AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಬಾಲಕಿಗೆ ಕಿಡ್ನಿ ದಾನ ಮಾಡಿದ ತಾಯಿ

ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ 12 ವರ್ಷದ ಬಾಲಕಿಗೆ ತನ್ನ ತಾಯಿಯೇ ಕಿಡ್ನಿ ದಾನ ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಾಜ್ಯದಲ್ಲಿ ಮೊದಲ ರೋಬೋ ಅಸಿಸ್ಟೆಡ್ ಪೀಡಿಯಾಟ್ರಿಕ್ ಮೂಲಕ ಯಶಸ್ವಿಯಾಗಿ ಕಿಡ್ನಿ ಕಸಿ ಮಾಡಲಾಗಿದೆ.

ಬೆಂಗಳೂರು: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಬಾಲಕಿಗೆ ಕಿಡ್ನಿ ದಾನ ಮಾಡಿದ ತಾಯಿ
ಕಿಡ್ನಿ ಕಸಿ ಮಾಡಿದ ತಂಡ
TV9 Web
| Updated By: ganapathi bhat|

Updated on: Feb 21, 2022 | 9:41 PM

Share

ಬೆಂಗಳೂರು: ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ 12 ವರ್ಷದ ಬಾಲಕಿಗೆ ತನ್ನ ತಾಯಿಯೇ ಕಿಡ್ನಿ ದಾನ (Kidney Donation) ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಾಜ್ಯದಲ್ಲಿ ಮೊದಲ ರೋಬೋ ಅಸಿಸ್ಟೆಡ್ ಪೀಡಿಯಾಟ್ರಿಕ್ ಮೂಲಕ ಯಶಸ್ವಿಯಾಗಿ ಕಿಡ್ನಿ ಕಸಿ ಮಾಡಲಾಗಿದೆ. ಇದೇ ಮೊದಲ ಬಾರಿಗೆ ರೋಬೋ ಅಸಿಸ್ಟೆಡ್ ಪೀಡಿಯಾಟ್ರಿಕ್ ಮೂಲಕ ಕಿಡ್ನಿ ಕಸಿಯನ್ನು ಫೊರ್ಟಿಸ್ ಆಸ್ಪತ್ರೆ ವೈದ್ಯರ ತಂಡ ನಡೆಸಿದೆ. ಈ ಕುರಿತು ಮಾತನಾಡಿದ ರೋಬೋಟಿಕ್ ಸರ್ಜರಿ ಮತ್ತು ಕಸಿ ವಿಭಾಗದ ನಿರ್ದೇಶಕ ಡಾ. ಮೋಹನ್ ಕೇಶವ ಮೂರ್ತಿ, ಕಳೆದ ಒಂದು ವರ್ಷದಿಂದ ಈ ಬಾಲಕಿಯು ಕಿಡ್ನಿಯನ್ನು ವೈಫಲ್ಯ ಮಾಡುವ ಲುಫುಸ್ ನೆಫ್ರಿಟಿಸ್ ರೋಗದಿಂದ ಬಳಲುತ್ತಿದ್ದು, ಡಯಾಲಿಸಿಸ್ ಮಾಡಲಾಗುತ್ತಿತ್ತು. ಬಾಲಕಿಯ ಆರೋಗ್ಯ ಕ್ಷೀಣಿಸುತ್ತಾ ಬಂದಿತು. ತ್ವರಿತವಾಗಿ ಕಿಡ್ನಿ ಕಸಿ ಮಾಡದಿದ್ದರೆ ಬಾಲಕಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿತ್ತು. ಆದರೆ, ಕಿಡ್ನಿ ದಾನಿಗಳ ಕೊರತೆಯಿಂದ ಇದೂ ಸಹ ತಡವಾಗುತ್ತಿತ್ತು. ಈ ಸಂದರ್ಭದಲ್ಲಿ ತನ್ನ ತಾಯಿಯೇ ಕಿಡ್ನಿ ದಾನ ಮಾಡಲು ಮುಂದಾದರು. ಈ ವೇಳೆ ಕಾರ್ಯಪ್ರವೃತ್ತರಾದ ನಮ್ಮ ತಂಡ ಕಸಿ ನಡೆಸಲು ಮುಂದಾದವು ಎಂದು ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆ ಫೊರ್ಟಿಸ್ ಆಸ್ಪತ್ರೆ ನೆಟ್‌ವರ್ಕ್‌ನಲ್ಲಿ ರೋಬೋಟ್ ಅಸಿಸ್ಟೆಡ್ ಪೀಡಿಯಾಟ್ರಿಕ್ ಮೂಲಕ‌ ಕಿಡ್ನಿ ಕಸಿ ಮಾಡಲಾಗಿದೆ. ಈ ಚಿಕಿತ್ಸಾ ವಿಧಾನವು ರೋಬೋಟಿಕ್‌ನಿಂದ ಕೂಡಿರುವುದರಿಂದ ಹೈ ಟೆಕ್ನಾಲಜಿಯನ್ನು ಬಳಸಲಾಗಿದೆ. ಕಸಿ ಸಂದರ್ಭದಲ್ಲಾಗಲಿ ಅಥವಾ ನಂತರದಲ್ಲಿ ಆಗುವ ನೋವನ್ನು ಇದು ಕಡಿಮೆಗೊಳಿಸುತ್ತದೆ.

ಚಿಕಿತ್ಸೆ ಬಳಿಕ ಬಾಲಕಿ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ತಿಳಿಸಲಾಗಿದೆ. ಕಳೆದ ಒಂದು ವರ್ಷದಿಂದ ವೀಲ್‌ಚೇರ್‌ನನ್ನು ಅವಲಂಬಿಸಿದ್ದ ಮಗು ಇದೀಗ ಚೇತರಿಸಿಕೊಂಡಿದೆ. ತಾಯಿಯೂ ಸಹ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:

ಮಂಗಳವಾರದಿಂದ ಪರಿಷತ್ ಕಲಾಪದಲ್ಲಿ ಕಡ್ಡಾಯ ಭಾಗಿಯಾಗಲೇಬೇಕು ಅಂತ ವಿರೋಧ ಪಕ್ಷದ ಮುಖ್ಯ ಸಚೇತಕ ವಿಪ್ ಜಾರಿಗೊಳಿಸಿದರು

NSE Scam: ಎನ್​ಎಸ್​ಇ ಮಾಜಿ ಎಂಡಿ ಚಿತ್ರಾ ರಾಮಕೃಷ್ಣಗೆ ಸಹಾಯ ಮಾಡುತ್ತಿದ್ದ ನಿಗೂಢ ಬಾಬಾ ಯಾರು?; ರಹಸ್ಯದ ಬೆನ್ನತ್ತಿದ ಸಿಬಿಐ