Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಟ್ಟಡಕ್ಕಾಗಿ 2 ವಿಶ್ವವಿದ್ಯಾಲಯದ ಮಧ್ಯೆ ತಾರಕಕ್ಕೇರಿದ ಫೈಟ್; ವಿವಿ ವಿಭಜನೆಯಾಗಿ 3 ವರ್ಷವಾದ್ರೂ ಮುಸುಕಿನ ಗುದ್ದಾಟ

ಕಟ್ಟಡಕ್ಕಾಗಿ 2 ವಿಶ್ವವಿದ್ಯಾಲಯದ ಮಧ್ಯೆ ಕಿತ್ತಾಟ ಮುಂದುವರಿದಿದ್ದು, ಪ್ರಮುಖ ಕಡತಗಳು ಬೀದಿಪಾಲಾಗಿದೆ. ಸುಪ್ರೀಂಕೋರ್ಟ್, ಹೈಕೋರ್ಟ್‌ನ ಮುಖ್ಯವಾದ ಫೈಲ್‌ಗಳು, ವಿದ್ಯಾರ್ಥಿಗಳ ಅಂಕಪಟ್ಟಿ, ಉತ್ತರ ಪತ್ರಿಕೆಗಳು ಹಾಗೂ ಉಪನ್ಯಾಸಕರ ನೇಮಕಾತಿ ಫೈಲ್‌ಗಳು ಬೀದಿಪಾಲಾದ ಆರೋಪ ಸದ್ಯ ಕೇಳಿ ಬಂದಿದೆ.

ಕಟ್ಟಡಕ್ಕಾಗಿ 2 ವಿಶ್ವವಿದ್ಯಾಲಯದ ಮಧ್ಯೆ ತಾರಕಕ್ಕೇರಿದ ಫೈಟ್; ವಿವಿ ವಿಭಜನೆಯಾಗಿ 3 ವರ್ಷವಾದ್ರೂ ಮುಸುಕಿನ ಗುದ್ದಾಟ
ಎರಡು ವಿವಿಗಳ ನಡುವೆ ಕಟ್ಟಡಕ್ಕಾಗಿ ಕಿತ್ತಾಟ
Follow us
TV9 Web
| Updated By: preethi shettigar

Updated on:Feb 23, 2022 | 8:29 AM

ಬೆಂಗಳೂರು: ನಗರದ ಉತ್ತರ ವಿವಿ ಹಾಗೂ ಬೆಂಗಳೂರು ನಗರ ವಿವಿ ನಡುವೆ ಜಗಳ(Fight) ತಾರಕಕ್ಕೇರಿದೆ. ವಿವಿ (University) ವಿಭಜನೆಯಾಗಿ 3 ವರ್ಷವಾದರೂ ಮುಸುಕಿನ ಗುದ್ದಾಟ ನಡೆಯುತ್ತಿದೆ. ಕಟ್ಟಡಕ್ಕಾಗಿ 2 ವಿಶ್ವವಿದ್ಯಾಲಯದ ಮಧ್ಯೆ ಕಿತ್ತಾಟ ಮುಂದುವರಿದಿದ್ದು, ಪ್ರಮುಖ ಕಡತಗಳು ಬೀದಿಪಾಲಾಗಿದೆ. ಸುಪ್ರೀಂಕೋರ್ಟ್, ಹೈಕೋರ್ಟ್‌ನ(High court) ಮುಖ್ಯವಾದ ಫೈಲ್‌ಗಳು, ವಿದ್ಯಾರ್ಥಿಗಳ ಅಂಕಪಟ್ಟಿ, ಉತ್ತರ ಪತ್ರಿಕೆಗಳು ಹಾಗೂ ಉಪನ್ಯಾಸಕರ ನೇಮಕಾತಿ ಫೈಲ್‌ಗಳು ಬೀದಿಪಾಲಾದ ಆರೋಪ ಸದ್ಯ ಕೇಳಿ ಬಂದಿದೆ.

ಅಷ್ಟೇ ಅಲ್ಲದೇ ಕಟ್ಟಡ ಕಿತ್ತಾಡದ ನೆಪದಲ್ಲಿ ಕಚೇರಿ ಕಿಟಕಿ, ಫೈಲ್‌ಗಳನ್ನು ಕಿತ್ತು ಹೊರಗೆಸೆದ ಆರೋಪ ಕೇಳಿ ಬಂದಿದೆ. ಬೆಂಗಳೂರು ನಗರ ವಿವಿ ಕುಲಸಚಿವ ಶ್ರೀಧರ್ ವಿರುದ್ಧ ಬೆಂಗಳೂರು ಉತ್ತರ ವಿವಿಯಿಂದ ಈ ಸಂಬಂಧ ಆರೋಪ ಕೇಳಿ ಬಂದಿದೆ.

ಬೆಂಗಳೂರು ನಗರ ವಿವಿಯ ಕಟ್ಟಡವನ್ನು ಉತ್ತರ ವಿವಿಗೆ ಬಿಟ್ಟುಕೊಡುವಂತೆ ಕೋರ್ಟ್‌ನಿಂದ ಆದೇಶ ಬಂದಿದೆ. ಆದರೂ ಬೆಂಗಳೂರು ನಗರ ವಿಶ್ವವಿದ್ಯಾಲಯ ತಲೆಕೆಡಿಸಿಕೊಂಡಿಲ್ಲ. ಉತ್ತರ ವಿವಿ ಸದ್ಯ ಕಟ್ಟಡವನ್ನು ಲೀಗಲ್ ಸೆಲ್ ಆಗಿ ಬಳಸಿಕೊಳ್ಳುತ್ತಿದೆ. ಆದರೆ ವಿನಾಕಾರಣ ಮಾಹಿತಿ ನೀಡದೆ ಕಡತ ಹೊರಗೆಸೆದ ಆರೋಪ ಮಾಡಲಾಗಿದೆ.

ಏಕಾ ಏಕಿ ಕೊಠಡಿಯಲ್ಲಿದ್ದ ಫೈಲ್​ಗಳನ್ನು ಬೆಂಗಳೂರು ನಗರ ವಿವಿ ಕುಲಸಚಿವ ಹೊರಗೆಸೆದಿದ್ದಾರೆ. ಕೋರ್ಟ್ ಸಮೀಪವೇ ಇರುವುದ್ದರಿಂದ ನಗರ ವಿವಿಯಲ್ಲಿ ಒಂದು ಕಟ್ಟಡವನ್ನು ಬಳಸಿಕೊಳ್ಳಿವಂತೆ ಹೈಕೋರ್ಟ್ ಸೂಚನೆ ನೀಡಿದೆ. ಆದರೆ ವಿನಾಃ ಕಾರಣ ಮಾಹಿತಿ ನೀಡದೆಯೇ ಕಡತಗಳನ್ನು ಹೊರಗೆಸೆದು ಮೊಂಡಾಟ ಮಾಡಿದ್ದಾರೆ. ಈಗ ಕಚೇರಿಯಲ್ಲಿದ್ದ ಕಡತಗಳನ್ನು ಎಲ್ಲಿ ಇಡಬೇಕು ಎಂಬ ಗೊಂದಲ ಶುರುವಾಗಿದೆ. ದಾಖಲೆಗಳನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ಬೆಂಗಳೂರು ಉತ್ತರ ವಿವಿ ಪ್ರಶ್ನೆ ಮಾಡಿದೆ.

ಇದನ್ನೂ ಓದಿ: ಬೆಂಗಳೂರು ವಿವಿ ಪರೀಕ್ಷಾ ಭವನದ ಮುಂದೆ ಸರತಿ ಸಾಲು; 2 ವಾರಗಳಿಂದ ಅಂಕ ಪಟ್ಟಿಗಾಗಿ ವಿದ್ಯಾರ್ಥಿಗಳ ಅಲೆದಾಟ

ಪಾಠ ಪ್ರವಚನ ಮುಗಿದಿಲ್ಲ; ಪದವಿ ಪರೀಕ್ಷೆಗಳನ್ನು 1 ತಿಂಗಳು ಮುಂದೂಡಲು ವಿವಿಗಳಿಗೆ ಸೂಚನೆ

Published On - 8:22 am, Wed, 23 February 22

ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಮ್ಯಾನ್ಮಾರ್​ಗೆ 15 ಟನ್ ಪರಿಹಾರ ಸಾಮಗ್ರಿ, ಮೆಡಿಕಲ್ ಕಿಟ್ ಕಳುಹಿಸಿದ ಭಾರತ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಮಕ್ಕಳಿಂದ ಶುಚಿಮಾಡಿಸಿದರೆ ಕೂಡಲೇ ಕ್ರಮ ಜರುಗಿಸುತ್ತೇವೆ: ಮಧು ಬಂಗಾರಪ್ಪ
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
ಕಾಂಗ್ರೆಸ್ ನಾಯಕರ ಒಳಜಗಳಗಳಿಂದ ಸರ್ಕಾರ ಪತನಗೊಳ್ಳಲಿದೆ: ಜಗದೀಶ್ ಶೆಟ್ಟರ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
CSK ವಿರುದ್ಧದ ಗೆಲುವಿನ ಖುಷಿಯಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಡ್ಯಾನ್ಸ್
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಸಿನಿಮೀಯ ರೀತಿಯಲ್ಲಿ ವಾಹನ ಚೇಸ್ ಮಾಡಿ ಗೋವುಗಳ ರಕ್ಷಣೆ: ವಿಡಿಯೋ ನೋಡಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ
ಹನಿ ಟ್ರ್ಯಾಪ್ ಹಿಂದೆ ಯಾರಿದ್ದಾರೆ ಅಂತ ಪೊಲೀಸರು ಹೇಳಬೇಕು: ಜಾರಕಿಹೊಳಿ
ರಾಜ್ಯಾದ್ಯಂತ ಸುತ್ತಿ ಜನರ ಬಳಿ ಹೋಗ್ತೀನಿ, ನಾನು ಪಲಾಯನವಾದಿಯಲ್ಲ: ಯತ್ನಾಳ್
ರಾಜ್ಯಾದ್ಯಂತ ಸುತ್ತಿ ಜನರ ಬಳಿ ಹೋಗ್ತೀನಿ, ನಾನು ಪಲಾಯನವಾದಿಯಲ್ಲ: ಯತ್ನಾಳ್
ಬಸನಗೌಡ ಯತ್ನಾಳ್ ಇಂದು ವಿಜಯಪುರಕ್ಕೆ ಮರಳುವ ಸಾಧ್ಯತೆ
ಬಸನಗೌಡ ಯತ್ನಾಳ್ ಇಂದು ವಿಜಯಪುರಕ್ಕೆ ಮರಳುವ ಸಾಧ್ಯತೆ
‘ರೀಲ್ಸ್​ ಕೇಸ್.. ಹಹಹ’; ನಗುತ್ತಲೇ ಜೈಲಿನಿಂದ ಹೊರ ಬಂದ ವಿನಯ್-ರಜತ್
‘ರೀಲ್ಸ್​ ಕೇಸ್.. ಹಹಹ’; ನಗುತ್ತಲೇ ಜೈಲಿನಿಂದ ಹೊರ ಬಂದ ವಿನಯ್-ರಜತ್
ಹತ್ಯೆಯಾದ ಮಹಿಳೆಯ ಮೂರನೇ ಗಂಡ ಪತ್ನಿ ಮತ್ತು ಇತರರನ್ನು ಕೊಂದನೇ?
ಹತ್ಯೆಯಾದ ಮಹಿಳೆಯ ಮೂರನೇ ಗಂಡ ಪತ್ನಿ ಮತ್ತು ಇತರರನ್ನು ಕೊಂದನೇ?