂ ಓದಿ:  ಯಶವಂತಪುರ ರೇಲ್ವೇ ಸ್ಟೇಶನ್​ನ ಎಎಸ್ಐಪಿಎಫ್ ಚಂದ್ರಪ್ಪ ಅವರ ಸಮಯ ಪ್ರಜ್ಞೆ ಮತ್ತು ಮಾನವೀಯ ಕಳಕಳಿ ವ್ಯಕ್ತಿಯ ಪ್ರಾಣ ಉಳಿಸಿತು!