Nifty Next 50 Index: ಝೊಮ್ಯಾಟೊ, ಪೇಟಿಎಂ, ನೈಕಾ ನಿಫ್ಟಿ ನೆಕ್ಸ್ಟ್ 50 ಸೂಚ್ಯಂಕಕ್ಕೆ ಸೇರ್ಪಡೆ

ಝೊಮ್ಯಾಟೊ, ಪೇಟಿಎಂ, ನೈಕಾ ಸೇರಿದಂತೆ ಇತರ ಸ್ಟಾಕ್​ಗಳನ್ನು ನಿಫ್ಟಿ ನೆಕ್ಸ್ಟ್ 50 ಸೂಚ್ಯಂಕದಲ್ಲಿ ಸೇರ್ಪಡೆ ಮಾಡುವುದಕ್ಕೆ ತೀರ್ಮಾನ ಮಾಡಲಾಗಿದೆ.

Nifty Next 50 Index: ಝೊಮ್ಯಾಟೊ, ಪೇಟಿಎಂ, ನೈಕಾ ನಿಫ್ಟಿ ನೆಕ್ಸ್ಟ್ 50 ಸೂಚ್ಯಂಕಕ್ಕೆ ಸೇರ್ಪಡೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Feb 26, 2022 | 1:49 PM

ಮುಂಬರುವ ಅರೆ- ವಾರ್ಷಿಕ ಸೂಚ್ಯಂಕ ಪರಿಶೀಲನೆಯಲ್ಲಿ ಹೊಸದಾಗಿ ಲಿಸ್ಟ್ ಆದ ಝೊಮ್ಯಾಟೋ, ಒನ್​97 ಕಮ್ಯುನಿಕೇಷನ್ಸ್ (ಪೇಟಿಎಂ), ಎಫ್​ಎಸ್​ಎನ್​ ಇ-ಕಾಮರ್ಸ್ ವೆಂಚರ್ಸ್ (ನೈಕಾ) ಅನ್ನು ನಿಫ್ಟಿ (Nifty) ಮುಂದಿನ 50ರ ಸೂಚ್ಯಂಕದಲ್ಲಿ ಸೇರ್ಪಡೆ ಮಾಡಲಾಗುವುದು. ಪರಿಷ್ಕೃತ ಪಟ್ಟಿಯು ಮಾರ್ಚ್ 31ರಿಂದ ಅನ್ವಯ ಆಗುತ್ತದೆ. ಎಸ್​ಆರ್​ಎಫ್​, ಇಂಡಿಯನ್ ಆಯಿಲ್ ಮತ್ತು ಮೈಂಡ್​ಟ್ರೀ ಸಹ ಒಳಗೊಳ್ಳಲಿದೆ. ಇವುಗಳು ಕ್ರಮವಾಗಿ 4.7 ಕೋಟಿ ಡಾಲರ್, 4 ಕೋಟಿ ಡಾಲರ್ ಮತ್ತು 3.3 ಕೋಟಿ ಡಾಲರ್ ಒಳಹರಿವು ಕಾಣಲಿದೆ. ಮಾರುಕಟ್ಟೆ ತಜ್ಞರ ಪ್ರಕಾರ, ವಿನಿಮಯ ಕೇಂದ್ರದಿಂದ ಘೋಷಣೆ ಮಾಡಿದ ಪ್ರಕಾರ, ಹೊಸದಾದ ಅರ್ಹತಾ ಮಾನದಂಡಗಳ ಮಾರ್ಪಾಟಿನ ನಂತರ, ಕಳೆದ ವರ್ಷ ಲಿಸ್ಟ್ ಆದಂಥ ಈ ಸ್ಟಾಕ್​ಗಳು ಸೂಚ್ಯಂಕಕ್ಕೆ ಸೇರ್ಪಡೆ ಆಗಿವೆ.

ಎನ್​ಎಸ್​ಇ ಸೂಚ್ಯಂಕ ಲಿಮಿಟೆಡ್​ನ ಸೂಚ್ಯಂಕ ನಿರ್ವಹಣೆ ಉಪ-ಸಮಿತಿ- ಈಕ್ವಿಟಿ (IMSC) ಸ್ಟಾಕ್​ಗಳ ನಿಫ್ಟಿ ಈಕ್ವಿಟಿ ಸೂಚ್ಯಂಕ ಮತ್ತು ಬದಲಿಯನ್ನು ನಿಯಮಿತವಾಗಿ ಮಾಡುವುದಕ್ಕೆ ನಿಯಮಾವಳಿಯಲ್ಲಿ ಬದಲಾಯಿಸುವುದಕ್ಕೆ ನಿರ್ಧರಿಸಿದೆ. ಮಾರ್ಚ್ 31, 2022ರಿಂದ ಈ ಬದಲಾವಣೆಗಳು ಜಾರಿಗೆ ಬರಲಿವೆ ಎಂದು ಗುರುವಾರದಂದು ಎನ್​ಎಸ್​ಇ ಸುತ್ತೋಲೆಯಲ್ಲಿ ತಿಳಿಸಿದೆ. ಅರ್ಹತಾ ಮಾನದಂಡ ಎಂದು ನಿಗದಿ ಮಾಡಿರುವುದರಲ್ಲಿ ಕಟ್​-ಆಫ್​ ದಿನಾಂಕದಂದು ಕನಿಷ್ಠ ಒಂದು ಕ್ಯಾಲೆಂಡರ್​ ತಿಂಗಳು ಲಿಸ್ಟಿಂಗ್ ಇತಿಹಾಸವನ್ನು ಹೊಂದಿರಬೇಕು. ಈ ಹಿಂದೆ ಅದು ಮೂರು ತಿಂಗಳಿತ್ತು. ಇದರಿಂದಾಗಿ ನೈಕಾ, ಪೇಟಿಎಂ, ಪಾಲಿಸಿಬಜಾರ್ ಮತ್ತು ಲೇಟೆಂಟ್ ವ್ಯೂ ಇವೆಲ್ಲ 2021ರ ಅಕ್ಟೋಬರ್​ನಲ್ಲಿ ಲಿಸ್ಟ್ ಆಗಿದ್ದವು.

ನೈಕಾ, ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ), ಮೈಂಡ್​ಟ್ರೀ ಲಿ., ಪೇಟಿಎಂ, ಎಸ್​ಆರ್​ಎಫ್​ ಲಿಮಿಟೆಡ್​ ಮತ್ತು ಝೊಮ್ಯಾಟೋ ಲಿಮಿಟೆಡ್ ಈ ಆರು ಸ್ಟಾಕ್​ಗಳು ನಿಫ್ಟಿ- 50ಯಲ್ಲಿ ಸೇರ್ಪಡೆ ಆಗಲಿದೆ. ಅಪೋಲೋ ಹಾಸ್ಪಿಟಲ್ ಎಂಟರ್​ಪ್ರೈಸ್​, ಅರಬಿಂದೋ ಫಾರ್ಮಾ, ಎಚ್​ಪಿಸಿಎಲ್, ಐಜಿಎಲ್​, ಜಿಂದಾಲ್ ಸ್ಟೀಲ್ ಅಂಡ್​ ಪವರ್, ಯೆಸ್​ ಬ್ಯಾಂಕ್ ಇವುಗಳಿಗೆ ಬದಲಿಯಾಗಿ ನಿಫ್ಟಿ ನೆಕ್ಸ್ಟ್ 50 ಸೂಚ್ಯಂಕವನ್ನು ಸೇರಲಿದೆ.

ನಿಫ್ಟಿ-50 ಸೂಚ್ಯಂಕಕ್ಕೆ ಸೇರ್ಪಡೆ ಆಗುವುದರ ಲಾಭ ಏನು?:

ಹೀಗೆ ನಿಫ್ಟಿ ನೆಕ್ಸ್ಟ್ 50 ಸೂಚ್ಯಂಕಕ್ಕೆ ಸೇರ್ಪಡೆ ಆಗುವುದರೊಂದಿಗೆ ಸಾಕಷ್ಟು ಇಂಡೆಕ್ಸ್​ ಫಂಡ್​ಗಳು ಮತ್ತು ಇಟಿಎಫ್​ಗಳು ಈ ಸ್ಟಾಕ್​ಗಳನ್ನು ತಮ್ಮ ಪೋರ್ಟ್​ಫೋಲಿಯೋದಲ್ಲಿ ಸೇರಿಸಿಕೊಳ್ಳುತ್ತವೆ. ಹೀಗೆ ಮಾಡುವುದರಿಂದ ಈ ಹೊಸ ತಲೆಮಾರಿನ ಸ್ಟಾರ್ಟ್​ ಅಪ್​ ಕಂಪೆನಿಗಳಿಗೆ ಅಗತ್ಯ ಇರುವ ಬೆಂಬಲ ದೊರಕಿಸುತ್ತದೆ. ಮುಂಬರುವ ವರ್ಷಗಳಲ್ಲಿ ಇಂಥದ್ದೇ ಕಂಪೆನಿಗಳು ನಿಫ್ಟಿಯಲ್ಲಿ ಸೇರ್ಪಡೆ ಆಗುವ ಮೂಲಕ ಸಾಂಪ್ರದಾಯಿಕ ಉದ್ಯಮದ ಮಾದರಿಗೆ ಪರ್ಯಾಯ ದೊರೆತಂತಾಗುತ್ತದೆ ಎಂಬುದು ವಿಶ್ಲೇಷಕರ ಅಭಿಪ್ರಾಯ.

ಸೂಚ್ಯಂಕದಲ್ಲಿ ಸೇರ್ಪಡೆ ಮಾಡಿದ ಕಾರಣಕ್ಕೆ ಯಾವಾಗ ಇಟಿಎಫ್​ಗಳ ಮ್ಯಾನೇಜರ್​ಗಳು ಈ ಷೇರುಗಳನ್ನು ಖರೀದಿಸಲು ಆರಂಭ ಮಾಡುತ್ತಾರೋ ಆಗ ವಾಲ್ಯೂಮ್ ಹೆಚ್ಚುತ್ತದೆ. ಮರು ಸಮತೋಲನ ಆಗುವಾಗ ಬೆಲೆ ಮೇಲ್ಮುಖವಾಗಿ ಸಾಗುತ್ತದೆ. ಆದರೆ ಈಗ ಕೂಡ ಈ ಸ್ಟಾಕ್​ನಲ್ಲಿ ಅಪಾಯ ಇದ್ದೇ ಇದೆ. ಒಟ್ಟು ಪೋರ್ಟ್​ಫೋಲಿಯೋದ ಪೈಕಿ ಶೇ 2ರಿಂದ ಶೇ 4ರಷ್ಟನ್ನು ಮಾತ್ರ ಇವುಗಳಿಗೆ ಮೀಸಲಿಡಬಹುದು. ಅದು ಕೂಡ ಸಿಸ್ಟಮ್ಯಾಟಿಕ್ ಇನ್ವೆಸ್ಟ್​ಮೆಂಟ್ ಪ್ಲ್ಯಾನ್ ಅಡಿಯಲ್ಲಿ ಹೂಡಿಕೆ ಮಾಡಬಹುದು ಎಂದು ಪರಿಣತರು ಅಭಿಪ್ರಾಯ ಪಡುತ್ತಾರೆ. ಈಗ ಬೆಲೆ ಇಳಿಕೆ ಆಗಿರುವಾಗ ಖರೀದಿಗೆ ಉತ್ತಮ ಸಮಯ ಇದು ಎಂಬುದನ್ನು ಸೇರಿಸುತ್ತಾರೆ.

ಇದನ್ನೂ ಓದಿ: NSE Scam: ಎನ್​ಎಸ್​ಇ ಹಗರಣದಲ್ಲಿ ಮಾಜಿ ಸಿಒಒ ಆನಂದ್​ ಸುಬ್ರಮಣಿಯನ್​ರನ್ನು ಬಂಧಿಸಿದ ಸಿಬಿಐ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ