CCB Transfers: ಸಿಸಿಬಿ ಅಂಗಳದಲ್ಲಿ ಬೇರು ಬಿಟ್ಟಿದ್ದ ಸಿಬ್ಬಂದಿಗೆ ಸಾಮೂಹಿಕ ಟ್ರಾನ್ಸ್ಫರ್ ಶಾಕ್!
ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ವರ್ಗಾವಣೆ ಆಗ್ತಿದ್ದಂತೆ ಸಿಸಿಬಿ ಬಹುತೇಕ ಸಿಬ್ಬಂದಿ ಟ್ರಾನ್ಸ್ ಫರ್ ಆಗಿದ್ದಾರೆ. ಎಎಸ್ಐ, ಹೆಚ್ಸಿ ಮತ್ತು ಪಿಸಿಗಳ ವರ್ಗಾವಣೆ ಮಾಡಲಾಗಿದೆ.
ಬೆಂಗಳೂರು: ಬೆಂಗಳೂರು ಸೆಂಟ್ರಲ್ ಕ್ರೈಂ ಬ್ರಾಂಚ್ (ಸಿಸಿಬಿ)ನಲ್ಲಿ (Central Crime Branch -Bangalore) ವರ್ಷಾನುಗಟ್ಟಲೆಯಿಂದ ಬೇರುಬಿಟ್ಟಿದ್ದ ಸಿಬ್ಬಂದಿಗೆ ವರ್ಗಾವಣೆ ಶಾಕ್ ಟ್ರೀಟ್ಮೆಂಟ್ ನೀಡಲಾಗಿದೆ. ಜಂಟಿ ಪೊಲೀಸ್ ಆಯುಕ್ತರು ಸಿಸಿಬಿಗೆ ಮಾಸ್ ಟ್ರಾನ್ಸ್ಫರ್ ಶಾಕ್ ನೀಡಿದ್ದಾರೆ. ಸಿಸಿಬಿಯಿಂದ (CCB) ಒಟ್ಟು 26 ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗಿದೆ.
ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ವರ್ಗಾವಣೆ ಆಗ್ತಿದ್ದಂತೆ ಸಿಸಿಬಿ ಬಹುತೇಕ ಸಿಬ್ಬಂದಿ ಟ್ರಾನ್ಸ್ ಫರ್ ಆಗಿದ್ದಾರೆ. ಎಎಸ್ಐ, ಹೆಚ್ಸಿ ಮತ್ತು ಪಿಸಿಗಳ ವರ್ಗಾವಣೆ ಮಾಡಿ ಸಿಸಿಬಿ ಜಂಟಿ ಆಯುಕ್ತರಾದ ರಮಣ್ ಗುಪ್ತ ಆದೇಶ ನೀಡಿದ್ದಾರೆ. ಸಿಸಿಬಿ ಸಿಬ್ಬಂದಿ ಸಾಮೂಹಿಕ ಟ್ರಾನ್ಸ್ಫರ್ ಪಟ್ಟಿ ಇಲ್ಲಿದೆ:
ದರೋಡೆ ಮಾಡಿದ್ದ ಆರೋಪಿಗಳ ಬಂಧನ: ಅಂಗಡಿಗೆ ನುಗ್ಗಿ ದರೋಡೆ ಮಾಡಿದ್ದ ಆರೋಪಿಗಳು ಅರೆಸ್ಟ್ ಆಗಿದ್ದಾರೆ. 11 ಮೇ 2021 ಕ್ಕೆ ಚಿಕ್ಕಪೇಟೆಯ ಅಂಗಡಿಯಲ್ಲಿ ಕೆಲಸ ಮುಗಿಸಿ ಮೂವರು ಮಲಗಿದ್ದರು. ಬೆಳಗ್ಗೆ 3.30 ಕ್ಕೆ ಅಂಗಡಿಗೆ ನುಗ್ಗಿದ್ದ ಐವರು ಚಾಕುವಿನಿಂದ ಹಲ್ಲೆ ಮಾಡಿ ಚಿನ್ನದ ಸರ, 1 ಕೆಜಿ ಬೆಳ್ಳಿ ಕದ್ದು ಪರಾರಿಯಾಗಿದ್ದರು. ಸಿಟಿ ಮಾರ್ಕೆಟ್ ಪೊಲೀಸರು ಸದ್ಯ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 3.77 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. ಮೊಹಮ್ಮದ್ ಫರ್ಹಾನ್, ನದೀಮ್ ಪಾಷ, ನಯಾಜ್ ಪಾಷ, ಸಲ್ಮಾನ್ ಪಾಷ ಬಂಧಿತ ಆರೋಪಿಗಳು.
ಮಂಡ್ಯ ಸ್ಟಾರ್ ಗ್ರೂಪ್ಸ್ ಮಾಲೀಕರ ಮನೆಯ ಮೇಲೆ IT ದಾಳಿ ಮಂಡ್ಯ: ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ಉದ್ಯಮಿಗಳಿಗೆ ಶಾಕ್ ನೀಡಿದ್ದಾರೆ. ಸ್ಟಾರ್ ಗ್ರೂಪ್ಸ್ ಮಾಲೀಕರ ಮನೆಯ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ಶೋಧ ಕಾರ್ಯ ನಡೆಸುತಿದ್ದಾರೆ. ಉದ್ಯಮಿ ಅಮಿರುಲ್ ಮುರ್ತುಜಾ, ಅಮ್ಜಾ, ಶಹಬಾಜ್, ಶಿರೋಜ್ ನಿವಾಸ, ಕಚೇರಿಗಳಲ್ಲಿ ಐಟಿಯಿಂದ ಶೋಧ ನಡೆಸುತ್ತಿದ್ದಾರೆ. ಉದ್ಯಮ ನಡೆಸುತ್ತಿರುವ ಸಹೋದರರು ಪೌಲ್ಟ್ರಿ ಫಾರಂ, ಹೋಟೆಲ್, ಪೆಟ್ರೋಲ್ ಬಂಕ್ ಸೇರಿದಂತೆ ಹಲವು ಆಸ್ತಿ ಹೊಂದಿದ್ದಾರೆ. ನಾಗಮಂಗಲ, ಮೈಸೂರು, ಮಂಡ್ಯ, ಬೆಂಗಳೂರಿನ ಹಲವೆಡೆ ಆಸ್ತಿ ಹೊಂದಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಹಿನ್ನೆಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಒಂಟಿ ಬೇಟೆ ಹರ್ಷನನ್ನು ಕ್ಲರ್ಕ್ ಪೇಟೆ ಯುವಕರು ಹತ್ಯೆ ಮಾಡಿದ ಇಂಚಿಂಚು ಮಾಹಿತಿ ಇಲ್ಲಿದೆ -TV9 Exclusive
ಇದನ್ನೂ ಓದಿ: ಮೈನಸ್ 30 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ 65 ಪುಷ್ ಅಪ್ಸ್ ಮಾಡಿದ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್; ಇಲ್ಲಿದೆ ವಿಡಿಯೋ
Published On - 10:35 am, Wed, 23 February 22