ಹರ್ಷ ಕೊಲೆ ಆರೋಪಿಗಳನ್ನು ಬಂಧಿಸಲಾಗಿದೆ, ಸಂಚಿನ ತನಿಖೆ ನಡೆಯುತ್ತಿದೆ: ಈಶ್ವರಪ್ಪ
ವೆಂಕಟೇಶ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ. ಕೆಲ ಮುಸ್ಲಿಂ ಗೂಂಡಾಗಳ ನಡವಳಿಕೆಯು ಎಲ್ಲ ಮುಸ್ಲಿಮರ ಮೇಲೆಯೂ ಪರಿಣಾಮ ಬೀರುತ್ತಿದೆ ಎಂದು ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗ: ಹರ್ಷ ಕೊಲೆ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಕೊಲೆಯ ಹಿಂದೆ ಯಾರೆಲ್ಲಾ ಇದ್ದಾರೆ, ಷಡ್ಯಂತ್ರ ರೂಪಿಸಿದ್ದು ಯಾರು ಮತ್ತು ಏಕೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ (KS Eshwarappa) ಹೇಳಿದರು. ಗೂಂಡಾ ಮುಸ್ಲಿಮರ ಮಾನಸಿಕತೆ ಇನ್ನೂ ಕಡಿಮೆಯಾಗಿಲ್ಲ. ವಾಕಿಂಗ್ಗೆ ಹೋಗಿದ್ದ ಬಿಜೆಪಿ ಕಾರ್ಯಕರ್ತ ಪ್ರಕಾಶ್ ಸಹೋದರನ ಮೇಲೆ ಮೂರ್ನಾಲ್ಕು ಮಂದಿ ಹಲ್ಲೆ ನಡೆಸಿದ್ದಾರೆ. ವೆಂಕಟೇಶ್ ಮೃತಪಟ್ಟಿದ್ದಾನೆಂದು ಅಲ್ಲಿಂದ ಓಡಿ ಹೋಗಿದ್ದಾರೆ. ವೆಂಕಟೇಶ್ ಮೇಲಿನ ಹಲ್ಲೆ ಪ್ರಕರಣದಲ್ಲಿ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ. ಕೆಲ ಮುಸ್ಲಿಂ ಗೂಂಡಾಗಳ ನಡವಳಿಕೆಯು ಎಲ್ಲ ಮುಸ್ಲಿಮರ ಮೇಲೆಯೂ ಪರಿಣಾಮ ಬೀರುತ್ತಿದೆ ಎಂದು ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿದ್ದಾರೆ.
ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆ ಬಳಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಬಜರಂಗದಳ ಕಾರ್ಯಕರ್ತ ಹರ್ಷಾ ಕೊಲೆಯ ನೋವು ಇನ್ನೂ ಮುಗಿದಿಲ್ಲ. ಈಗಾಗಲೇ ಹರ್ಷ ಕೇಸ್ನ ಆರೋಪಿಗಳ ಬಂಧನ ಆಗಿದೆ. ಪ್ರಕರಣದಲ್ಲಿ ಭಾಗಿಯಾಗಿರುವವರ ಪತ್ತೆ ಕಾರ್ಯ ಮುಂದುವರೆದಿದೆ. ಇದರ ಹಿಂದೆ ಷಡ್ಯಂತ್ರ ನಡೆಸಿರುವವರನ್ನು ಪತ್ತೆ ಮಾಡುವ ತನಿಖೆಯೂ ನಡೆಯುತ್ತಿದೆ. ಈ ನಡುವೆ ಗೂಂಡಾ ಮುಸ್ಲಿಮರ ಮಾನಸಿಕತೆಯೂ ಇನ್ನೂ ಕಡಿಮೆ ಆಗಿಲ್ಲ ಎಂದು ವಿಷಾದಿಸಿದರು. ಈ ಮಾನಸಿಕತೆಯಿಂದ ಸಮಾಜ ಒಡೆಯುವ ಸ್ಥಿತಿ ನಿರ್ಮಾಣವಾಗಿದೆ. ಮುಸ್ಲಿಂ ಗೂಂಡಾಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಇಂತಹ ಗೂಂಡಾಗಳ ವಿರುದ್ಧ ಮುಸ್ಲಿಂ ಸಮುದಾಯಗಳ ನಾಯಕರು ಗಮನಹರಿಸಬೇಕು. ಹಿಂದೂ ಸಮುದಾಯ ಆಕ್ರೋಶಗೊಂಡರೆ ಹೇಗೆಂಬ ಭಯದಿಂದ ಹಿಂದೂಗಳನ್ನು ನಿಯಂತ್ರಿಸುವುದು ಹೇಗೆಂಬ ಭಯ ಶುರುವಾಗಿದೆ ಎಂದು ಹೇಳಿದರು.
ಈಗಾಗಲೇ ನಾವು ಹರ್ಷನನ್ನು ಕಳೆದುಕೊಂಡಿದ್ದೇವೆ. ಈಗ ವೆಂಕಟೇಶ್ನನ್ನು ಕಳೆದುಕೊಳ್ಳಬೇಕೆ. ಈ ಘಟನೆಯಿಂದ ಶಿವಮೊಗ್ಗದ ಹಿಂದೂ ಯುವಕರಿಗೆ ಆಕ್ರೋಶ ಬರುವುದಿಲ್ಲವೇ. ಹಿಂದೂ ಸಮಾಜಕ್ಕೆ ಒಂದು ತಾಳ್ಮೆ ಇದೆ. ಈ ರೀತಿ ಮಿತಿ ಮೀರಿ ಗೂಂಡಾಗಿರಿ ನಡೆಯುತ್ತಿರುವುದರಿಂದ ಸಮಾಜವೇ ಒಡೆಯುವ ಸ್ಥಿತಿ ನಿರ್ಮಾಣವಾಗಿದೆ. ನಾವು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಪ್ರಯತ್ನ ಪಡುತ್ತಿದ್ದೇವೆ. ಮುಸ್ಲಿಂ ಗೂಂಡಾಗಳ ವಿರುದ್ಧ ಕಠಿಣ ಕ್ರಮ ತೆಗೆದು ಆಗ್ರಹಿಸಿದರು. ಹಿಂದೂ ಸಮಾಜ ಆಕ್ರೋಶ ಗೊಂಡರೆ ಅವರನ್ನು ನಿಯಂತ್ರಣ ಮಾಡುವುದು ಹೇಗೆಂಬ ಭಯ ನಮಗೂ ಶುರುವಾಗಿದೆ ಎಂದರು. ಶಿವಮೊಗ್ಗದ ಮೆಗ್ಗಾನ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಸಚಿವ ಕೆ.ಎಸ್.ಈಶ್ವರಪ್ಪ, ಮೊನ್ನೆ ರಾತ್ರಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ವೆಂಕಟೇಶ್ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಮೇಕೆದಾಟು ಎಂದು ಕಾಂಗ್ರೆಸ್ ನಾಯಕರು ಕುಣಿದುಕೊಂಡು ಹೋಗುತ್ತಿದ್ದಾರೆ. ಕಾಂಗ್ರೆಸ್‌ನವರಿಗೆ ಮಾಡುವುದಕ್ಕೆ ಬೇರೆ ಕೆಲಸವೇ ಇಲ್ಲ. ಹಿಜಾಬ್ ವಿವಾದ ದಿಕ್ಕು ತಪ್ಪಿಸುವುದಕ್ಕೆ ಈ ಪಾದಯಾತ್ರೆ ನಡೆಸುತ್ತಿದ್ದಾರೆ. ಮೇಕೆದಾಟು, ಮಹಾದಾಯಿ, ಕೃಷ್ಣಾ ಯೋಜನೆಗೆ ಸರ್ಕಾರವೇನೋ ಹಣವನ್ನು ಮೀಸಲಿಟ್ಟಿದೆ. ಎಲ್ಲ ನೀರಾವರಿ ಯೋಜನೆಗಳಿಗೆ ಬಜೆಟ್ನಲ್ಲಿ ಈ ಯೋಜನೆಗೆ ಹಣ ಮೀಸಲು ಇಡಲಾಗಿದೆ. ಸಿಎಂ ಬೊಮ್ಮಾಯಿ ಎಲ್ಲರ ನಿರೀಕ್ಷೆ ಮೀರಿ ಅತ್ಯುತ್ತಮ ಬಜೆಟ್ ಕೊಟ್ಟಿದ್ದಾರೆ ಎಂದರು.
ಇದನ್ನೂ ಓದಿ: BJP: ಬಿಜೆಪಿ ಸೂಚಿಸಿದರೆ ಶಿವಮೊಗ್ಗದ ಹರ್ಷ ಕುಟುಂಬಕ್ಕೆ ಶಾಸಕ ಸ್ಥಾನ: ಈಶ್ವರಪ್ಪ ಭರವಸೆ
ಇದನ್ನೂ ಓದಿ: ಈಶ್ವರಪ್ಪ ಟಿಕೆಟ್ ತ್ಯಜಿಸಿ ಹರ್ಷನ ತಂಗಿಗೆ, ಎಂಪಿ ಟಿಕೆಟ್ ತಾಯಿಗೆ ಕೊಡಲಿ -ಅವಿರೋಧವಾಗಿ ಆಯ್ಕೆ ಮಾಡಿಸೋಣ ಎಂದ ಇಬ್ರಾಹಿಂ