Russia Ukraine War: ಉಕ್ರೇನ್​ ಯುದ್ಧದ ಎಫೆಕ್ಟ್​ಗೆ ರಷ್ಯಾದ 22 ಶ್ರೀಮಂತರ 2.93 ಲಕ್ಷ ಕೋಟಿ ರೂಪಾಯಿ ಒಂದೇ ದಿನ ಉಡೀಸ್

ರಷ್ಯಾ- ಉಕ್ರೇನ್​ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಷ್ಯಾದ ಟಾಪ್ 22 ಶ್ರೀಮಂತರು ಒಂದೇ ದಿನದಲ್ಲಿ 2.93 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ.

Russia Ukraine War: ಉಕ್ರೇನ್​ ಯುದ್ಧದ ಎಫೆಕ್ಟ್​ಗೆ ರಷ್ಯಾದ 22 ಶ್ರೀಮಂತರ 2.93 ಲಕ್ಷ ಕೋಟಿ ರೂಪಾಯಿ ಒಂದೇ ದಿನ ಉಡೀಸ್
ವ್ಲಾಡಿಮಿರ್ ಪುಟಿನ್
Follow us
| Updated By: Srinivas Mata

Updated on: Feb 26, 2022 | 7:46 AM

ರಷ್ಯಾ ದಾಳಿ ಮಾಡಿದ್ದರಿಂದ ಉಕ್ರೇನ್​ ಮಾತ್ರ ಕಡು ಕಷ್ಟ ಪಡುತ್ತಿದೆ ಎಂಬುದು ದೊಡ್ಡ ಸಂಖ್ಯೆಯಲ್ಲಿ ಇರುವವರ ನಂಬಿಕೆ. ವಾಸ್ತವ ಏನೆಂದರೆ, ಇದರಿಂದ ರಷ್ಯನ್ನರಿಗೂ ನುಕ್ಸಾನು ಆಗಿದೆ. ಅದು ಹೇಗೆ ಅಂತೀರಾ? ಉಕ್ರೇನ್​ ಮೇಲೆ ರಷ್ಯಾ ದಾಳಿ (Russia War On Ukraine) ನಡೆಸಿದ ಮೇಲೆ 24 ಗಂಟೆಯೊಳಗಾಗಿ ಆ ದೇಶದ ಅತಿ ಶ್ರೀಮಂತರು ಎನಿಸಿಕೊಂಡ 22 ಮಂದಿಯ ಒಟ್ಟಾರೆ ಆಸ್ತಿಯಲ್ಲಿ 3900 ಕೋಟಿ ಅಮೆರಿಕನ್ ಡಾಲರ್ ನಷ್ಟವಾಗಿದೆ. ಭಾರತದ ರೂಪಾಯಿ ಲೆಕ್ಕದಲ್ಲಿ ನೋಡುವುದಾದರೆ 2,92,849.83 ಕೋಟಿ ಕರಗಿ ಹೋಗಿದೆ. ಇದು ಯಾಕೆ ಹೀಗಾಯಿತು ಅಂತ ನೋಡುವುದಾದರೆ, ರಷ್ಯಾದ ಸೂಚ್ಯಂಕವಾದ MOEX ಗುರುವಾರದಂದು ಶೇ 33ರಷ್ಟು ನೆಲ ಕಚ್ಚಿದೆ. ಆ ಹಿನ್ನೆಲೆಯಲ್ಲಿ ಈ ಸಿರಿವಂತರ ಸಂಪತ್ತು ನಷ್ಟವಾಗಿದೆ. ಈ ಶ್ರೀಮಂತರು 2022ನೇ ಇಸವಿಯಲ್ಲಿ ಜನವರಿ 1ನೇ ತಾರೀಕಿನಿಂದ ಫೆಬ್ರವರಿ 23ನೇ ತಾರೀಕಿನ ತನಕ ಅನುಭವಿಸಿದ ನಷ್ಟಕ್ಕಿಂತ ಫೆಬ್ರವರಿ 24ನೇ ತಾರೀಕಿನ ಒಂದೇ ದಿನ ಹೆಚ್ಚು ಹಣ ಕಳೆದುಕೊಂಡಿದ್ದಾರೆ ಎಂದು ಬ್ಲೂಮ್​ಬರ್ಗ್ ತಿಳಿಸಿದೆ.

ಅತಿ ಹೆಚ್ಚಿ ಸಂಪತ್ತು ನಷ್ಟ ಅನುಭವಿಸಿರುವವರು ವಗಿಟ್ ಅಲೆಕ್​ಪೆರೊವ್. ಅವರು ಮಾಸ್ಕೋ ಮೂಲದ ತೈಲ ಕಂಪೆನಿ ಲುಕ್​ಆಯಿಲ್ ಅಧ್ಯಕ್ಷ. ಆ ಕಂಪೆನಿಯ ಷೇರಿನ ಬೆಲೆ ಒಂದೇ ದಿನದಲ್ಲಿ ಶೇ 32ರಷ್ಟು ನೆಲ ಕಚ್ಚಿದ್ದರಿಂದ ಅವರ ಆಸ್ತಿ ಶೇ 33.33ರಷ್ಟು ಕೊಚ್ಚಿಹೋಗಿದೆ. ಸದ್ಯಕ್ಕೆ ಅವರ ಆಸ್ತಿ ಮೌಲ್ಯ 1300 ಕೋಟಿ ಅಮೆರಿಕನ್ ಡಾಲರ್. ಅದಕ್ಕೂ ಮುನ್ನ ಇದ್ದದ್ದು 1920 ಕೋಟಿ ಅಮೆರಿಕನ್ ಡಾಲರ್ ಎಂದು ಬ್ಲೂಮ್​ಬರ್ಗ್ ವರದಿ ಮಾಡಿದೆ. ರಷ್ಯಾದ ಅತಿ ಶ್ರೀಮಂತ ವ್ಯಕ್ತಿ (ಯಾರಿಗೂ ಎಷ್ಟು ಶ್ರೀಮಂತಿಕೆ ಎಂಬ ಅಂದಾಜಿಲ್ಲ) ಆದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ 300 ಕೋಟಿ ಅಮೆರಿಕನ್ ಡಾಲರ್ ನಷ್ಟ ಅನುಭವಿಸಿದ್ದಾರೆ. ಇದಕ್ಕೆ ಕಾರಣ ಏನೆಂದರೆ, ಅವರ ಅಧ್ಯಕ್ಷತೆಯ ನೊರಿಲ್​ಸ್ಕ್ ನಿಕಲ್ ಕಂಪೆನಿ ಷೇರಿನ ಬೆಲೆ ಶೇ 26ರಷ್ಟು ನಷ್ಟ ಅನುಭವಿಸಿದೆ.

ರಷ್ಯಾದ ಅತಿ ಶ್ರೀಮಂತ ಹತ್ತು ಮಂದಿಯ ಪಟ್ಟಿ ಹಾಗೂ ಅವರ ನಿವ್ವಳ ಆಸ್ತಿ ಮೌಲ್ಯ, ಒಂದೇ ದಿನದಲ್ಲಿ ಅನುಭವಿಸಿದ ನಷ್ಟದ ವಿವರ ಇಲ್ಲಿದೆ:

ವ್ಲಾಡಿಮಿರ್ ಪುಟಿನ್- 2610 ಕೋಟಿ ಯುಎಸ್​ಡಿ: -300 ಕೋಟಿ ಡಾಲರ್ ನಷ್ಟ

ಅಲೆಕ್ಸಿ ಮೊರದಶೋ- 2300 ಕೋಟಿ ಯುಎಸ್​ಡಿ: -420 ಕೋಟಿ ಡಾಲರ್ ನಷ್ಟ

ಲಿಯೊನಿದ್ ಮಿಖೆಲ್ಸನ್- 2240 ಕೋಟಿ ಯುಎಸ್​ಡಿ: -390 ಕೋಟಿ ಡಾಲರ್ ನಷ್ಟ

ಅಲಿಶೆರ್​ ಉಸ್ಮನೊವ್​- 2030 ಕೋಟಿ ಯುಎಸ್​ಡಿ: -120 ಕೋಟಿ ಡಾಲರ್ ನಷ್ಟ

ಆಂಡ್ರೆ ಮೆಲ್ನಿಕೆಂಕೊ- 1860 ಕೋಟಿ ಯುಎಸ್​ಡಿ: -100 ಕೋಟಿ ಡಾಲರ್ ಹೆಚ್ಚಳ

ವಿಕ್ಟೊರ್ ವೆಕ್ಸೆಲ್​ಬರ್ಗ್- 1720 ಕೋಟಿ ಯುಎಸ್​ಡಿ: 40 ಕೋಟಿ ಡಾಲರ್ ನಷ್ಟ

ಮಿಖಾಯಿಲ್ ಪ್ರೊಖೊರೊವ್- 1360 ಕೋಟಿ ಯುಎಸ್​ಡಿ: 10 ಕೋಟಿ ಡಾಲರ್​ ನಷ್ಟ

ರೋಮನ್ ಅಬ್ರಮುವಿಕ್- 1330 ಕೋಟಿ ಯುಎಸ್​ಡಿ: 180 ಕೋಟಿ ಡಾಲರ್ ನಷ್ಟ

ವಗಿಟ್ ಅಲೆಕ್​ಪೆರೊವ್- 1300 ಕೋಟಿ ಯುಎಸ್​ಡಿ: 620 ಕೋಟಿ ಡಾಲರ್ ನಷ್ಟ

ಇದನ್ನೂ ಓದಿ: ‘ಏನು ಮಾಡುತ್ತೀರೋ ಮಾಡಿಕೊಳ್ಳಿ’; ಸಾಯುವ ಮುನ್ನ ಧೈರ್ಯದಿಂದ ರಷ್ಯಾ ಪಡೆಯನ್ನು ಎದುರಿಸಿದ ಉಕ್ರೇನ್ ಸೈನಿಕರು

ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ