Chitra Ramakrishna: ಎನ್​ಎಸ್​ಇ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಪ್ರಕರಣದ ಬಗ್ಗೆ ಗೊತ್ತಿರಬೇಕಾದ 10 ಅಂಶಗಳು

ಎನ್​ಎಸ್​ಇ ಮಾಜಿ ಸಿಇಒ ಹಾಗೂ ಎಂ.ಡಿ. ಚಿತ್ರಾ ರಾಮಕೃಷ್ಣ ಅವರ ಹಗರಣವನ್ನು ಈ ಲೇಖನದಲ್ಲಿ 10 ಅಂಶಗಳಲ್ಲಿ ವಿವರಿಸಲಾಗಿದೆ. ಈ ಬಗ್ಗೆ ಸದ್ಯ ಸಿಬಿಐ ವಿಚಾರಣೆ ನಡೆಸುತ್ತಿದೆ.

Chitra Ramakrishna: ಎನ್​ಎಸ್​ಇ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಪ್ರಕರಣದ ಬಗ್ಗೆ ಗೊತ್ತಿರಬೇಕಾದ 10 ಅಂಶಗಳು
ಚಿತ್ರಾ ರಾಮಕೃಷ್ಣ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on: Feb 22, 2022 | 7:52 PM

ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ (NSE)ನಲ್ಲಿನ ಕಾರ್ಪೊರೇಟ್​ ಆಡಳಿತದಲ್ಲಿ ಲೋಪಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ತನಿಖೆ ತೀವ್ರಗೊಳಿಸಲಾಗಿದೆ. ವರದಿಯ ಪ್ರಕಾರ, ಈ ಪ್ರಕರಣದ ವಿಚಾರಣೆಗಾಗಿ ಸರ್ಕಾರ ಕೂಡ ಅಖಾಡಕ್ಕೆ ಇಳಿದಿದೆ. ದೇಶದ ಅತಿ ದೊಡ್ಡ ವಿನಿಮಯ ಕೇಂದ್ರವಾದ ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್​ನಲ್ಲಿ ಆಗಿರುವ ಲೋಪ- ದೋಷಗಳ ಬಗ್ಗೆ ಸರ್ಕಾರ ಗಮನಿಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಹೇಳಿದ್ದಾರೆ. ಅಂದಹಾಗೆ ಈ ತನಕ ಏನೇನಾಗಿದೆ ಎಂಬುದನ್ನು 10 ಅಂಶಗಳಲ್ಲಿ ಈ ಲೇಖನದಲ್ಲಿ ವಿವರಿಸಲಾಗಿದೆ.

  1.  ಶಂಕಿತ ಕಾರ್ಪೊರೇಟ್ ಆಡಳಿತ ಲೋಪಗಳ ತನಿಖೆಯ ಭಾಗವಾಗಿ ಸಿಬಿಐನಿಂದ ಎನ್‌ಎಸ್‌ಇ ಮಾಜಿ ಸಿಇಒ ಚಿತ್ರಾ ರಾಮಕೃಷ್ಣ ಮತ್ತು ಅವರ ಸಲಹೆಗಾರರನ್ನು ಪ್ರಶ್ನಿಸಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸಲು ಸಿಬಿಐ ಅಧಿಕಾರಿಗಳು ಮಾರುಕಟ್ಟೆ ನಿಯಂತ್ರಕ ಸೆಬಿ (ಸೆಕ್ಯೂರಿಟೀಸ್ ಮತ್ತು ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ) ಕಚೇರಿಗೆ ಭೇಟಿ ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ.
  2. 2018ರಲ್ಲಿ ಆಲ್ಗೊರಿಥಮಿಕ್ ವಹಿವಾಟು ವೇಗಗೊಳಿಸುವುದಕ್ಕಾಗಿ ಕೆಲವು ಹೈ ಫ್ರೀಕ್ವೆನ್ಸಿ ವಹಿವಾಟುದಾರರಿಗೆ ನ್ಯಾಯಸಮ್ಮತ ಅಲ್ಲದ ಸಂಪರ್ಕ ನೀಡಲಾಗಿತ್ತು ಎಂಬ ಆರೋಪವನ್ನು ಒಳಗೊಂಡಿರುವ ಪ್ರಕರಣದ ತನಿಖೆಯನ್ನು ಸಿಬಿಐ ಚುರುಕುಗೊಳಿಸುತ್ತಿರುವುದಕ್ಕೆ ಇದು ಇತ್ತೀಚಿನ ಸಂಕೇತವಾಗಿದೆ. ಹೆಚ್ಚುವರಿ ಪರಿಶೀಲನೆಯು ಎನ್‌ಎಸ್‌ಇಯ ಲಿಸ್ಟಿಂಗ್​ ಮಾಡುವ ಯೋಜನೆಯನ್ನು ಇನ್ನಷ್ಟು ವಿಳಂಬಗೊಳಿಸುವ ಅಪಾಯ ಉಂಟು ಮಾಡುತ್ತದೆ.
  3. ಇದಕ್ಕೂ ಮೊದಲು, ಚಿತ್ರಾ ರಾಮಕೃಷ್ಣ ಮತ್ತು ವಿನಿಮಯ ಕೇಂದ್ರಗಳ ಇಬ್ಬರು ಉನ್ನತ ಮಾಜಿ ಉನ್ನತಾಧಿಕಾರಿಗಳ ವಿರುದ್ಧ ಸಿಬಿಐ ಲುಕ್-ಔಟ್ ಸುತ್ತೋಲೆಗಳನ್ನು ಹೊರಡಿಸಿತ್ತು. ಎನ್‌ಎಸ್‌ಇಯ ಆಲ್ಗೋ-ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗೆ ಆದ್ಯತೆ ಸಂಪರ್ಕದ ಪ್ರಕರಣದ ಬಗ್ಗೆ ನಡೆಯುತ್ತಿರುವ ತನಿಖೆಯನ್ನು ವಿಸ್ತರಿಸಿತು.
  4. ತೀವ್ರಗೊಂಡ ಪೊಲೀಸ್ ತನಿಖೆಯು ಫೆಬ್ರವರಿ 11ರ SEBI ಆದೇಶವನ್ನು ಅನುಸರಿಸುತ್ತದೆ. ಇದು ವಿನಿಮಯ ಕೇಂದ್ರದಲ್ಲಿನ ಕಾರ್ಪೊರೇಟ್ ಆಡಳಿತದ ಲೋಪಗಳನ್ನು ಎತ್ತಿ ತೋರಿಸುತ್ತದೆ. ಚಿತ್ರಾ ರಾಮಕೃಷ್ಣ ಅವರು ಹಲವು ವರ್ಷಗಳಿಂದ ಗೋಪ್ಯ ಎನ್​ಎಸ್​ಇ ಡೇಟಾವನ್ನು ಹಂಚಿಕೊಂಡಿದ್ದಾರೆ ಮತ್ತು ಅವರು “ಹಿಮಾಲಯನ್ ಯೋಗಿ” ಎಂದು ವಿವರಿಸಿದ ಹೊರಗಿನವರಿಂದ ಸಲಹೆಯನ್ನು ಪಡೆದರು ಎಂದು ಅದು ಹೇಳಿದೆ. ಸೆಬಿ ಆದೇಶದ ಪ್ರಕಾರ, ಸುಬ್ರಮಣಿಯನ್ ಅವರನ್ನು ಚಿತ್ರಾ “ನಿರಂಕುಶವಾಗಿ” ತನ್ನ ಸಲಹೆಗಾರರನ್ನಾಗಿ ನೇಮಿಸಿದ್ದಾರೆ. ಅವರು “ಯಾವುದೇ ಸಂಬಂಧಿತ ಅನುಭವವನ್ನು ಹೊಂದಿಲ್ಲ” ಎಂದು ಹೇಳಲಾಗಿದೆ.
  5. ಎನ್​ಎಸ್​ಇ ಹೇಳಿದಂತೆ, “ಆಡಳಿತ ಮತ್ತು ಪಾರದರ್ಶಕತೆಯ ಉನ್ನತ ಗುಣಮಟ್ಟಕ್ಕೆ ಬದ್ಧವಾಗಿದೆ” ಎಂದು ಹೇಳಿದ್ದು, ಸಮಸ್ಯೆಯು “ಸುಮಾರು 6ರಿಂದ 9 ವರ್ಷಗಳಷ್ಟು ಹಳೆಯದು” ಎಂದು ಕರೆದಿದೆ. ನಾನು ವಿನಿಮಯದ ಸಮಗ್ರತೆಗೆ ರಾಜಿ ಮಾಡಿಕೊಂಡಿಲ್ಲ ಎಂದು ತನಿಖೆ ಸಂದರ್ಭದಲ್ಲಿ ಚಿತ್ರಾ ರಾಮಕೃಷ್ಣ ಅವರು ಸೆಬಿಗೆ ತಿಳಿಸಿದ್ದಾರೆ.
  6. ಇತ್ತೀಚಿನ ಸೆಬಿ ಆದೇಶವು ಎನ್​ಎಸ್​ಇಗೆ ಮತ್ತೊಂದು ಪ್ರಮುಖ ಹಿನ್ನಡೆಯಾಗಿದೆ. ಅದು ವರ್ಷಗಳ ಕಾಲ ತನ್ನ ಐಪಿಒ ಅನ್ನು ತರಲು ಹೆಣಗಾಡುತ್ತಿದೆ. ಈಗಾಗಲೇ ಆಡಳಿತದ ಲೋಪದೋಷಗಳು ಮತ್ತು ತಾಂತ್ರಿಕ ದೋಷಗಳ ಆರೋಪಗಳಿಂದ ಹಾನಿಗೊಳಗಾಗಿದೆ. ಆದರೆ ಎನ್​ಎಸ್​ಇ ಯಾವುದೇ ತಪ್ಪನ್ನು ನಿರಾಕರಿಸಿದೆ.
  7. 2016ರಲ್ಲಿ ಸಿಇಒ ಹುದ್ದೆಗೆ ರಾಜೀನಾಮೆ ನೀಡಿದ ಚಿತ್ರಾ ರಾಮಕೃಷ್ಣ ಅವರು, ಹಿಮಾಲಯದಲ್ಲಿ ಅಪರಿಚಿತ ಯೋಗಿ ಎಂದು ವಿವರಿಸಿದ ವ್ಯಕ್ತಿಯೊಬ್ಬರ “ಕೈಗೊಂಬೆ” ಎಂದು ನಿಯಂತ್ರಕದ ಆದೇಶವು ಹೇಳಿದೆ. ಅವರು “ಇಚ್ಛೆಯಂತೆ ಪ್ರಕಟಗೊಳ್ಳುತ್ತಾರೆ” ಎಂದಿರುವುದಾಗಿ ತಿಳಿಸಿದೆ. ಯೋಗಿಯ ಅಸ್ತಿತ್ವದ ಬಗ್ಗೆ ಮಾಜಿ ಸಿಇಒ “ತಪ್ಪು ಮತ್ತು ದಾರಿತಪ್ಪಿಸುವ ಮಾಹಿತಿ” ನೀಡಿದ್ದಾರೆ ಎಂದು ಸೆಬಿ ಹೇಳಿದೆ.
  8. ಆಲ್ಗೋ ಹಗರಣ ಎಂದು ಕರೆಯುವುದರಲ್ಲಿ ಕೆಲವು ದಲ್ಲಾಳಿಗಳು ಒಳಗೊಂಡಿದ್ದು, ಎನ್​ಎಸ್​ಇಯ ಆಲ್ಗೋ-ಟ್ರೇಡಿಂಗ್ ಪ್ಲಾಟ್‌ಫಾರ್ಮ್ ಅನ್ನು ಸಂಪರ್ಕಿಸುವಾಗ ಇತರರ ವಿರುದ್ಧ ಅನ್ಯಾಯದ ಲಾಭವನ್ನು ಪಡೆಯುವುದನ್ನು ಒಳಗೊಂಡಿದೆ. ಇದರಿಂದಾಗಿ ಅನಗತ್ಯ ಲಾಭಗಳನ್ನು ಮಾಡುವುದು ಅಥವಾ ನಷ್ಟವನ್ನು ತಪ್ಪಿಸಿದೆ. 2017ರ ಆಗಸ್ಟ್‌ನಲ್ಲಿ ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು (ಪಿಐಎಲ್) ಪತ್ರಕರ್ತ ಶಂತನು ಗುಹಾ ರೇ ಅವರು ಸಲ್ಲಿಸಿದ ನಂತರ ತನಿಖೆ ನಡೆದಿದ್ದು, ಅವರು ಆಲ್ಗೋ-ಟ್ರೇಡಿಂಗ್‌ನಲ್ಲಿ ವಂಚನೆ ಮತ್ತು ಅಕ್ರಮದ ಆರೋಪಗಳ ಬಗ್ಗೆ ತನಿಖೆಯ ವ್ಯಾಪ್ತಿಯನ್ನು ಏಜೆನ್ಸಿ ವಿಸ್ತರಿಸಬೇಕೆಂದು ಒತ್ತಾಯಿಸಿದ್ದರು.
  9. 2019ರ ಮೇ ತಿಂಗಳಿನಲ್ಲಿ ಸಿಬಿಐ ತನ್ನ ತನಿಖೆಯು ಇನ್ನು ಮುಂದೆ ಮೂಲ ದೂರಿಗೆ ಸೀಮಿತವಾಗಿಲ್ಲ ಎಂದು ದೆಹಲಿ ಹೈಕೋರ್ಟ್‌ಗೆ ವರದಿಯನ್ನು ಸಲ್ಲಿಸಿತು. ಕಳೆದ ವರ್ಷ ಜುಲೈನಲ್ಲಿ ಸಂಸತ್ತಿಗೆ ನೀಡಿದ ಲಿಖಿತ ಪ್ರತಿಕ್ರಿಯೆಯಲ್ಲಿ, ಸಿಬಿಐ ತನಿಖೆ ಇನ್ನೂ ನಡೆಯುತ್ತಿದೆ ಎಂದು ಸರ್ಕಾರ ಹೇಳಿದೆ. ಇತ್ತೀಚೆಗೆ, ಸಂಸ್ಥೆಯು ತನಿಖೆಯ ಸ್ಥಿತಿಗತಿ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದೆ.
  10. ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ 1994ರಲ್ಲಿ ಪ್ರಾರಂಭವಾಯಿತು. ಇದು ವ್ಯಾಪಾರದ ಒಪ್ಪಂದಗಳ ಒಟ್ಟು ಸಂಖ್ಯೆಯ ಪ್ರಕಾರ ವಿಶ್ವದ ಅತಿದೊಡ್ಡ ಉತ್ಪನ್ನಗಳ ವಿನಿಮಯವಾಗಿದೆ. ಚಿತ್ರಾ ರಾಮಕೃಷ್ಣ 1990ರ ದಶಕದ ಆರಂಭದಲ್ಲಿ ಎನ್‌ಎಸ್‌ಇಗೆ ಸೇರಿದರು ಮತ್ತು ಇಂದಿನ ವಿನಿಮಯ ಅಗ್ಗಳಿಕೆ ಏನಿದೆ ಅದರ ಹೆಚ್ಚಿನ ಭಾಗದ ಶ್ರೇಯ ಅವರಿಗೆ ಸಲ್ಲಿಸಲಾಗುತ್ತದೆ.

ಇದನ್ನೂ ಓದಿ: NSE Scam: ಎನ್​ಎಸ್​ಇ ಮಾಜಿ ಎಂಡಿ ಚಿತ್ರಾ ರಾಮಕೃಷ್ಣಗೆ ಸಹಾಯ ಮಾಡುತ್ತಿದ್ದ ನಿಗೂಢ ಬಾಬಾ ಯಾರು?; ರಹಸ್ಯದ ಬೆನ್ನತ್ತಿದ ಸಿಬಿಐ

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್