ಯಶವಂತಪುರ ರೇಲ್ವೇ ಸ್ಟೇಶನ್​ನ ಎಎಸ್ಐಪಿಎಫ್ ಚಂದ್ರಪ್ಪ ಅವರ ಸಮಯ ಪ್ರಜ್ಞೆ ಮತ್ತು ಮಾನವೀಯ ಕಳಕಳಿ ವ್ಯಕ್ತಿಯ ಪ್ರಾಣ ಉಳಿಸಿತು!

ಆಸ್ಪತ್ರೆಯಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ಸಿಕ್ಕಿದೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. ಅದರೆ ಅದೆಲ್ಲ ಸಾಧ್ಯವಾಗಿದ್ದು ಚಂದ್ರಪ್ಪ ಅವರ ಸಮಯ ಪ್ರಜ್ಞೆ ಮತ್ತು ಮಾನವೀಯ ಕಳಕಳಿಯಿಂದ. ಹೃದಯಾಘಾತಕ್ಕೊಳಗಾದ ವ್ಯಕ್ತಿಯನ್ನು ಒಂದು ಗಂಟೆಯೊಳಗೆ ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ.

ಯಶವಂತಪುರ ರೇಲ್ವೇ ಸ್ಟೇಶನ್​ನ ಎಎಸ್ಐಪಿಎಫ್ ಚಂದ್ರಪ್ಪ ಅವರ ಸಮಯ ಪ್ರಜ್ಞೆ ಮತ್ತು ಮಾನವೀಯ ಕಳಕಳಿ ವ್ಯಕ್ತಿಯ ಪ್ರಾಣ ಉಳಿಸಿತು!
ಎಎಸ್ಐಪಿಎಫ್ ಡಿ ಚಂದ್ರಪ್ಪ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 23, 2022 | 4:23 PM

ಯಾವುದೇ ಹುದ್ದೆಯಲ್ಲಿರಲಿ, ಇಲಾಖೆ ಯಾವುದಾದರಾಗಿರಲಿ, ಕಷ್ಟದಲ್ಲಿರುವರಿಗೆ ಸಹಾಯ ಮಾಡಲು ಅವು ಅಡ್ಡಿಯಾಗಲಾರವು ಮಾರಾಯ್ರೇ. ಯಾಕೆ ಅನ್ನೋದನ್ನ ಈ ಪುಟ್ಟ ಕತೆ ನೋಡಿದರೆ ನಿಮಗೆ ಗೊತ್ತಾಗುತ್ತದೆ. ಈ ಘಟನೆ ನಡೆದಿದ್ದು ಬೆಂಗಳೂರಿನ ಯಶವಂತಪುರ ರೇಲ್ವೇ ನಿಲ್ದಾಣದಲ್ಲಿ (Yeshvanthpur Railway Station) ಮೊನ್ನೆ ಸೋಮವಾರದಂದು. ಒಬ್ಬ ವ್ಯಕ್ತಿ ನೆಲಕ್ಕೆ ಉರುಳಿದಿರುವುದು ನಿಮಗೆ ಕಾಣುತ್ತಿದೆ. ಅವರ ಹೆಸರು ನಮಗೆ ಗೊತ್ತಿಲ್ಲ, ಆದರೆ ಸಕಾಲಕ್ಕೆ ಅವರಿಗೆ ಪ್ರಥಮ ಚಿಕಿತ್ಸೆ (first aid) ನೀಡಿ, ಅಂಬ್ಯುಲೆನ್ಸ್ ಒಂದನ್ನು ಫೋನ್ ಮಾಡಿ ಕರೆಸಿ ಅವರನ್ನು ನಗರದ ಆಸ್ಪತ್ರಯೊಂದಕ್ಕೆ ಕಳಿಸಿ ಪ್ರಾಣ ಉಳಿಸಿದ ರೇಲ್ವೇ ಸುರಕ್ಷಾ ದಳದ ಸಹಾಯಕ ಸಬ್ ಇನ್ಸ್ಪೆಕ್ಟರ್ ಹೆಸರು ಮಾತ್ರ ನಮಗಷ್ಟೇ ಅಲ್ಲ ಬಹಳಷ್ಟು ಜನಕ್ಕೆ ಗೊತ್ತಾಗಿದೆ. ಹೌದು, ವ್ಯಕ್ತಿಯು ಹೃದಯಾಘಾತಕ್ಕೊಳಗಾದಾಗ ಅದನ್ನು ಗಮನಿಸಿ ಕೂಡಲೇ ನೆರವು ಒಗಿಸಿದ ಎಎಸ್ಐಪಿಎಫ್ ಡಿ ಚಂದ್ರಪ್ಪ (ASIPF D Chandrappa) ಅವರು ಮಾಡಿದ ಈ ಪುಣ್ಯದ ಕೆಲಸ ಬಗ್ಗೆ ಜನಕ್ಕೆ ಗೊತ್ತಾಗಲೇಬೇಕಿದೆ.

ಮಧ್ಯವಯಸ್ಸಿನ ಈ ವ್ಯಕ್ತಿ ಸೋಮವಾರ ಯಶವಂತಪುರ ರೈಲು ನಿಲ್ದಾಣದ 6 ನೇ ಪ್ಲಾಟ್ ಪಾರ್ಮ್ ನಲ್ಲಿ ಕೂತು ಯಾವುದೋ ರೈಲಿಗಾಗಿ ಕಾಯುತ್ತಿದ್ದಾಗ ಹೃದಯಾಘಾತಕ್ಕೊಳಗಾಗಿ ನೆಲಕ್ಕೆ ಕುಸಿದು ಬಿದ್ದಿದ್ದಾರೆ. ಅವರ ಎದೆಯಲ್ಲಿ ತೀವ್ರ ಸ್ವರೂಪದ ನೋವು ಕಾಣಿಸಿದೆ ಮತ್ತು ನೆಲಕ್ಕೆ ಬಿದ್ದ ನಂತರ ಪ್ರಜ್ಞೆ ಕಳೆದುಕೊಂಡಿದ್ದಾರೆ. ಅದೇ ಸ್ಥಳದಲ್ಲಿ ಕರ್ತವ್ಯದ ಮೇಲಿದ್ದ ಚಂದ್ರಪ್ಪ ಇದನ್ನು ಗಮನಿಸಿದ್ದಾರೆ. ಹೃದಯಾಘಾತವಾದಾಗ ಯಾವ ಬಗೆಯ ಪ್ರಥಮ ಚಿಕಿತ್ಸೆ ನೀಡಬೇಕೆನ್ನುವುದು ಚಂದ್ರಪ್ಪ ಅವರಿಗೆ ಪ್ರೊಬೇಷನರಿ ಅವಧಿಯಲ್ಲಿ ಹೇಳಿಕೊಡಲಾಗಿತ್ತು ಅನಿಸುತ್ತೆ.

ತಾವು ಕಲಿತಿದ್ದನ್ನು ಅಥವಾ ಕೇಳಿಸಿಕೊಂಡಿದ್ದನ್ನು ಅವರು ಕೂಡಲೇ ಕಾರ್ಯರೂಪಕ್ಕೆ ತಂದಿದ್ದಾರೆ. ಅದು ಅತ್ಯಂತ ಸಕಾಲಿಕವಾಗಿತ್ತು.

ಹೃದಯಾಘಾತಕ್ಕೊಳಗಾದ ವ್ಯಕ್ತಿಗೆ ಪ್ರಥಮ ಚಿಕಿತ್ಸೆ ನೀಡುತ್ತಿರುವಂತೆಯೇ ಚಂದ್ರಪ್ಪ ಅಂಬ್ಯುಲೆನ್ಸ್ ಗೆ ಕರೆ ಮಾಡಿ ಅದನ್ನು ರೇಲ್ವೇ ಸ್ಟೇಶನ್ ಬಳಿ ತರಿಸಿಕೊಂಡಿದ್ದಾರೆ. ಅಲ್ಲಿದ್ದವರು ಮತ್ತು ಅಂಬ್ಯುಲೆನ್ಸ್ ನಲ್ಲಿ ಬಂದಿದ್ದ ಅರೋಗ್ಯ ಸಹಾಯಕರ ನೆರವಿನಿಂದ ಅವರನ್ನು ವಾಹನಕ್ಕೆ ಶಿಫ್ಟ್ ಮಾಡಿ ಸ್ಟೇಶನ್ ಗೆ ಹತ್ತಿರದಲ್ಲೇ ಇರುವ ಸ್ಪರ್ಶ ಸೂಪರ್ ಸ್ಪೆಷಾಲಿಟಿ ಅಸ್ಪತ್ರೆಗೆ ಕಳಿಸಿದ್ದಾರೆ.

ಆಸ್ಪತ್ರೆಯಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ಸಿಕ್ಕಿದೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. ಅದರೆ ಅದೆಲ್ಲ ಸಾಧ್ಯವಾಗಿದ್ದು ಚಂದ್ರಪ್ಪ ಅವರ ಸಮಯ ಪ್ರಜ್ಞೆ ಮತ್ತು ಮಾನವೀಯ ಕಳಕಳಿಯಿಂದ. ಹೃದಯಾಘಾತಕ್ಕೊಳಗಾದ ವ್ಯಕ್ತಿಯನ್ನು ಒಂದು ಗಂಟೆಯೊಳಗೆ ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ. ಅದನ್ನು ಗೋಲ್ಡನ್ ಅವರ್ ಅಂತ ಹೇಳುತ್ತಾರೆ. ಇದನ್ನೆಲ್ಲ ತಮಗೆ ಪರಿಚಯವೂ ಇರದ ವ್ಯಕ್ತಿಗೆ ಮಾಡಿರುವ ಚಂದ್ರಪ್ಪ ಪ್ರಾಣ ಉಳಿಸಿದ್ದಾರೆ.

ಇಂಥ ಸಂದರ್ಭಗಳಲ್ಲಿ ನಮಗ್ಯಾಕೆ ಉಸಾಬರಿ ಅಂದುಕೊಂಡು ಪಕ್ಕಕ್ಕೆ ಸರಿದು ಹೋಗುವವರ ನಡುವೆ ಎಎಸ್ಐಪಿಎಫ್ ಡಿ ಚಂದ್ರಪ್ಪ ಭಿನ್ನವಾಗಿ ಕಾಣುತ್ತಾರೆ. ಅವರಲ್ಲಿರುವ ಮಾನವೀಯ ಕಳಕಳಿಗೆ ನಮ್ಮದೊಂದು ಅಭಿನಂದನೆ!

ಇದನ್ನೂ ಓದಿ: ಬೆಂಗಳೂರು: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಬಾಲಕಿಗೆ ಕಿಡ್ನಿ ದಾನ ಮಾಡಿದ ತಾಯಿ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ