ಹಿಂದೂಗಳಿಗೆ ರಕ್ಷಣೆ ಒದಗಿಸಲಾಗದ ಇದು ನಿರ್ವೀರ್ಯ ಸರ್ಕಾರ ಎಂದರು ಚಕ್ರವರ್ತಿ ಸೂಲಿಬೆಲೆ
ಈಶ್ವರಪ್ಪ ಶವಯಾತ್ರೆಯಲ್ಲಿ ಪಾಲ್ಗೊಂಡು ಒಂದೆರಡು ತಾಸುಗಳನ್ನು ಹರ್ಷನ ಕುಟುಂಬದೊಂದಿಗೆ ಕಳೆದರೆ ಏನು ಸಾಧಿಸಿದಂತಾಯ್ತು? ಶಿವಮೊಗ್ಗ ಉರಿಯುವ ಕೆಂಡದ ಹಾಗೆ ಅಂತ ಗೊತ್ತಿದ್ದರೂ ಸರ್ಕಾರ ಕಳೆದ 4 ವರ್ಷಗಳಿಂದ ಸರ್ಕಾರ ಏನೆಂದರೆ ಏನೂ ಮಾಡಿಲ್ಲ ಎಂದು ಸೂಲಿಬೆಲೆ ಕಿಡಿಕಾರಿದರು.
ಶಿವಮೊಗ್ಗನಲ್ಲಿ ರವಿವಾರ ಕೊಲೆಯಾದ ಭಜರಂಗದಳ ಕಾರ್ಯಕರ್ತ ಹರ್ಷನ ಮನೆಗೆ ಜನರು ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ನೀಡುತ್ತಿದ್ದಾರೆ. ಮಂಗಳವಾರ ಆಗಮಿಸಿದವರಲ್ಲಿ ಲೇಖಕ ಮತ್ತು ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarty Sulibele) ಸಹ ಒಬ್ಬರು. ನಂತರ ಮಾಧ್ಯಮವರೊಂದಿಗೆ ಮಾತಾಡಿದ ಅವರು, ಮುಸಲ್ಮಾನರು (Muslims) ಭಯದ ವಾತಾವರಣ ನಿರ್ಮಿಸಿದ್ದಾರೆ, ಹಿಂದೂಗಳು ಮನೆಯಿಂದ ಹೊರಗೆ ಬರಲು ಸಹ ಹೆದರುವ ಸ್ಥಿತಿ ನಿರ್ಮಿಸಬೇಕೆನ್ನುವುದು ಅವರು ಉದ್ದೇಶವಾಗಿದೆ, ಹಿಂದೂಗಳ ಮನಸ್ಸಿನಲ್ಲಿ ಅತಂಕ ಸೃಷ್ಟಿಸುವಲ್ಲಿ ಅವರು ಯಶ ಕಂಡಿದ್ದಾರೆ ಎಂದು ಹೇಳಿದರು. ನಮ್ಮ ದೇಶದಲ್ಲಿ ಹಿಂದೂಗಳಿಗೆ ಬಾಬರ್ (Babar), ಅಕ್ಬರ್ (Akbar), ಔರಂಗಜೇಬ (Aurangazeb) ಮೊದಲಾದವರ ಆಳ್ವಿಕೆಯ ಕಾಲಕ್ಕೆ ವಾಪಸ್ಸು ಹೋಗುವ ಸ್ಥಿತಿ ನಿರ್ಮಾಣವಾಗಿದ್ದು ದುರಂತ, ಹಿಂದೂಗಳು ಸರ್ಕಾರಕ್ಕೆ ಈಗ ಒಂದೇ ಪ್ರಶ್ನೆ ಕೇಳಬೇಕಾಗಿದೆ-ಹಿಂದೂಗಳ ರಕ್ಷಣೆ ನಿಮ್ಮಿಂದ ಸಾಧ್ಯವೇ ಅಥವಾ ಅದನ್ನು ಅವರೇ ಮಾಡಿಕೊಳ್ಳಬೇಕೆ? ಎಂದು ಸೂಲಿಬೆಲೆ ಸರ್ಕಾರವನ್ನು ಮೂದಲಿಸಿದರು.
ಅದಾದ ಮೇಲೆ ಸೂಲಿಬೆಲೆ ಅವರು ಆಡಳಿತಾರೂಢ ಬಿಜೆಪಿ ಸರ್ಕಾರವನ್ನು ನಿರ್ವೀರ್ಯ ಸರ್ಕಾರ ಎಂದು ಬಣ್ಣಿಸಿದರು. ಹರ್ಷನ ಶವಯಾತ್ರೆ ನಡೆಯುವಾಗ ಕಲ್ಲೆಸದವರ ಮೇಲೆ ಯಾಕೆ ಸರ್ಕಾರ ಕ್ರಮ ತೆಗೆದುಕೊಂಡಿಲ್ಲ? ಈಶ್ವರಪ್ಪ ಶವಯಾತ್ರೆಯಲ್ಲಿ ಪಾಲ್ಗೊಂಡು ಒಂದೆರಡು ತಾಸುಗಳನ್ನು ಹರ್ಷನ ಕುಟುಂಬದೊಂದಿಗೆ ಕಳೆದರೆ ಏನು ಸಾಧಿಸಿದಂತಾಯ್ತು? ಶಿವಮೊಗ್ಗ ಉರಿಯುವ ಕೆಂಡದ ಹಾಗೆ ಅಂತ ಗೊತ್ತಿದ್ದರೂ ಸರ್ಕಾರ ಕಳೆದ 4 ವರ್ಷಗಳಿಂದ ಸರ್ಕಾರ ಏನೆಂದರೆ ಏನೂ ಮಾಡಿಲ್ಲ ಎಂದು ಸೂಲಿಬೆಲೆ ಕಿಡಿಕಾರಿದರು.
4-5 ಜನರನ್ನು ಬಂಧಿಸಿರುವುದೇ ಸರ್ಕಾರದ ದೊಡ್ಡ ಸಾಧೆನೆಯೇ? ಅದರ ಕೆಲಸವೇ ಅದು. ಎಲ್ಲ ವ್ಯವಸ್ಥೆಗಳನ್ನು ತನ್ನ ಅಧೀನದಲ್ಲಿಟ್ಟುಕೊಂಡು ಬಂಧಿಸಿದ್ದೇ ದೊಡ್ಡ ಸಾಧನೆ ಎಂದು ಸರ್ಕಾರ ಹೇಳುವುದು ನಾಚಿಕೆಗೇಡಿನ ಸಂಗತಿ ಎಂದು ಸೂಲಿಬೆಲೆ ಹೇಳಿದರು.
ಇದನ್ನೂ ಓದಿ: ಸೆಕ್ಷನ್ 144 ಜಾರಿಯಲ್ಲಿದ್ದರೂ ಹರ್ಷನ ಮೃತದೇಹ ಮೆರವಣಿಗೆ ಅನುಮತಿ ಯಾಕೆ ನೀಡಲಾಯಿತು? ಸಿದ್ದರಾಮಯ್ಯ