ಈಶ್ವರಪ್ಪ ಟಿಕೆಟ್ ತ್ಯಜಿಸಿ ಹರ್ಷನ ತಂಗಿಗೆ, ಎಂಪಿ ಟಿಕೆಟ್ ತಾಯಿಗೆ ಕೊಡಲಿ -ಅವಿರೋಧವಾಗಿ ಆಯ್ಕೆ ಮಾಡಿಸೋಣ ಎಂದ ಇಬ್ರಾಹಿಂ

ಈಶ್ವರಪ್ಪ ಟಿಕೆಟ್ ತ್ಯಜಿಸಿ ಹರ್ಷನ ತಂಗಿಗೆ, ಎಂಪಿ ಟಿಕೆಟ್ ತಾಯಿಗೆ ಕೊಡಲಿ -ಅವಿರೋಧವಾಗಿ ಆಯ್ಕೆ ಮಾಡಿಸೋಣ ಎಂದ ಇಬ್ರಾಹಿಂ
ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ

CM Ibrahim: 26 ವರ್ಷದ ತೇಜಸ್ವಿ ಸೂರ್ಯ ಪಾರ್ಲಿಮೆಂಟ್ ಗೆ ಹೋದ.ಅದೇ ವಯಸ್ಸಿನ ಹರ್ಷ ಸ್ಮಶಾನ ಸೇರಿದ. ಕಂಡವರ ಮಕ್ಕಳನ್ನ ಬಾವಿಗೆ ತಳ್ಳಿ, ಆಳ ನೋಡೋ ಮುಂ.. ಮಕ್ಕಳು ಬಿಜಿಪಿ ಅವರು ಎಂದು ಸಿಎಂ ಇಬ್ರಾಹಿಂ ಟೀಕಾ ಪ್ರಹಾರ ನಡೆಸಿದರು.

TV9kannada Web Team

| Edited By: sadhu srinath

Mar 01, 2022 | 4:50 PM

ಶಿವಮೊಗ್ಗ: ಶಿವಮೊಗ್ಗದಲ್ಲಿ ಇತ್ತೀಚೆಗೆ ನಡೆದ ಬಜರಂಗ ದಳ ಕಾರ್ಯಕರ್ತ ಹರ್ಷ (Bhajarangadal Harsha) ಹತ್ಯೆ ವಿಚಾರವಾಗಿ ಮಾಜಿ ಕೇಂದ್ರ ಸಚಿವ ಸಿ ಎಂ ಇಬ್ರಾಹಿಂ ಕೊಡಗಿನ ಮಡಿಕೇರಿ ಸಮೀಪದ ಸುಂಟಿಕೊಪ್ಪದಲ್ಲಿ ಹೇಳಿಕೆ ನೀಡಿದ್ದಾರೆ. ಸಚಿವರಾಗಿರುವ ಸ್ಥಳೀಯ ಶಾಸಕ ಕೆ ಎಸ್​ ಈಶ್ವರಪ್ಪ (KS Eshwarappa) ತಮ್ಮ ಟಿಕೆಟ್ ತ್ಯಜಿಸಿ ಮೃತಪಟ್ಟ ಹರ್ಷನ ತಂಗಿಗೆ ಎಂಎಲ್ಎ ಟಿಕೆಟ್ ನೀಡಲಿ. ತಂಗಿಗೆ ಟಿಕೆಟ್ ನೀಡಿದರೆ ನಾವು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಅವಿರೋಧವಾಗಿ ಆಕೆಯನ್ನು ವಿಧಾನ ಸಭೆಗೆ ಕಳುಹಿಸುತ್ತೇವೆ. ಹಾಗೆಯೇ, ಮಾಜಿ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರ ಮಗ ಬಿವೈ ರಾಘವೇಂದ್ರ ಸಹ (BY raghavendra) ಎಂಪಿ ಸ್ಥಾನ ತ್ಯಜಿಸಲಿ. ಹರ್ಷ ಅವರ ತಾಯಿಗೆ ಎಂಪಿ ಸ್ಥಾನಕ್ಕೆ ಟಿಕೆಟ್ ಕೊಡಲಿ. ಇದರಿಂದ ಹಿಂದೂ ಸಂಸ್ಕೃತಿಗೆ ನಿಜವಾದ ಗೌರವ ಸಿಕ್ಕಂತಾಗುತ್ತದೆ ಎಂದು ಸಿ ಎಂ ಇಬ್ರಾಹಿಂ ತಮ್ಮ ಆಶಯ ವ್ಯಕ್ತಪಡಿಸಿದ್ದಾರೆ.

26 ವರ್ಷದ ತೇಜಸ್ವಿ ಸೂರ್ಯ ಪಾರ್ಲಿಮೆಂಟ್ ಗೆ ಹೋದ. ಅದೇ ವಯಸ್ಸಿನ ಹರ್ಷ ಸ್ಮಶಾನ ಸೇರಿದ. ಕಂಡವರ ಮಕ್ಕಳನ್ನ ಬಾವಿಗೆ ತಳ್ಳಿ, ಆಳ ನೋಡೋ ಮುಂ.. ಮಕ್ಕಳು ಬಿಜಿಪಿ ಅವರು ಎಂದು ಸಿಎಂ ಇಬ್ರಾಹಿಂ ಟೀಕಾ ಪ್ರಹಾರ ನಡೆಸಿದರು.

ರಷ್ಯಾ ದಾಳಿಗೆ ಉಕ್ರೇನ್​​ನಲ್ಲಿದ್ದ ಕರ್ನಾಟಕದ ವಿದ್ಯಾರ್ಥಿ ದುರ್ಮರಣ ರಷ್ಯಾ ದಾಳಿಗೆ ತುತ್ತಾಗಿರುವ ಉಕ್ರೇನ್​​ನಲ್ಲಿ ಕರ್ನಾಟಕದ ವಿದ್ಯಾರ್ಥಿ ನವೀನ್​ ಎಂಬುವರು ಮೃತಪಟ್ಟಿದ್ದಾರೆ (Karnataka Student Killed In Ukraine . ಈ ಬಗ್ಗೆ ಕೇಂದ್ರ ವಿದೇಶಾಂಗ ವ್ಯವಹಾರಗಳ ಇಲಾಖೆ ಮಾಹಿತಿ ನೀಡಿದೆ. ನವೀನ್​ ಹಾವೇರಿಯವರಾಗಿದ್ದು, 4ವರ್ಷಗಳಿಂದ ಉಕ್ರೇನ್​​ನಲ್ಲಿ ನೆಲೆಸಿದ್ದರು. ಬೆಳಗ್ಗೆ 11.30ಕ್ಕೆ (ಭಾರತೀಯ ಕಾಲಮಾನ) ಕೊನೇ ಬಾರಿ ಸಂಪರ್ಕಕ್ಕೆ ಸಿಕ್ಕಿದ್ದರು. ಅವರೀಗ ಮೃತಪಟ್ಟಿದ್ದು ದೃಢಪಟ್ಟಿದೆ.

ಉಕ್ರೇನ್​ನಲ್ಲಿ ರಷ್ಯಾ ನಡೆಸಿದ ದಾಳಿಗೆ ಭಾರತದ ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದನ್ನು ತಿಳಿಸಲು ವಿಷಾದಿಸುತ್ತೇವೆ. ವಿದ್ಯಾರ್ಥಿಯ ಕುಟುಂಬಕ್ಕೆ ನಮ್ಮ ಸಾಂತ್ವನಗಳು ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ಅರವಿಂದ್ ಬಾಗ್ಚಿ ಟ್ವೀಟ್ ಮಾಡಿದ್ದರು. ಭಾರತದ ವೈದ್ಯಕೀಯ ವಿದ್ಯಾರ್ಥಿ ಸಾವಿನ ಸುದ್ದಿ ಕೇಳಿ ಬರುತ್ತಿದ್ದಂತೆ ರಷ್ಯಾ ಮತ್ತು ಉಕ್ರೇನ್​ ರಾಯಭಾರ ಕಚೇರಿ ಅಧಿಕಾರಿಗಳಿಗೆ ಭಾರತದ ಸರ್ಕಾರ ಬುಲಾವ್ ನೀಡಿದೆ.

ಇದನ್ನೂ ಓದಿ: ಅವಳಿ ಮಕ್ಕಳ ತಾಯಾದ ಅಮೂಲ್ಯ: ಫೋಟೋ ಹಂಚಿಕೊಂಡ ಪತಿ, ಸೆಲೆಬ್ರಿಟಿಗಳಿಂದ ಶುಭಾಶಯ

ಇದನ್ನೂ ಓದಿ: ಸಿದ್ದರಾಮಯ್ಯ ಅಪ್ಪನಾಣೆ ಮೋದಿ PM ಆಗಲ್ಲ ಎಂದಿದ್ರು; ನಾನು ಹೇಳ್ತೇನೆ, ಅಪ್ಪನಾಣೆ ಸಿದ್ದರಾಮಯ್ಯ ಮತ್ತೆ CM ಆಗಲ್ಲ- ಸಿ.ಟಿ.ರವಿ

Follow us on

Related Stories

Most Read Stories

Click on your DTH Provider to Add TV9 Kannada