Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗದಲ್ಲಿ ಹರ್ಷ ಕೊಲೆ ನಂತರ ಪರಿಸ್ಥಿತಿ ವಿಕೋಪಕ್ಕೆ; ಶಾಂತಿ ಕಾಪಾಡುವಂತೆ ಹರ್ಷನ ಸಹೋದರಿ ಅಶ್ವಿನಿ ಮನವಿ

ಶಿವಮೊಗ್ಗದಲ್ಲಿ ಹರ್ಷ ಕೊಲೆ ನಂತರ ಪರಿಸ್ಥಿತಿ ವಿಕೋಪಕ್ಕೆ; ಶಾಂತಿ ಕಾಪಾಡುವಂತೆ ಹರ್ಷನ ಸಹೋದರಿ ಅಶ್ವಿನಿ ಮನವಿ

TV9 Web
| Updated By: preethi shettigar

Updated on:Feb 23, 2022 | 12:11 PM

ನಿಮ್ಮಲ್ಲಿ ಯಾರಿಗೇ ನೋವಾದರೂ ನನಗೆ ನೋವಾಗುತ್ತದೆ. ಹರ್ಷ‌ನನ್ನು ಕಳೆದುಕೊಂಡು ನೋವಿನಲ್ಲಿದ್ದೇವೆ. ದಯವಿಟ್ಟು ಶಾಂತಿ ಕಾಪಾಡಿಕೊಳ್ಳಿ. ನನ್ನ ಎಲ್ಲಾ ಅಣ್ಣ, ತಮ್ಮಂದಿರು ಸುರಕ್ಷಿತವಾಗಿರಬೇಕು. ನಮಗೆ ಮನುಷ್ಯರು ಮನುಷ್ಯತ್ವ ಮುಖ್ಯ ಎಂದು ಮೃತ ಹರ್ಷನ ಸಹೋದರಿ ಅಶ್ವಿನಿ ಹೇಳಿದ್ದಾರೆ.

ಶಿವಮೊಗ್ಗ: ಜಿಲ್ಲೆಯಲ್ಲಿ ಬಜರಂಗದಳದ ಕಾರ್ಯಕರ್ತ ಹರ್ಷನ ಕೊಲೆಯ ನಂತರ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಹೀಗಾಗಿ ಮೃತ ಹರ್ಷನ ಸಹೋದರಿ ಅಶ್ವಿನಿ, ಶಾಂತಿ ಕಾಪಾಡುವಂತೆ ಟಿವಿ9 ಮೂಲಕ ಮನವಿ ಮಾಡಿದ್ದಾರೆ. ಎಲ್ಲರೂ ನನ್ನ ಸಹೋದರರೆ. ಹಿಂದೂ ಮುಸ್ಲಿಂ ಎಲ್ಲರೂ ಮನುಷ್ಯರೆ. ಹಿಂದೂ ಮುಸ್ಲಿಂ ಗಲಾಟೆ ಬೇಡ. ಪ್ರತಿಯೊಬ್ಬರು ನನ್ನ ಅಣ್ಣ ತಮ್ಮಂದಿರೇ. ನಿಮ್ಮಲ್ಲಿ ಯಾರಿಗೇ ನೋವಾದರೂ ನನಗೆ ನೋವಾಗುತ್ತದೆ. ಹರ್ಷ‌ನನ್ನು ಕಳೆದುಕೊಂಡು ನೋವಿನಲ್ಲಿದ್ದೇವೆ. ದಯವಿಟ್ಟು ಶಾಂತಿ ಕಾಪಾಡಿಕೊಳ್ಳಿ. ನನ್ನ ಎಲ್ಲಾ ಅಣ್ಣ, ತಮ್ಮಂದಿರು ಸುರಕ್ಷಿತವಾಗಿರಬೇಕು. ನಮಗೆ ಮನುಷ್ಯರು ಮನುಷ್ಯತ್ವ ಮುಖ್ಯ ಎಂದು ಹೇಳಿದ್ದಾರೆ.

ನಿಮ್ಮಲ್ಲಿ ನಾನು ಭಿಕ್ಷೆ ಕೇಳುತ್ತೇನೆ ಶಾಂತಿ ಕಾಪಾಡಿಕೊಳ್ಳಿ. ಮನೆಯವರ ಬಗ್ಗೆ ಯೋಚನೆ ಮಾಡಿ. ಎಲ್ಲರೂ ಆರಾಮಗಿರಿ, ಖುಷಿಯಾಗಿರಿ. ಹರ್ಷ ದೇಶಕ್ಕಾಗಿ ಪ್ರಾಣ ಬಿಟ್ಟಿದ್ದಾನೆ. ಹಿಂದೂ- ಮುಸ್ಲಿಂ ಎಲ್ಲರೂ ಮನುಷ್ಯರೇ. ಎಲ್ಲರಿಗೂ ನೋವಾಗುತ್ತದೆ. ಎಲ್ಲರಿಗೂ ರಕ್ತ ಬರುತ್ತದೆ. ಅಪ್ಪ-ಅಮ್ಮನ ಬಗ್ಗೆ ಯೋಚನೆ ಮಾಡಿ ಎಂದು ಹರ್ಷ ಸಹೋದರಿ ಅಶ್ವಿನಿ ಮನವಿ ಮಾಡಿದ್ದಾರೆ.

ಇದನ್ನೂ ಓದಿ:

ಶಿವಾಜಿ ರೂಪದಲ್ಲಿ ಚಿತ್ರ ಬಿಡಿಸಿ ಹರ್ಷನಿಗೆ ಶ್ರದ್ಧಾಂಜಲಿ; ಸಾಮಾಜಿಕ ಜಾಲತಾಣದಲ್ಲಿ ವೈರಲ್

ಒಂಟಿ ಬೇಟೆ ಹರ್ಷನನ್ನು ಕ್ಲರ್ಕ್ ಪೇಟೆ ಯುವಕರು ಹತ್ಯೆ ಮಾಡಿದ ಇಂಚಿಂಚು ಮಾಹಿತಿ ಇಲ್ಲಿದೆ -TV9 Exclusive

Published on: Feb 23, 2022 12:06 PM