ವಿಧಾನಸೌಧದ ಮೊಗಸಾಲೆಯಲ್ಲಿ ಕಾಂಗ್ರೆಸ್ ಶಾಸಕರಿಗೆ ತಿಗಣೆ ಕಾಟ; ಪರಿಹಾರ ನೀಡುವಂತೆ ಪುಟ್ಟರಂಗಶೆಟ್ಟಿ ಮನವಿ
ಸಚಿವ ಕೆ.ಎಸ್. ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ, ಕಾಂಗ್ರೆಸ್ ಅಹೋರಾತ್ರಿ ಧರಣಿ ನಡೆಸುತ್ತಿದೆ. ಈ ಹಿನ್ನಲೆ ರಾತ್ರಿ ವೇಳೆ ಸದನದ ಮೊಗಸಾಲೆಯಲ್ಲಿಯೇ ಮಲಗುತ್ತಿರುವ ಕಾಂಗ್ರೆಸ್‌ನ ಶಾಸಕರ ಪೈಕಿ ಪುಟ್ಟರಂಗಶೆಟ್ಟಿಗೆ ತಿಗಣೆ ಕಾಟ ಕಂಡುಬಂದಿದೆ.
ಬೆಂಗಳೂರು: ಸಚಿವ ಕೆ.ಎಸ್. ಈಶ್ವರಪ್ಪ (K.S.EShwarappa) ರಾಜೀನಾಮೆಗೆ ಆಗ್ರಹಿಸಿ, ಕಾಂಗ್ರೆಸ್ ಅಹೋರಾತ್ರಿ ಧರಣಿ ನಡೆಸುತ್ತಿದೆ. ಈ ಹಿನ್ನಲೆ ರಾತ್ರಿ ವೇಳೆ ಸದನದ ಮೊಗಸಾಲೆಯಲ್ಲಿಯೇ ಮಲಗುತ್ತಿರುವ ಕಾಂಗ್ರೆಸ್‌ನ ಶಾಸಕರ ಪೈಕಿ ಪುಟ್ಟರಂಗಶೆಟ್ಟಿಗೆ (C.Puttarangashetty) ತಿಗಣೆ ಕಾಟ ಕಂಡುಬಂದಿದೆ. ಸದನದ ಮೊಗಸಾಲೆಯಲ್ಲಿ ತಿಗಣೆ ಎಂದು ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ನ ಶಾಸಕ ಪುಟ್ಟರಂಗಶೆಟ್ಟಿ ದೂರು ಹೇಳಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಸಚಿವ ಕೆ.ಎಸ್. ಈಶ್ವರಪ್ಪರ ರಾಜೀನಾಮೆಗೆ ಆಗ್ರಹಿಸುತ್ತಿರುವ ಕಾಂಗ್ರೆಸ್‌ನ ಶಾಸಕರು ವಿಧಾನಸೌಧದಲ್ಲೇ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ನಡುವೆ, ಸೋಮವಾರ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿಗೆ ತಿಗಣೆ ಕಾಟದ ಬಗ್ಗೆ ಪುಟ್ಟರಂಗಶೆಟ್ಟಿ ಮಾಹಿತಿ ಕೊಟ್ಡಿದ್ದಾರೆ.
ಮೇಡಂನವರೇ, ವಿಧಾನಸಭೆಯ ಮೊಗಸಾಲೆಯಲ್ಲಿ ತಿಗಣೆ ಕಾಟವಿದೆ ನಾವು ರಾತ್ರಿಯೆಲ್ಲಾ ಇಲ್ಲಿಯೇ ಮಲಗುತ್ತಿದ್ದೇವೆ. ನಮಗೆ ತಿಗಣೆ ಕಾಟದಿಂದ ನಿದ್ದೆಯೇ ಬರುತ್ತಿಲ್ಲ. ನೀವು ಇದರ ಬಗ್ಗೆ ಸ್ವಲ್ಪ ಎಚ್ಚರವಹಿಸಿ. ನಾವು ಅನುಭವಿಸುವ ತೊಂದರೆಗೆ ಪರಿಹಾರ ಕೊಡಿಸಿ ಎಂದು ಕೇಳಿಕೊಂಡಿದ್ದಾರೆ.
ಪುಟ್ಟರಂಗಶೆಟ್ಟಿ ಮಾತಿಗೆ, ಆಗಲೀ ಸಾರ್ ಅದಕ್ಕೆ ಪರಿಹಾರ ಕೊಡಿಸೋಣ ಎಂದು ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಹೇಳಿದ್ದಾರೆ.
ಮಂಗಳವಾರದಿಂದ ಪರಿಷತ್ ಕಲಾಪದಲ್ಲಿ ಕಡ್ಡಾಯ ಭಾಗಿಯಾಗಲೇಬೇಕು: ವಿರೋಧ ಪಕ್ಷದ ಮುಖ್ಯ ಸಚೇತಕ ವಿಪ್ ಜಾರಿ
ಸಚಿವ ಕೆ ಎಸ್ ಈಶ್ವರಪ್ಪ ಅವರು ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಾರೆ ಅವರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿ ವಿಧಾನ ಸೌಧದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಸುತ್ತಿರುವ ಕಾಂಗ್ರೆಸ್ ಶಾಸಕರ ನಿರಶನ ನಾಳೆ ಅಂದರೆ ಮಂಗಳವಾರ ಅಂತ್ಯ ಕಾಣುವುದು ಖಚಿತವಾಗಿದೆ. ವಿಧಾನ ಪರಿಷತ್ ನಲ್ಲಿ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ್ ರಾಠೋಡ್ ಅವರು ಕಾಂಗ್ರೆಸ್ ಸದಸ್ಯರಿಗೆ ವಿಪ್ ಜಾರಿಗೊಳಿಸಿದ್ದಾರೆ. ಮಂಗಳವಾರದಿಂದ (ಫೆಬ್ರುವರಿ 22) ಶುಕ್ರವಾರದವರೆಗೆ (ಫೆಬ್ರುವರಿ 25) ಕಡ್ಡಾಯವಾಗಿ ವಿಧಾನ ಪರಿಷತ್ ನ ಕಾರ್ಯ ಕಲಾಪದಲ್ಲಿ ಕಡ್ಡಾಯವಾಗಿ ಭಾಗಿಯಾಗಬೇಕೆಂದು ಪ್ರಕಾಶ್ ರಾಠೋಡ್ ವಿಪ್ ಜಾರಿಗೊಳಿಸಿದ್ದಾರೆ.
ಇದನ್ನೂ ಓದಿ:
ಮಂಗಳವಾರದಿಂದ ಪರಿಷತ್ ಕಲಾಪದಲ್ಲಿ ಕಡ್ಡಾಯ ಭಾಗಿಯಾಗಲೇಬೇಕು ಅಂತ ವಿರೋಧ ಪಕ್ಷದ ಮುಖ್ಯ ಸಚೇತಕ ವಿಪ್ ಜಾರಿಗೊಳಿಸಿದರು
ಬಜರಂಗದಳ ಕಾರ್ಯಕರ್ತ ಹತ್ಯೆ ಪ್ರಕರಣ: ಶಿವಮೊಗ್ಗದ ಇಬ್ಬರು ಆರೋಪಿಗಳ ಬಂಧನ