ಉಕ್ರೇನಿನ ಯೋಧನೊಬ್ಬ ರಣಭೂಮಿಯಿಂದ ತಂದೆತಾಯಿಗೆ ಕಳಿಸಿರುವ ವಿಡಿಯೋ ಸಂದೇಶ ಮನ ಕಲಕುತ್ತದೆ
ಈಗ ನಡೆಯುತ್ತಿರುವ ಯುದ್ಧದಲ್ಲಿ ತಾನು ಜೀವದಿಂದ ಉಳಿಯುತ್ತೇನೋ ಇಲ್ಲವೋ ಗೊತ್ತಿಲ್ಲ. ಆದರೆ, ನಿಮ್ಮ ಆರೋಗ್ಯಗಳ ಮೇಲೆ ಗಮನವಿರಲಿ, ನನ್ನ ಬಗ್ಗೆ ಯೋಚನೆ ಮಾಡದಿರಿ, ಸರಿಯಾದ ಸಮಯಕ್ಕೆ ಊಟ ಮಾಡಿ, ಔಷಧಿ ತೆಗೆದುಕೊಳ್ಳಿ ಎಂದು ಹೇಳುತ್ತಾ ಗದ್ಗದಿತನಾಗುತ್ತಾನೆ.
ಸುಖಾಸುಮ್ಮನೆ ಯುದ್ಧೋನ್ಮಾದಕ್ಕೆ ಒಳಗಾಗಿ ಬೇರೊಂದು ದೇಶದ ಮೇಲೆ ದಂಡೆತ್ತಿ ಹೋಗುವ ವ್ಲಾದಿಮಿರ್ ಪುಟಿನ್ ಅವರಂಥ ಸರ್ವಾಧಿಕಾರ (autocratic) ಮನೋಭಾವದ ನಾಯಕರು ಉಕ್ರೇನಿನ ಒಬ್ಬ ಯುವ ಸೈನಿಕ (young soldier) ತನ್ನ ತಂದೆ ತಾಯಿಗಳಿಗೆ ಯುದ್ಧಭೂಮಿಯಿಂದ ಕಳಿಸಿರುವ ವಿಡಿಯೋವನ್ನೊಮ್ಮೆ ನೋಡಬೇಕು ಮಾರಾಯ್ರೇ. ಅಪ್ಪ ಅಮ್ಮನ ಬಗ್ಗೆ ಅವನಿಗಿರುವ ಪ್ರೀತಿ-ಕಾಳಜಿ ಮನ ಕಲಕುತ್ತದೆ. ಯುದ್ಧದಲ್ಲಿ ತನ್ನ ಸ್ಥಿತಿ ಏನಾಗಬಹುದು ಎಂಬ ಚಿಂತೆ ಅವನಿಗಿಲ್ಲ. ನಿನ್ನೆಯಿಂದ ಉಕ್ರೇನಿನ ಹಲವಾರು ಸೈನಿಕರು ಹುತಾತ್ಮರಾಗಿದ್ದಾರೆ (martyr). ತಾನು ಬದುಕುಳಿಯುವ ನಿರೀಕ್ಷೆ ಈ ಯುವ ಸೈನಿಕನಿಗಿಲ್ಲ. ಆದರೆ ಯೋಧರು ಯಾವುದೇ ದೇಶದವರಾಗಿರಲಿ, ದೇಶದ ರಕ್ಷಣೆಯ ಸವಾಲು ಎದುರಾದಾಗ ಅವರು ತಮ್ಮ ಜೀವವನ್ನು ಲೆಕ್ಕಿಸುವುದಿಲ್ಲ. ಕೊನೆ ಉಸಿರಿರುವವರೆಗೆ ಹೋರಾಡುತ್ತಾರೆ.
ಈ ಸೈನಿಕ ತನ್ನ ಮಮ್ಮಿ-ಡ್ಯಾಡಿಗೆ ಅದನ್ನೇ ಹೇಳುತ್ತಿದ್ದಾನೆ. ಈಗ ನಡೆಯುತ್ತಿರುವ ಯುದ್ಧದಲ್ಲಿ ತಾನು ಜೀವದಿಂದ ಉಳಿಯುತ್ತೇನೋ ಇಲ್ಲವೋ ಗೊತ್ತಿಲ್ಲ. ಆದರೆ, ನಿಮ್ಮ ಆರೋಗ್ಯಗಳ ಮೇಲೆ ಗಮನವಿರಲಿ, ನನ್ನ ಬಗ್ಗೆ ಯೋಚನೆ ಮಾಡದಿರಿ, ಸರಿಯಾದ ಸಮಯಕ್ಕೆ ಊಟ ಮಾಡಿ, ಔಷಧಿ ತೆಗೆದುಕೊಳ್ಳಿ ಎಂದು ಹೇಳುತ್ತಾ ಗದ್ಗದಿತನಾಗುತ್ತಾನೆ.
ಯುದ್ಧ ಒಳ್ಳೆಯದಲ್ಲ ಮಾರಾಯ್ರೇ. ಈ ವಿಡಿಯೋ ನೋಡಿದ ಬಳಿಕ ಅವನ ತಂದೆ ತಾಯಿ ಅನುಭವಿಸಿರಬಹುದಾದ ಸಂಕಟ, ಮತ್ತು ಯಾತನೆಯನ್ನು ಯೋಚಿಸಿ ನೋಡಿ. ಪುಟಿನ್ ಮೇಲೆ ನಮಗೂ ಆಕ್ರೋಷ ಉಕ್ಕಿ ಬರುತ್ತದೆ.
ವಿಶೇಷ ಮಾಹಿತಿ:
ಉಕ್ರೇನಲ್ಲಿ ಸಿಲುಕಿರುವ ಕರ್ನಾಟಕದ ವಿದ್ಯಾರ್ಥಿಗಳ ಹಾಗೂ ಕನ್ನಡಿಗರ ಬಗ್ಗೆ ಮಾಹಿತಿಗೆ ವೆಬ್ ಪೋರ್ಟಲ್ ಸ್ಥಾಪನೆ ಮಾಡಲಾಗಿದೆ. KSDMA ಮಾಹಿತಿಗಾಗಿ ವೆಬ್ ಪೋರ್ಟಲ್ ಸ್ಥಾಪಿಸಿದೆ. ಉಕ್ರೇನಲ್ಲಿ ಸಿಲುಕಿದವರ ವಿವರ, ವಿದೇಶಾಂಗ ಇಲಾಖೆ, ಭಾರತ ಸರ್ಕಾರದ ವೆಬ್ಸೈಟ್ನಿಂದ ಸಂಗ್ರಹಿಸಿದ ಮಾಹಿತಿ, ಹೆಲ್ಪ್ಲೈನ್, ಇ-ಮೇಲ್, ಮಾರ್ಗಸೂಚಿ ಮಾಹಿತಿ, ಎಲ್ಲಾ ಮಾಹಿತಿಗಳನ್ನು ಹೊಂದಿರುವ ವೆಬ್ ಪೋರ್ಟಲ್ ಸ್ಥಾಪಿಸಲಾಗಿದೆ.
ವೆಬ್ ಪೋರ್ಟಲ್ ಲಿಂಕ್: http://Ukraine.Karnataka.tech