Stock Market: ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 900ಕ್ಕೂ ಹೆಚ್ಚು, ನಿಫ್ಟಿ 230ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿತ
ಫೆಬ್ರವರಿ 22ನೇ ತಾರೀಕಿನ ಮಂಗಳವಾರದಂದು ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಭಾರೀ ಕುಸಿತವನ್ನು ಕಂಡಿದೆ. ಪ್ರಮುಖವಾಗಿ ಏರಿಕೆ, ಇಳಿಕೆ ಕಂಡ ಷೇರುಗಳ ವಿವರ ಇಲ್ಲಿದೆ.
ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಫೆಬ್ರವರಿ 22ನೇ ತಾರೀಕಿನ ಮಂಗಳವಾರದಂದು ಭಾರೀ ಕುಸಿತ ಕಂಡಿದೆ. ಎಲ್ಲ ವಲಯದ ಸೂಚ್ಯಂಕಗಳು ಇಳಿಕೆಯಲ್ಲೇ ವಹಿವಾಟು ನಡೆಸುತ್ತಿವೆ. ವಿದ್ಯುತ್, ಮಾಹಿತಿ ತಂತ್ರಜ್ಞಾನ, ಲೋಹ, ಕ್ಯಾಪಿಟಲ್ ಗೂಡ್ಸ್, ರಿಯಾಲ್ಟಿ ಮತ್ತು ಪಿಎಸ್ಯು ಬ್ಯಾಂಕ್ ಸೂಚ್ಯಂಕಗಳು ತಲಾ ಶೇ 1ರಿಂದ ಶೇ 2ರಷ್ಟು ಕುಸಿತ ಕಂಡಿವೆ. ಬಿಎಸ್ಇ ಮಿಡ್ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕಗಳು ತಲಾ ಶೇ 1ರಷ್ಟು ಕುಸಿತ ಕಂಡಿವೆ. ಈ ಸುದ್ದಿ ಸಿದ್ಧವಾಗುವ ಹೊತ್ತಿಗೆ ನಿಫ್ಟಿ 233.65 ಪಾಯಿಂಟ್ಸ್ ಅಥವಾ ಶೇ 1.36ರಷ್ಟು, ಸೆನ್ಸೆಕ್ಸ್ 836.90 ಪಾಯಿಂಟ್ಸ್ ಅಥವಾ ಶೇ 1.45ರಷ್ಟು ನೆಲ ಕಚ್ಚಿತ್ತು. ಇನ್ನು ನಿಫ್ಟಿ ಬ್ಯಾಂಕ್ 504.30 ಪಾಯಿಂಟ್ಸ್ ಅಥವಾ ಶೇ 1.34ರಷ್ಟು ಕುಸಿದಿತ್ತು. ಸೆನ್ಸೆಕ್ಸ್ ಸೂಚ್ಯಂಕವು ಈ ಹಿಂದಿನ ವಹಿವಾಟನ್ನು 57,683.59 ಪಾಯಿಂಟ್ಸ್ನೊಂದಿಗೆ ಮುಗಿಸಿತ್ತು. ದಿನದ ಆರಂಭವನ್ನು 56,981.16 ಪಾಯಿಂಟ್ಸ್ನೊಂದಿಗೆ ಶುರು ಮಾಡಿ, ಕನಿಷ್ಠ ಮಟ್ಟವಾದ 56,394.85 ಪಾಯಿಂಟ್ಸ್ ತಲುಪಿತ್ತು. ಅದೇ ರೀತಿ ನಿಫ್ಟಿ ಸೂಚ್ಯಂಕವು ಈ ಹಿಂದಿನ ವಹಿವಾಟನ್ನು 17,206.65 ಪಾಯಿಂಟ್ಸ್ಗೆ ವ್ಯವಹಾರ ಮುಗಿಸಿತ್ತು. ದಿನದ ಆರಂಭವನ್ನು 16847.95 ಪಾಯಿಂಟ್ಸ್ನೊಂದಿಗೆ ಶುರು ಮಾಡಿ, ಕನಿಷ್ಠ ಮಟ್ಟವಾದ 16843.80 ಪಾಯಿಂಟ್ಸ್ ಮುಟ್ಟಿತ್ತು.
ಅಮೆರಿಕದ ಡಾಲರ್ ವಿರುದ್ಧ ಮಂಗಳವಾರ ಬೆಳಗ್ಗೆ 23 ಪೈಸೆ ಇಳಿಕೆಯೊಂದಿಗೆ ವಹಿವಾಟು ಆರಂಭ ಮಾಡಿತು. ಹಿಂದಿನ ದಿನವಾದ ಸೋಮವಾರ ದಿನದ ಕೊನೆಗೆ 74.51ರಲ್ಲಿ ಮುಕ್ತಾಯ ಕಂಡಿತ್ತು. ಅಮೆರಿಕ ಟ್ರೆಷರಿ ಯೀಲ್ಡ್ಸ್ ಇಳಿಕೆ ಹಿನ್ನೆಲೆಯಲ್ಲಿ ಡಾಲರ್ ಸೂಚ್ಯಂಕ ಶೇ 0.06ರಷ್ಟು ಕುಸಿಯಿತು. ಜಾಗತಿಕ ಮಾರುಕಟ್ಟೆಯಲ್ಲಿ ಮಾರಾಟ ಹಾಗೂ ರಷ್ಯಾ ಮತ್ತು ಉಕ್ರೇನ್ ಮಧ್ಯದ ಬಿಕ್ಕಟ್ಟಿಗೆ ರಾಜತಾಂತ್ರಿಕವಾದ ಪರಿಹಾರ ಸಾಧ್ಯತೆ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಡಾಲರ್ ಮೌಲ್ಯ ಇನ್ನಷ್ಟು ಕುಸಿಯುವುದರಿಂದ ತಡೆಯಿತು.
ನಿಫ್ಟಿಯಲ್ಲಿ ಏರಿಕೆ ಕಂಡ ಕಂಪೆನಿಗಳು ಹಾಗೂ ಶೇಕಡಾವಾರು ಪ್ರಮಾಣ
ಒಎನ್ಜಿಸಿ ಶೇ 0.61
ಐಷರ್ ಮೋಟಾರ್ಸ್ ಶೇ 0.25
ನಿಫ್ಟಿಯಲ್ಲಿ ಇಳಿಕೆ ಕಂಡ ಕಂಪೆನಿಗಳು ಹಾಗೂ ಶೇಕಡಾವಾರು ಪ್ರಮಾಣ
ಟಿಸಿಎಸ್ ಶೇ -3.17
ಟಾಟಾ ಸ್ಟೀಲ್ ಶೇ -3.02
ಬಿಪಿಸಿಎಲ್ ಶೇ -2.68
ಯುಪಿಎಲ್ ಶೇ -2.53
ಭಾರ್ತಿ ಏರ್ಟೆಲ್ ಶೇ -2.21
ಇದನ್ನೂ ಓದಿ: Indian Stock Market: ಇದೇ ಮೊದಲ ಬಾರಿಗೆ ಫ್ರಾನ್ಸ್ನ ಮೀರಿಸಿದ ಭಾರತದ ಷೇರು ಮಾರುಕಟ್ಟೆ; ಏನಿದು ಸಾಧನೆ ಗೊತ್ತೆ?