7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ನ್ಯೂಸ್; ಹೋಳಿ ಹಬ್ಬಕ್ಕೆ ಮತ್ತೆ ವೇತನ ಹೆಚ್ಚಳ ಸಾಧ್ಯತೆ
ತಮ್ಮ ಡಿಎ ಬಾಕಿಗಾಗಿ ಕಾಯುತ್ತಿರುವ ಕೇಂದ್ರ ಸರ್ಕಾರಿ ಉದ್ಯೋಗಿಗಳು 2022ರ ಮಾರ್ಚ್ 18ರಂದು ಹೋಳಿ ಹಬ್ಬಕ್ಕೂ ಮುನ್ನ ಶುಭ ಸುದ್ದಿಯನ್ನು ಸ್ವೀಕರಿಸುವ ಸಾಧ್ಯತೆಯಿದೆ.
ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ (Government Employees) ಸರ್ಕಾರ ಗುಡ್ನ್ಯೂಸ್ ಒಂದನ್ನು ನೀಡಿದೆ. ಕೊವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಆರ್ಥಿಕತೆಯ ಅಭಿವೃದ್ಧಿ ನಿಧಾನಗತಿಯಲ್ಲಿ ಸಾಗುತ್ತಿದೆ. ಇದರ ನಡುವೆ ಹೋಳಿ ಹಬ್ಬದ (Holi Festival) ಸಂದರ್ಭದಲ್ಲಿ ಕೇಂದ್ರ ಸರ್ಕಾರ ವಿಶೇಷವಾದ ಮುಂಗಡ ಯೋಜನೆಯನ್ನು ಪ್ರಕಟಿಸುವ ಸಾಧ್ಯತೆಯಿದೆ. ಈ ಯೋಜನೆಯಡಿ ಕೇಂದ್ರ ಸರ್ಕಾರವು ಕೇಂದ್ರ ಸರ್ಕಾರಿ ನೌಕರರಿಗೆ 10,000 ರೂ. ನೀಡಲು ಚಿಂತಿಸಿದೆ. ಬಡ್ಡಿ ರಹಿತ ಮುಂಗಡವು ಉದ್ಯೋಗಿಗಳಿಗೆ ದೊಡ್ಡ ಉತ್ತೇಜನವನ್ನು ನೀಡಲಿದೆ. ತಮ್ಮ ಡಿಎ ಬಾಕಿಗಳಿಗಾಗಿ ಕಾಯುತ್ತಿರುವ ಉದ್ಯೋಗಿಗಳು 2022ರ ಮಾರ್ಚ್ 18ರಂದು ಹೋಳಿ ಹಬ್ಬಕ್ಕೂ ಮುನ್ನ ಶುಭ ಸುದ್ದಿಯನ್ನು ಸ್ವೀಕರಿಸುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರವು ತುಟ್ಟಿಭತ್ಯೆಯನ್ನು (DA) 3% ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ.
ವರದಿಯ ಪ್ರಕಾರ, ಎಲ್ಲಾ ಉದ್ಯೋಗಿಗಳು ಮಾರ್ಚ್‌ನಲ್ಲಿ ಪೂರ್ಣ ವೇತನವನ್ನು ಪಡೆಯುತ್ತಾರೆ. ಇದರಲ್ಲಿ ಜನವರಿ ಮತ್ತು ಫೆಬ್ರವರಿಗೆ ಇರುವ ಡಿಎ ಬಾಕಿ ಇದೆ. ಲೆವೆಲ್-1 ಉದ್ಯೋಗಿಗಳ ಡಿಎ ಬಾಕಿಯು 11,880 ರಿಂದ 37,554 ರವರೆಗೆ ಬದಲಾಗಿದೆ ಎಂದು ಜೆಸಿಎಂನ ರಾಷ್ಟ್ರೀಯ ಮಂಡಳಿಯ ಶಿವ ಗೋಪಾಲ್ ಮಿಶ್ರಾ ಹೇಳಿದ್ದಾರೆ ಎಂದು ಝೀ ಬಿಸಿನೆಸ್ ವರದಿ ಸ್ಪಷ್ಟಪಡಿಸಿದೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2020ರಲ್ಲಿ ಗೆಜೆಟೆಡ್ ಮತ್ತು ನಾನ್-ಗೆಜೆಟೆಡ್ ಉದ್ಯೋಗಿಗಳಿಗೆ ಒಂದು ಬಾರಿಯ ಕ್ರಮವಾಗಿ ವಿಶೇಷ ಫೆಸ್ಟಿವ್ ಮುಂಗಡ ಯೋಜನೆಯನ್ನು ಪುನಶ್ಚೇತನಗೊಳಿಸಿರುವುದನ್ನು ಸ್ಮರಿಸಬಹುದು. ಕಳೆದ ವರ್ಷವೂ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತುಟ್ಟಿ ಭತ್ಯೆ (DA) ಹೆಚ್ಚಿಸಿತ್ತು.
ಕೇಂದ್ರ ಸರ್ಕಾರಿ ನೌಕರರು ಈಗಾಗಲೇ ಶೇ. 31ರಷ್ಟು ತುಟ್ಟಿಭತ್ಯೆಯನ್ನು ಪಡೆಯುತ್ತಿದ್ದಾರೆ. 7 ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ, ತುಟ್ಟಿಭತ್ಯೆಯನ್ನು ಮೂಲ ವೇತನದಲ್ಲಿ ಮಾತ್ರ ನೀಡಲಾಗುತ್ತದೆ. ಮಾರ್ಚ್‌ನಲ್ಲಿ ತುಟ್ಟಿ ಭತ್ಯೆ ಹೆಚ್ಚಳ ಘೋಷಣೆಯಾಗುವ ನಿರೀಕ್ಷೆಯಿದೆ.
ಎಲ್ಲಾ ಕೇಂದ್ರ ಸರ್ಕಾರಿ ನೌಕರರು 2021ರ ಮಾರ್ಚ್ 31 ರೊಳಗೆ 10,000 ರೂಪಾಯಿಗಳ ಬಡ್ಡಿ ರಹಿತ ಮುಂಗಡವನ್ನು ಪಡೆಯಲು ಅನುಮತಿಸಲಾಗಿದೆ. ಬಡ್ಡಿ ರಹಿತ ಮುಂಗಡವನ್ನು ಉದ್ಯೋಗಿಯಿಂದ ಗರಿಷ್ಠ 10 ಕಂತುಗಳಲ್ಲಿ ಮರುಪಡೆಯಬಹುದಾಗಿದೆ.
ಉದ್ಯೋಗಿಗಳಿಗೆ ಮುಂಗಡ ಮೌಲ್ಯದ ಪ್ರಿ-ಲೋಡೆಡ್ ರುಪೇ ಕಾರ್ಡ್ ಅನ್ನು ಒದಗಿಸಲಾಗಿದೆ. ಕಾರ್ಡ್‌ನ ಬ್ಯಾಂಕ್ ಶುಲ್ಕವನ್ನೂ ಸರ್ಕಾರವೇ ಭರಿಸಿತ್ತು. ರುಪೇ ಕಾರ್ಡ್ ಮೂಲಕ ಮುಂಗಡ ವಿತರಣೆಯು ಡಿಜಿಟಲ್ ಪಾವತಿಯ ವಿಧಾನವನ್ನು ಖಾತ್ರಿಗೊಳಿಸುತ್ತದೆ.
ಇದನ್ನೂ ಓದಿ: 7th pay commission: ಕೇಂದ್ರ ಸರ್ಕಾರದಿಂದ ಸಿಬ್ಬಂದಿಗೆ ಶೇ 14ರಷ್ಟು ತುಟ್ಟಿ ಭತ್ಯೆ ಹೆಚ್ಚಳ
DA Hike: ಕೇಂದ್ರ ಸರ್ಕಾರಿ ನೌಕರರಿಗೆ ಶೇ 3 ತುಟ್ಟಿಭತ್ಯೆ ನೀಡಲು ಸಚಿವ ಸಂಪುಟ ಒಪ್ಪಿಗೆ