ಒಂಟಿ ಬೇಟೆ ಹರ್ಷನನ್ನು ಕ್ಲರ್ಕ್ ಪೇಟೆ ಯುವಕರು ಹತ್ಯೆ ಮಾಡಿದ ಇಂಚಿಂಚು ಮಾಹಿತಿ ಇಲ್ಲಿದೆ -TV9 Exclusive

ಯಾವಾಗಾದ್ರು ಹೊಡೆಯಬೇಕು ಎಂದು ತೀರ್ಮಾನ ಮಾಡಿದ್ದ ಅರೋಪಿಗಳಿಗೆ ಹರ್ಷ ಒಂಟಿ ಬೇಟೆಯಾಗಿದ್ದ. ಯಾವಾಗಲೂ ಚಾಕು ಡ್ಯಾಗರ್ ಗಳನ್ನು ತಮ್ಮ ವಾಹನದಲ್ಲಿ ಅರೋಪಿಗಳು ಇಟ್ಟುಕೊಳ್ಳುತ್ತಿದ್ದರು. ಹರ್ಷನದು ಜಾಸ್ತಿ ಅಗಿದೆ, ಮುಗಿಸಿ ಬಿಡುವಾ ಎಂದು ಅಟ್ಯಾಕ್ ಮಾಡಲು ಸಿದ್ಧವಾಗಿಯೇ ಇದ್ದರು. ಕೊನೆಗೆ ಭಾನುವಾರ ಅಟ್ಯಾಕ್ ಮಾಡಿಯೇ ಬಿಟ್ಟರು.

ಒಂಟಿ ಬೇಟೆ ಹರ್ಷನನ್ನು ಕ್ಲರ್ಕ್ ಪೇಟೆ ಯುವಕರು ಹತ್ಯೆ ಮಾಡಿದ ಇಂಚಿಂಚು ಮಾಹಿತಿ ಇಲ್ಲಿದೆ -TV9 Exclusive
ಮಲೆನಾಡು ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತನ ಭೀಕರ ಹತ್ಯೆ! ಬೆಚ್ಚಿಬಿದ್ದ ಮಲೆನಾಡು ಜನ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 23, 2022 | 9:48 AM

ಶಿವಮೊಗ್ಗ: ಪೂರ್ವಯೋಜಿತವಾಗಿ ಬಜರಂಗ ದಳ ಕಾರ್ಯಕರ್ತ ಹರ್ಷ ಎಂಬ ಯುವಕನನ್ನು ಕೊಲೆ ಮಾಡಿ (Murder) ಇಡೀ ಮಲೆನಾಡನ್ನು ಬೆಚ್ಚಿಬಿಳಿಸಿದ ಹಂತಕ ಪಡೆಯ ಒಂದೊಂದೇ ಡಿಟೇಲ್ಸ್​​ ಭಯಾನಕವಾಗಿದೆ. ಸದ್ಯಕ್ಕೆ ಏಳು ಆರೋಪಿಗಳ ವಿವರವನ್ನು ಶಿವಮೊಗ್ಗ ಪೊಲೀಸರು ಬಹಿರಂಗಪಡಿಸಿದ್ದಾರೆ. ಬಹುತೇಕ ಆರೋಪಿಗಳು ಛೋಟಾಮೋಟಾ ಕೆಲಸಗಳನ್ನು ಮಾಡಿಕೊಂಡು ಜೀವನ ಸಾಗಿಸುತ್ತಿದ್ದವರು. ಟೈಲ್ಸ್ ಕೆಲಸ, ಹಣ್ಣು ಮಾರಾಟ ವ್ಯಾಪಾರ, ಗ್ಯಾರೇಜ್ ಸೇರಿದಂತೆ ಸಣ್ಣ ಸಣ್ಣ ಕೆಲಸ ಮಾಡಿಕೊಂಡಿದ್ದವರು. ಆರೋಪಿಗಳ ಪೈಕಿ ಎಲ್ಲರೂ 20 ರಿಂದ 22 ವರ್ಷ ವಯಸ್ಸಿನವರು ಎನ್ನುವುದು ಅಚ್ಚರಿಯ ಸಂಗತಿಯಾಗಿದೆ. ಎಲ್ಲರೂ ಚಿಗುರು ಮೀಸೆಯ ಯುವಕರೇ. ಆರೋಪಿ ನಂಬರ್ ಒನ್ ಎ1 ಖಾಸಿಫ್ ಮೇಲೆ ಈ ಹಿಂದೆ ವಿವಿಧ ಕೇಸ್ ಗಳಿವೆ. ಹರ್ಷ ಜೊತೆ ಖಾಸಿಫ್ ಜೊತೆ ಗಲಾಟೆ ಆಗಿತ್ತು. ಭಾನುವಾರ ರಾತ್ರಿ ಹತ್ಯೆಗೀಡಾದ ಹರ್ಷ ಹಿಂದುತ್ವ ಮತ್ತು ಬಜರಂಗ ದಳದ ಎಲ್ಲ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದ. ಈ ನಡುವೆ ಇತರ ಯುವಕರಿಗೆ ಹರ್ಷನ (hindutvavadi) ಮೇಲೆ ಸಿಟ್ಟು ಇತ್ತು. ಹೀಗಾಗಿ ಎಲ್ಲ ಯುವಕರು ಸೇರಿ ಕೊಲೆಗೆ ಸ್ಕೆಚ್ ಹಾಕಿದ್ದರು (Shivamogga Bajrang Dal Activist Harsha Murder Case).

ಕೊಲೆಗೆ ಸಿದ್ಧವಾಗಿತ್ತು ಪಕ್ಕಾ ಪ್ಲಾನಿಂಗ್: 2016 ಮತ್ತು 2017 ರಿಂದಲೇ ಹರ್ಷ ವಿರುದ್ದ ಅರೋಪಿಗಳು ಕಣ್ಣಿಟ್ಟಿದ್ದರು. ಹರ್ಷ ಮಸೀದಿಗೆ ಹಂದಿ ಫೋಟೊ ಅಂಟಿಸಿದ್ದ. ಅದು ಪೊಲೀಸ್​ ಕೇಸ್ ಅಗಿದ್ದಾಗಿಂದ ಹರ್ಷ ವಿರುದ್ದ ದ್ವೇಷ ಕಾರುತ್ತಿದ್ದರು. ಈ ನಡುವೆ 2020 ರಲ್ಲಿ ಹರ್ಷ ಮತ್ತು ಖಾಸಿಫ್ ಜೈಲಿನಲ್ಲಿ ಗಲಾಟೆ ಮಾಡಿಕೊಂಡಿದ್ದರು. ನಂತರ ಕೆಲ ತಿಂಗಳ ಹಿಂದೆ ಕೋರ್ಟ್ ಬಳಿ ಹಾಗೂ ಹೊಟೇಲ್ ಮುಂದೆ ಇಬ್ಬರ ಮಧ್ಯೆ ಗಲಾಟೆಗಳಾಗಿದ್ದವು. ಆ ಬಳಿಕ ಹರ್ಷನನ್ನು ಹೊಡೆಯಬೇಕು ಎಂದು ಖಾಸಿಫ್​ ತೀರ್ಮಾನ ಮಾಡಿದ್ದ. ಅದ್ರೆ ಯಾವತ್ತು ಹೊಡೆಯಬೇಕು ಎಂಬುದು ತೀರ್ಮಾನ ಅಗಿರಲಿಲ್ಲ.

ಖಾಸಿಫ್, ತನ್ನ ಸಹಚರರಿಗೆ ಹರ್ಷನ ಚಲನವಲನದ ಬಗ್ಗೆ ನಿಗಾ ಇಡುವಂತೆ ಸೂಚಿಸಿದ್ದ. ಅದರಂತೆ ಕಳೆದ ಎರಡು ತಿಂಗಳಿಂದ ಹರ್ಷಗಾಗಿ ಇತರೆ ಅರೋಪಿಗಳು ಫೀಲ್ಡ್ ಮಾಡಿದ್ದರು. ಹರ್ಷ ಎಲ್ಲಿ ಹೋಗ್ತಾನೆ, ಎಲ್ಲಿ ಬರ್ತಾನೆ, ಯಾವಾಗ ಒಂಟಿ ಅಗಿರ್ತಾನೆ ಅನ್ನೊ ಮಾಹಿತಿ ಕಲೆ ಹಾಕುತಿದ್ದರು. ಹಿಜಾಬ್ ಗಲಾಟೆ ಶುರುವಾಗುತ್ತಿದ್ದಂತೆ ಹರ್ಷನ ಮೇಲೆ ಮತ್ತಷ್ಟು ದ್ವೇಷ ತುಂಬಿಕೊಂಡಿದ್ರು. ಕೃತ್ಯ ನಡೆದ ದಿನ ಹರ್ಷ ಒಬ್ಬನೆ ಇರೋದು ಅರೋಪಿಗಳ ಕಣ್ಣಿಗೆ ಬಿದ್ದಿತ್ತು.

Bajrang Dal Activist Murder Case: ಹರ್ಷ ಹಂತಕರಿಗೆ ಹೆಡೆಮುರಿ ಕಟ್ಟಿದ ಖಾಕಿ! 24 ಗಂಟೆಯಲ್ಲಿ ಆರೋಪಿಗಳಿಗೆ ಖೆಡ್ಡಾ

ಯಾವಾಗಾದ್ರು ಹೊಡೆಯಬೇಕು ಎಂದು ತೀರ್ಮಾನ ಮಾಡಿದ್ದ ಅರೋಪಿಗಳಿಗೆ ಹರ್ಷ ಒಂಟಿ ಬೇಟೆಯಾಗಿದ್ದ. ಯಾವಾಗಲೂ ಚಾಕು ಡ್ಯಾಗರ್ ಗಳನ್ನು ತಮ್ಮ ವಾಹನದಲ್ಲಿ ಅರೋಪಿಗಳು ಇಟ್ಟುಕೊಳ್ಳುತ್ತಿದ್ದರು. ಹರ್ಷನದು ಜಾಸ್ತಿ ಅಗಿದೆ, ಮುಗಿಸಿ ಬಿಡುವಾ ಎಂದು ಅಟ್ಯಾಕ್ ಮಾಡಲು ಸಿದ್ಧವಾಗಿಯೇ ಇದ್ದರು. ಕೊನೆಗೆ ಭಾನುವಾರ ಅಟ್ಯಾಕ್ ಮಾಡಿಯೇ ಬಿಟ್ಟರು. ಹಂತಕ ಪಡೆಯ ಪೈಕಿ ಕೆಲವು ಅರೋಪಿಗಳು ಇನ್ನೂ ತಲೆಮರಿಸಿಕೊಂಡಿದ್ದಾರೆ. ಸದ್ಯ ಆ ಅರೋಪಿಗಳಿಗಾಗಿ ಶಿವಮೊಗ್ಗ ಪೊಲೀಸರು ಬೇಟೆಯಾಡುತ್ತಿದ್ದಾರೆ. ‌

ಇನ್ನು ಶಿವಮೊಗ್ಗದಲ್ಲಿ ಕೊಲೆಗೀಡಾದ ಬಜರಂಗ ದಳ ಕಾರ್ಯಕರ್ತನ ಹರ್ಷ ಪ್ರಖರ ಹಿಂದೂತ್ವವಾದಿಯಾಗಿದ್ದ. ಹಳೆಯ ಶಿವಮೊಗ್ಗದ ಸೀಗೆಹಟ್ಟಿ ಸುತ್ತಮುತ್ತಲಿನ ಭಾಗದಲ್ಲಿ ಬಜರಂಗದಳ ಆಕ್ಟೀವ್ ಕಾರ್ಯಕರ್ತ. ಹಿಂದೂ ವಿಚಾರವಾಗಿ ಏನೇ ಸಣ್ಣ ಪುಟ್ಟ ಸಮಸ್ಯೆಗಳು ಉದ್ಭವಿಸಿದರೂ ಅಲ್ಲಿ ಹರ್ಷ ಎಂಟ್ರಿಕೊಟ್ಟು ಯುವಕರಿಗೆ ಧೈರ್ಯ ತುಂಬುತ್ತಿದ್ದ. ಚಿಕ್ಕ ವಯಸ್ಸಿನಲ್ಲೇ ಹಾರ್ಡ್ ಕೋರ್ ಹಿಂದುತ್ವವಾದಿ ಆಗಿದ್ದು ನೋಡಿ ಸಹಿಸಿಕೊಳ್ಳದ ಕ್ಲರ್ಕ್​ ಪೇಟೆ (Clerk pet) ಆರೋಪಿ ಯುವಕರು ಹರ್ಷ ಹಿಂದುತ್ವ ವಿಚಾರದಲ್ಲಿ ಬೆಳೆಯುತ್ತಿರುವುದನ್ನು ಅರಗಿಸಿಕೊಳ್ಳದಾದರು.

A1 to A7 ಆರೋಪಿ ಯುವಕರ ಬ್ರೀಫ್​ ಹಿಸ್ಟರಿ ಹೀಗಿದೆ: A1 – ಖಸಿಫ್ – 32 ವರ್ಷದ ಈತ ಶಿವಮೊಗ್ಗದ ಕ್ಲರ್ಕ್ ಪೇಟೆ ನಿವಾಸಿ (ವೆಲ್ಡಿಂಗ್ ಕೆಲಸ) A2 – ನದೀಮ್ – 23 ವರ್ಷದ ಈತ ಕೂಡ ಶಿವಮೊಗ್ಗದ ಕ್ಲರ್ಕ್ ಪೇಟೆ ನಿವಾಸಿ(ಟೈಲ್ಸ್) A3 – ಆಸಿಫ್ ಖಾನ್ – 21 ವರ್ಷದ ಈತ (ಗ್ಯಾರೇಜ್, ಪೇಟಿಂಗ್ ಕಳ್ಳತನ) A4 – ರಿಯಾನ್ ಶರೀಫ್ – 22 ವರ್ಷದ ಈತ ಕ್ಲರ್ಕ್ ಪೇಟೆ ನಿವಾಸಿ.. (ಗ್ಯಾರೇಜ್, ಪೇಟಿಂಗ್ ಕಳ್ಳತನ) A6 – ಅಬ್ದುಲ್ ಅಪ್ನಾನ್ – 21 ವರ್ಷ (ಗ್ಯಾರೇಜ್, ಪೇಟಿಂಗ್ ಕಳ್ಳತನ) A7 – ಜಿಲಾನ್ – ಗ್ಯಾರೇಜ್, ಪೇಟಿಂಗ್ ಕಳ್ಳತನ

ಹರ್ಷ ಕೊಲೆ ಪ್ಲಾನ್ ಹೇಗಿತ್ತು? ಅರೆಸ್ಟ್ ಅಗಿರೊ ಅರೋಪಿಗಳು ಯಾವ ರೀತಿ ಯಾವ ಹಂತದಲ್ಲಿ ಕೊಲೆಯಲ್ಲಿ ಭಾಗಿಯಾಗಿದ್ದಾರೆ? ಎಂದು ನೋಡಿದಾಗ ಒಬ್ಬೊಬ್ಬರದ್ದು ಒಂದೊಂದು ರೀತಿಯಲ್ಲಿ ಕೊಲೆಯಲ್ಲಿ ಪಾತ್ರಗಳಿವೆ. ಕೊಲೆ ಬಳಿಕ ಕೆಲವರು ಮನೆಯಲ್ಲಿಯೇ ಇದ್ದರೆ, ಮತ್ತೆ ಕೆಲವರು ಊರು ಬಿಟ್ಟಿದ್ದರು. ಇದುವರೆಗೆ ಅರೆಸ್ಟ್ ಅಗಿರುವ ಅರೋಪಿಗಳ ಪೈಕಿ ಯಾರದು ಯಾವ ಪಾತ್ರ? ಅನ್ನೊ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ:

A1 – ಖಾಸಿಫ್: 32 ವರ್ಷದ ಈತ ಶಿವಮೊಗ್ಗದ ಕ್ಲರ್ಕ್ ಪೇಟೆ ನಿವಾಸಿ…. ಕಾಸಿಫ್ ಗ್ಯಾಂಗ್ ಮತ್ತು ಹರ್ಷನ ಗ್ಯಾಂಗ್ ಗೆ ೨೦೨೦ ರಲ್ಲಿ ಶಿವಮೊಗ್ಗ ಜೈಲಿನಲ್ಲಿ ಗಲಾಟೆಯಾಗಿತ್ತು.. ಅಂದಿನಿಂದ ದ್ವೇಷ ಹೊಂದಿದ್ದ ಖಾಸಿಫ್ ತನ್ನ ಹುಡುಗರನ್ನ ರೆಡಿ ಮಾಡಿ ಅಟ್ಯಾಕ್ ಮಾಡಿಸಿದ್ದ.. ಕೊಲೆ ಮಾಡಿದ್ದ ದಿನ ಈತ ಕೂಡ ಮಚ್ಚು ಬೀಸಿದ್ದ.. ಇವನನ್ನು ಕ್ಲರ್ಕ್ ಪೇಟೆ ಮನೆಯಲ್ಲೇ ಅರೆಸ್ಟ್ ಮಾಡಲಾಗಿದೆ.

A2 – ನದೀಮ್: 23 ವರ್ಷದ ಈತ ಕೂಡ ಶಿವಮೊಗ್ಗದ ಕ್ಲರ್ಕ್ ಪೇಟೆ ನಿವಾಸಿ.. ಕೊಲೆ ಸಂಚಿನಲ್ಲಿ ಭಾಗಿಯಾದ ಆರೋಪ ನದೀಮ್ ಮೇಲಿದೆ.. ಕೊಲೆಯಾದ ದಿನ ಆರೋಪಿಗಳ ರಕ್ಷಣೆಗೆ ಸಹಾಯ ಮಾಡಿದ್ದ. ಈತನನ್ನ ಭಾನುವಾರ ಮಧ್ಯರಾತ್ರಿ ಕ್ಲರ್ಕ್ ಪೇಟೆಯ ಈತನ ಮನೆಯಲ್ಲಿ ವಶಕ್ಕೆ ಪಡೆಯಲಾಗಿತ್ತು.

A3 – ಆಸಿಫ್ ಖಾನ್: 21 ವರ್ಷದ ಈತ ಕೊಲೆ ಮಾಡುವ ಉದ್ದೇಶದಿಂದ ಖಾಸಿಫ್ ಮಾತಿನಂತೆ ಹರ್ಷನ ಮೇಲೆ ಅಟ್ಯಾಕ್ ಮಾಡಿದ್ದ.. ಹರ್ಷನ ಮೇಲೆ ಮಚ್ಚು ಬೀಸಿದ್ದವನಲ್ಲಿ ಎರಡನೆಯವನೇ ಅಸಿಫ್ ಖಾನ್.

A4 – ರಿಯಾನ್ ಶರೀಫ್ @ ಖಸಿ: 22 ವರ್ಷದ ಈತ ಕ್ಲರ್ಕ್ ಪೇಟೆ ನಿವಾಸಿ.. ಕೊಲೆಗೂ ಮೊದಲು ಖಾಸಿಫ್ ನ ಪ್ಲಾನಿಂಗ್ ಮೀಟಿಂಗ್ ನಲ್ಲಿ ಭಾಗಿಯಾಗಿದ್ದ.. ಅಲ್ಲದೆ ಹರ್ಷನ ಮೇಲೆ ಅಟ್ಯಾಕ್ ಮಾಡಿದ್ದ.. ಇವನನ್ನು ಹಾಸನದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ರು, ವಿಚಾರಣೆ ಬಳಿಕ ಅರೆಸ್ಟ್ ಮಾಡಲಾಗಿದೆ.

A5 – ನಿಹಾನ್ @ ಮುಜಾಹಿದ್: ಈತ ಕೂಡ ಹರ್ಷನ ಕೊಲೆ ಮಾಡಿದವರಲ್ಲಿ ಪ್ರಮುಖ.. ವಯಸ್ಸು 23. ಶಿವಮೊಗ್ಗದ ಕ್ಲಾರ್ಕ್ಸ್ ಪೇಟೆ ನಿವಾಸಿ.. ಸ್ನೇಹಿತರ ಗ್ಯಾಂಗ್ ಜೊತೆ ಇದೇ ಕ್ಲರ್ಕ್ ಪೇಟೆಯಲ್ಲಿ ಮೀಟಿಂಗ್ ಮಾಡ್ತಿದ್ದ. ಖಾಸಿಫ್ ನ ಆಣತಿಯಂತೆ ಹರ್ಷನ ಮೇಲೆ ಅಟ್ಯಾಕ್ ಮಾಡಿದ್ದ.. ಪೊಲೀಸ್​​ ತಂಡ ಆರೋಪಿಯನ್ನು ಚಿಕ್ಕಮಗಳೂರಿನಲ್ಲಿ ವಶಕ್ಕೆ ಪಡೆದಿತ್ತು.

A6 – ಅಬ್ದುಲ್ ಅಪ್ನಾನ್: ಈತನ ವಯಸ್ಸು 21 ವರ್ಷ.. ಕೊಲೆಯಲ್ಲಿ ಡೈರೆಕ್ಟಾಗಿ ಭಾಗಿ ಅಲ್ಲದಿದ್ರೂ ಇನ್ ಡೈರೆಕ್ಟ್ ಆಗಿ ಭಾಗಿ.. ಹರ್ಷನ ಚಟುವಟಿಕೆಗಳು, ಹೋಗಿ ಬರುವ ದಾರಿ, ಒಬ್ಬಂಟಿಯಾಗಿದ್ದಾನಾ ಇಲ್ವಾ? ಹೀಗೆ ಪ್ರತಿಯೊಂದೂ ಮಾಹಿತಿಯನ್ನು ಖಾಸಿಫ್ ಗೆ ನೀಡ್ತಿದ್ದ ಆರೋಪಿ.. ಕೊಲೆ ಬಳಿಕ ಆರೋಪಿಗಳ ರಕ್ಷಣೆಗೆ ಪ್ರಯತ್ನ ಪಟ್ಟಿದ್ದ..

A7 – ಜಿಲಾನ್: ಈತ ಕೊಲೆ ನಡೆದ ಬಳಿಕ ಆರೋಪಿಗಳನ್ನ ಕಾರ್ ನಲ್ಲಿ ಕರೆದುಕೊಂಡು ಸ್ಥಳದಿಂದ ಎಸ್ಕೇಪ್ ಆಗಿದ್ದ.. ಕಾರ್ ನಲ್ಲಿ ಭದ್ರಾವತಿ ಕಡೆ ತೆರಳಿದ್ದ.. ಅಲ್ಲಿ ಎಲ್ಲರನ್ನೂ ಡೈವರ್ಟ್ ಮಾಡುವ ಕೆಲಸ ಮಾಡಿದ್ದ.. ಬಳಿಕ ಅರೋಪಿಗಳು ಬೇರೆ ಬೇರೆ ಕಡೆಗೆ ಎಸ್ಕೇಪ್ ಅಗಿದ್ದರು.

ಇದನ್ನೂ ಓದಿ: God Shani Dev: ಲಕ್ಷ್ಮಿ ಬರುವಾಗ ಚಂದ, ಶನಿ ಹೋಗುವಾಗ ಚಂದ! ಇದು ಕೇಳಕ್ಕೆ ಇನ್ನೂ ಚೆನ್ನಾಗಿದೆ! ಏನು ಹಾಗೆಂದರೆ?

ಇದನ್ನೂ ಓದಿ: Aa Dinagalu Chetan kumar: ‘ಆ ದಿನಗಳು’ ಖ್ಯಾತಿಯ ನಟ ಚೇತನ್‌ಗೆ 14 ದಿನ ನ್ಯಾಯಾಂಗ ಬಂಧನ

Published On - 9:28 am, Wed, 23 February 22

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್