ಶಿವಮೊಗ್ಗನಲ್ಲಿ ಮಂಗಳವಾರ ಯಾವುದೇ ಅಹಿತಕರ ಘಟನೆ ಜರುಗಲಿಲ್ಲವಾದರೂ ಬೂದಿ ಮುಚ್ಚಿದ ಕೆಂಡದಂಥ ಸ್ಥಿತಿ ಇದೆ

ಶಿವಮೊಗ್ಗನಲ್ಲಿ ಮಂಗಳವಾರ ಯಾವುದೇ ಅಹಿತಕರ ಘಟನೆ ಜರುಗಲಿಲ್ಲವಾದರೂ ಬೂದಿ ಮುಚ್ಚಿದ ಕೆಂಡದಂಥ ಸ್ಥಿತಿ ಇದೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Feb 22, 2022 | 8:39 PM

ನಗರದಲ್ಲಿ ಜನ ಮನೆ ಬಿಟ್ಟು ಆಚೆ ಬರಲು ಹಿಂಜರಿಯುತ್ತಿದ್ದಿದ್ದು ಸ್ಪಷ್ಟವಾಗಿತ್ತು. ನಿಷೇದಾಜ್ಞೆಯ ಹಿನ್ನೆಲೆ ಮತ್ತು ಪೊಲೀಸರು ಗಸ್ತು ತಿರುಗುತ್ತಿದ್ದರಿಂದ ನಗರ ಕೋಟೆಯಂತೆ ಮಾರ್ಪಟ್ಟು ಎಲ್ಲೆಡೆ ಶಾಂತಿ ನೆಲೆಸಿದ್ದು ಸತ್ಯ, ಆದರೆ ಅದನ್ನೇ ವಾಸ್ತವ ಅಂತ ಪರಿಗಣಿಸಲಾಗದು.

ಬಜರಂಗದಳದ (Bajrang Dal) ಕಾರ್ಯಕರ್ತ ಹರ್ಷ ಅವರ ಕೊಲೆ ನಡೆದು ಮೂರು ದಿನಕಳೆದರೂ ಶಿವಮೊಗ್ಗ ನಗರದಲ್ಲಿ (Shivamogga city) ಪರಿಸ್ಥಿತಿ ಈಗಲೂ ಬಿಗುವಿನಿಂದ (tense) ಕೂಡಿದೆ. ಜಿಲ್ಲಾಡಳಿತ ನಿಷೇದಾಜ್ಞೆ (prohibitory orders) ಜಾರಿಗೊಳಿಸಿರುವುದರಿಂದ ನಗರದ ರಸ್ತೆಗಳಲ್ಲಿ ಮಂಗಳವಾರ ಜನಸಂಚಾರ ಬಹಳ ಕಡಿಮೆ ಇತ್ತು. ನಗರದ ಪ್ರಮುಖ ರಸ್ತೆಗಳಲ್ಲಿ ಅದರಲ್ಲೂ ಮುಖ್ಯವಾಗಿ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿರುವ ಬಿ ಹೆಚ್ ರಸ್ತೆಯನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಬ್ಯಾರಿಕೇಡ್ ಗಳನ್ನಿಟ್ಟು ಪೊಲೀಸರು ಗಸ್ತು ಕಾಯುತ್ತಿದ್ದರು. ಮಂಗಳವಾರ ಸಾಯಂಕಾಲದರೆಗೆ ನಗರದ ಯಾವುದೇ ಮೂಲೆಯಿಂದ ಅಹಿತಕರ ಘಟನೆ ವರದಿಯಾಗಿಲ್ಲ. ಮತ್ತೊಂದು ಮುಖ್ಯ ಅಂಶವೆಂದರೆ, ಮೂರು ದಿನಗಳವರೆಗೆ ಅಂದರೆ ಬುಧವಾರದವರೆಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ನಗರದಲ್ಲಿ ಜನ ಮನೆ ಬಿಟ್ಟು ಆಚೆ ಬರಲು ಹಿಂಜರಿಯುತ್ತಿದ್ದಿದ್ದು ಸ್ಪಷ್ಟವಾಗಿತ್ತು. ನಿಷೇದಾಜ್ಞೆಯ ಹಿನ್ನೆಲೆ ಮತ್ತು ಪೊಲೀಸರು ಗಸ್ತು ತಿರುಗುತ್ತಿದ್ದರಿಂದ ನಗರ ಕೋಟೆಯಂತೆ ಮಾರ್ಪಟ್ಟು ಎಲ್ಲೆಡೆ ಶಾಂತಿ ನೆಲೆಸಿದ್ದು ಸತ್ಯ, ಆದರೆ ಅದನ್ನೇ ವಾಸ್ತವ ಅಂತ ಪರಿಗಣಿಸಲಾಗದು. ಶಿವಮೊಗ್ಗ ನಗರದಲ್ಲಿ ಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಹಿಜಾಬ್ ವಿವಾದ ಬಿಸಿಯಾಗಿರುವಾಗಲೇ ಹರ್ಷನ ಕೊಲೆ ನಡೆದಿರುವುದರಿಂದ ಅಹಿತಕರ ಘಟನೆಗಳು ನಡೆಯಬಹುದೆಂದು ಶಂಕಿಸಲಾಗಿದೆ. ಆದರೆ, ನಗರದ ಪೊಲೀಸರು ಯಾವುದೇ ಅಂಥ ಘಟನೆಗೆ ಅಸ್ಪದ ನೀಡದೆ ಗಸ್ತು ತಿರುಗುತ್ತಿದ್ದಾರೆ.

ಇಲ್ಲಿ ಗಮನಿಸಬೇಕಾದ ಮತ್ತೊಂದು ಸಂಗತಿಯೇನೆಂದರೆ, ಶಿವಮೊಗ್ಗ ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಮೊದಲಾದ ಗಣ್ಯರ ತವರು ಜಿಲ್ಲ್ಲೆಯಾಗಿದೆ. ಕೈ ಮೀರುವಂಥ ಸ್ಥಿತಿ ಇಲ್ಲಿ ಉಂಟಾದರೆ, ವಿರೋಧ ಪಕ್ಷದವರು ಪ್ರಶ್ನೆಗಳನ್ನು ಎತ್ತುವುದು ಸಹಜವೇ.

ಇದನ್ನೂ ಓದಿ:   ಭಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ: ಕಾಂಗ್ರೆಸ್​ ಗದ್ದಲವೇ ಕೊಲೆಗೆ ಕಾರಣ ಎಂದು ಆರೋಪಿಸಿದ ಸಿಎಂ ಬೊಮ್ಮಾಯಿ