‘ಏನು ಮಾಡುತ್ತೀರೋ ಮಾಡಿಕೊಳ್ಳಿ’; ಸಾಯುವ ಮುನ್ನ ಧೈರ್ಯದಿಂದ ರಷ್ಯಾ ಪಡೆಯನ್ನು ಎದುರಿಸಿದ ಉಕ್ರೇನ್ ಸೈನಿಕರು
Russia- Ukraine War: ರಷ್ಯಾ ಉಕ್ರೇನ್ ರಾಜಧಾನಿ ಕೈವ್ ಅನ್ನು ಸುತ್ತುವರೆಯಲು ಯತ್ನಿಸುತ್ತಿದೆ. ಈ ನಡುವೆ ರಷ್ಯಾದ ಸೈನಿಕರಿಗೆ ಉಕ್ರೇನ್ ಸೈನಿಕರು ತಲೆಬಾಗದೇ ಪ್ರಾಣತ್ಯಾಗ ಮಾಡಿದ ವಿಡಿಯೋ ವೈರಲ್ ಆಗಿದೆ.
ಉಕ್ರೇನ್ ಪ್ರಸ್ತುತ ರಷ್ಯಾದ ದಾಳಿಯಿಂದ (Russia- Ukraine Crisis) ಪ್ರಕ್ಷುಬ್ಧಗೊಂಡಿದೆ. ರಷ್ಯಾದ ದಾಳಿಯ ವಿರುದ್ಧ ಬಹುತೇಕ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಿವೆ. ರಷ್ಯಾದಲ್ಲಿಯೇ ಜನರು ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ. ಉಕ್ರೇನಿಯನ್ನರು ರಷ್ಯಾ ಪಡೆಗಳ ವಿರುದ್ಧ ತೀವ್ರ ಹೋರಾಟ ನಡೆಸುತ್ತಿದ್ದು, ದೇಶದ ರಕ್ಷಣೆಗೆ ಪ್ರಾಣ ಪಣಕ್ಕಿಟ್ಟಿದ್ದಾರೆ. ರಷ್ಯಾ ಒಂದೊಂದೇ ಪ್ರದೇಶಗಳನ್ನು ವಶಪಡಿಸಿಕೊಳ್ಳುತ್ತಾ ಮುನ್ನುಗ್ಗುತ್ತಿರುವಂತೆಯೇ, ಉಕ್ರೇನ್ ದೇಶದ ಸೈನಿಕರ ಧೈರ್ಯ ತೋರಿಸುವ ವಿಡಿಯೋವೊಂದು ವೈರಲ್ ಆಗಿದೆ. ‘ಸ್ನೇಕ್ ಐಲ್ಯಾಂಡ್ ’ (Snake Island) ಎಂದು ಕರೆಯಲಾಗುವ Zmiinyi ದ್ವೀಪದಲ್ಲಿ ಈ ಘಟನೆ ನಡೆದಿದೆ. ವಿಡಿಯೋದಲ್ಲಿ ರೆಕಾರ್ಡ್ ಆದ ಸಂಭಾಷಣೆಯಲ್ಲಿ ರಷ್ಯಾ ಸೈನಿಕರು ಉಕ್ರೇನ್ ಸೈನಿಕರಿಗೆ ಎಚ್ಚರಿಕೆ ನೀಡುವುದು ಕೇಳಿಸುತ್ತದೆ. ಇದಕ್ಕೆ ಉಕ್ರೇನ್ ಸೈನಿಕರ ಪ್ರತಿಕ್ರಿಯೆಯೂ ದಾಖಲಾಗಿದೆ.
ಸ್ನೇಕ್ ಐಲ್ಯಾಂಡ್ನಲ್ಲಿ 13 ಜನ ಉಕ್ರೇನ್ ಸೈನಿಕರಿದ್ದರು. ರಷ್ಯಾದ ಯುದ್ಧ ನೌಕೆಯಲ್ಲಿದ್ದ ಸೈನಿಕರು ಉಕ್ರೇನ್ ಸೈನಿಕರಿಗೆ ಶರಣಾಗಲು ಆದೇಶಿಸಿದ್ದಾರೆ. ‘ಬದುಕುಳಿಯಲು ಶರಣಾಗಿ, ಇಲ್ಲವೇ ಹೊಡೆದುರುಳಿಸುತ್ತೇವೆ’ ಎಂದು ರಷ್ಯಾ ಸೈನಿಕರು ಎಚ್ಚರಿಕೆ ನೀಡಿದ್ದಾರೆ. ಇದಕ್ಕೆ ಒಂದರೆ ಕ್ಷಣದ ಯೋಚನೆಯ ನಂತರ ಪ್ರತಿಕ್ರಿಯೆ ನೀಡಿರುವ ಉಕ್ರೇನಿಯನ್ ಸೈನಿಕರು, ‘ಏನು ಮಾಡುತ್ತೀರೋ ಮಾಡಿಕೊಳ್ಳಿ, f***’ ಎಂದು ಹೇಳಿದ್ದಾರೆ. ವಿಡಿಯೋ ಅಲ್ಲಿಗೆ ಮುಕ್ತಾಯವಾಗಿದೆ. ನಂತರ ರಷ್ಯಾದ ಸೈನಿಕರು ಆ 13 ಜನರ ಸೈನಿಕರ ಮರಣವನ್ನು ದೃಢಪಡಿಸಿದ್ದಾರೆ. ಈ ಘಟನೆ ಇಂದು (ಫೆ.25) ವರದಿಯಾಗಿದೆ.
ಸೈನಿಕರ ಸಂಭಾಷಣೆಯ ವಿಡಿಯೋ ಇಲ್ಲಿದೆ:
Russian warship: “I suggest you lay down your arms and surrender, otherwise you’ll be hit”
Ukrainian post: “Russian warship, go fuck yourself”
All 13 service members on the island were killed. pic.twitter.com/sQSQhklzBC
— BNO News (@BNONews) February 25, 2022
ಮರಣವನ್ನಪ್ಪಿದ ಸೈನಿಕರಿಗೆ ವಿಶೇಷ ಗೌರವ ನೀಡಿದ ಉಕ್ರೇನ್:
ರಷ್ಯನ್ ಸೈನಿಕರಿಗೆ ಶರಣಾಗದೇ ಧೈರ್ಯವಾಗಿ ಸಾವನ್ನು ಎದುರಿಸಿದ ತನ್ನ ದೇಶದ ಸೈನಿಕರಿಗೆ ಉಕ್ರೇನ್ ಗೌರವ ಸಲ್ಲಿಸಿದೆ. ದ್ವೀಪ ಕಾಯುತ್ತಾ, ಮರಣವನ್ನಪ್ಪಿದ ಎಲ್ಲಾ 13 ಜನ ಸೈನಿಕರನ್ನು ‘ಉಕ್ರೇನ್ನ ಹೀರೋಗಳು’ ಎಂದು ಘೋಷಿಸಿ, ಗೌರವಿಸಲಾಗಿದೆ. ಈ ಕುರಿತು ಉಕ್ರೇನ್ ಹಂಚಿಕೊಂಡ ಟ್ವೀಟ್ ಇಲ್ಲಿದೆ.
Russia blatantly captured Ukrainian island #Zmiinyi, destroying the infrastructure. All 13 ?? border guards were killed, refusing to surrender. They will be awarded the title «Hero of Ukraine» postmortem, says @ZelenskyyUa
Glory to Ukrainian heroes! ??#StopRussianAggression pic.twitter.com/PWEIvqzxyJ
— MFA of Ukraine ?? (@MFA_Ukraine) February 25, 2022
ಇದನ್ನೂ ಓದಿ:
Russia-Ukraine war ಭೀಕರ ದುರಂತ ನಡೆದ ಚೆರ್ನೋಬಿಲ್ ಪರಮಾಣು ಸ್ಥಾವರವನ್ನು ರಷ್ಯಾ ವಶಪಡಿಸಿಕೊಂಡಿದ್ದು ಯಾಕೆ?