ಜಾಮೀನು ಸಿಕ್ಕರೂ ನಟ ಚೇತನ್ಗೆ ಇಲ್ಲ ಬಿಡುಗಡೆ ಭಾಗ್ಯ! ಕಾರಣವಿಷ್ಟೆ
ಫೆಬ್ರವರಿ 23ಕ್ಕೆ 8ನೇ ಎಸಿಎಂಎಂ ಕೋರ್ಟ್ ಮುಂದೆ ಚೇತತ್ನ ಹಾಜರುಪಡಿಸಲಾಗಿತ್ತು. ಈ ವೇಳೆ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ (Court) ಆದೇಶ ಹೊರಡಿಸಿತ್ತು.
ಸದಾ ವಿವಾದದ ಮೂಲಕ ಸುದ್ದಿಯಾಗುವ ನಟ ಚೇತನ್ (Actor Chetan) ಅವರು ಆಕ್ಷೇಪಾರ್ಹ ಟ್ವೀಟ್ ಮಾಡಿ ಫೆಬ್ರವರಿ 22ಕ್ಕೆ ಬಂಧನಕ್ಕೊಳಗಾಗಿದ್ದರು. ಫೆಬ್ರವರಿ 23ಕ್ಕೆ 8ನೇ ಎಸಿಎಂಎಂ ಕೋರ್ಟ್ ಮುಂದೆ ಚೇತತ್ನ ಹಾಜರುಪಡಿಸಲಾಗಿತ್ತು. ಈ ವೇಳೆ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ (Court) ಆದೇಶ ಹೊರಡಿಸಿತ್ತು. ಈಗ 32 ನೇ ಎಸಿಎಂಎಂ ನ್ಯಾಯಾಲಯದಿಂದ ಚೇತನ್ಗೆ ಜಾಮೀನು ಸಿಕ್ಕಿದೆ. ಕೆಲ ಷರತ್ತುಗಳನ್ನು ಹಾಕಿ ಜಾಮೀನು ನೀಡಲಾಗಿದೆ. ಇದರಿಂದ ನಟನಿಗೆ ರಿಲೀಫ್ ಸಿಲ್ಲಿದೆ. ಆದರೆ ಚೇತನ್ಗೆ ಜಾಮೀನು ಸಿಕ್ಕರೂ ಇಂದು (ಫೆ.26) ಬಿಡುಗಡೆ ಭಾಗ್ಯ ಇಲ್ಲ. ಚೇತನ್ಗೆ ಸಂಬಂಧಿಸಿದ ಶ್ಯೂರಿಟಿ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆ ಇನ್ನೂ ಇರಡು ದಿನ ಜೈಲಿನಲ್ಲಿ ಉಳಿಯುತ್ತಾರೆ. ಇಂದು ನಾಲ್ಕನೇ ಶನಿವಾರ ಮತ್ತು ನಾಳೆ ಭಾನುವಾರ ಆಗಿರುವ ಕಾರಣ ಸರ್ಕಾರ ರಜೆ ಇದೆ. ಹೀಗಾಗಿ ಚೇತನ್ಗೆ ಜಾಮೀನು ಸಿಕ್ಕರೂ ಇಂದು ಬಿಡುಗಡೆ ಆಗುತ್ತಿಲ್ಲ. ಸೋಮವಾರ ಬಾಂಡ್ ಪ್ರಕ್ರಿಯೆ ಪೂರೈಸಿದ ಬಳಿಕ ಜೈಲು ವಾಸದಿಂದ ಮುಕ್ತರಾಗುತ್ತಾರೆ.
ಇದನ್ನೂ ಓದಿ
ಶಾಲೆಯಿಂದ ವಾಪಸಾಗುತ್ತಿದ್ದಾಗ ಹುಡುಗಿಯ ಅಡ್ಡಗಟ್ಟಿ, ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದ ದುಷ್ಕರ್ಮಿಗಳು

ಸಿಎಂರನ್ನು ಉದ್ದೇಶಪೂರ್ವಕವಾಗಿ ಆಹ್ವಾನಿಸಿಲ್ಲವಾದರೆ ಖಂಡನಾರ್ಹ: ರಾಜಣ್ಣ

ಟನಲ್ ಯೋಜನೆಯಲ್ಲಿ ಭ್ರಷ್ಟಾಚಾರ ಆರೋಪ: ತೇಜಸ್ವಿ ಸೂರ್ಯಗೆ ಸಿಎಂ ತಿರುಗೇಟು

ಬಿ.ಸಿ. ಪಾಟೀಲ್ ಸಿನಿಮಾಗೆ ಸಮಸ್ಯೆ ಆದಾಗ ಸಹಾಯ ಮಾಡಿದ್ದ ಬಿ. ಸರೋಜಾದೇವಿ

ಪ್ರತಿಭಟನೆಯ ಭಾಗವಾಗೇ ನಿತಿನ್ ಗಡ್ಕರಿಗೆ ಪತ್ರ ಬರೆದಿರೋದು: ಸಿದ್ದರಾಮಯ್ಯ
