- Kannada News Photo gallery Amulya Baby Photo Actress Amulya blessed with twins Husband Jagdish R Chandra Share Photo
ಅವಳಿ ಮಕ್ಕಳ ತಾಯಾದ ಅಮೂಲ್ಯ: ಫೋಟೋ ಹಂಚಿಕೊಂಡ ಪತಿ, ಸೆಲೆಬ್ರಿಟಿಗಳಿಂದ ಶುಭಾಶಯ
ನಟಿಯರಾದ ರಮ್ಯಾ, ಆಶಿಕಾ ರಂಗನಾಥ್, ಅದ್ವಿತಿ ಶೆಟ್ಟಿ, ಹರ್ಷಿಕಾ ಪೂಣಚ್ಚ, ಸೋನು ಗೌಡ ಮೊದಲಾದವರು ದಂಪತಿಗೆ ಶುಭಾಶಯ ಹೇಳಿದ್ದಾರೆ.
Updated on:Mar 01, 2022 | 3:52 PM

ನಟಿ ಅಮೂಲ್ಯ ಅವರು ಇತ್ತೀಚೆಗೆ ವೈಯಕ್ತಿಕ ಜೀವನದ ವಿಚಾರದಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅವರು ಪ್ರೆಗ್ನೆಂಟ್ ಆದ ನಂತರ ಫೋಟೋ ಹಂಚಿಕೊಂಡಿದ್ದರು. ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಮಟ್ಟದಲ್ಲಿ ಸುದ್ದಿ ಆಗಿತ್ತು. ಈಗ ಅಮೂಲ್ಯ ಅವರು ಅವಳಿ ಮಕ್ಕಳ ತಾಯಿ ಆಗಿದ್ದಾರೆ.

ಅಮೂಲ್ಯಗೆ ಮಗು ಜನಿಸಿದ ವಿಚಾರವನ್ನು ಅವರ ಪತಿ ಜಗದೀಶ್ ಆರ್. ಚಂದ್ರ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅಮೂಲ್ಯ ಜತೆ ನಿಂತಿರುವ ಫೋಟೋ ಹಂಚಿಕೊಂಡಿರುವ ಅವರು, ಖುಷಿಯ ಸಮಾಚಾರ ತಿಳಿಸಿದ್ದಾರೆ.

‘ಅವಳಿ ಮಕ್ಕಳು ಜನಿಸಿವೆ. ಇಬ್ಬರು ಗಂಡು ಮಕ್ಕಳು ಹಾಗೂ ಅಮೂಲ್ಯ ಆರೋಗ್ಯವಾಗಿದ್ದಾರೆ. ಈ ಪಯಣದಲ್ಲಿ ಜತೆ ನಿಂತು ಹಾರೈಸಿದ ಎಲ್ಲರಿಗೆ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ ಜಗದೀಶ್ ಅವರು. ಈ ಫೋಟೋ ವೈರಲ್ ಆಗುತ್ತಿದೆ.

ಅಮೂಲ್ಯ ಅವರು ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ಬೆಳಗ್ಗೆ 11.45ರ ಸುಮಾರಿಗೆ ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾಯಿ ಮಕ್ಕಳು ಇಬ್ಬರೂ ಆರೋಗ್ಯವಾಗಿರುವ ಸುದ್ದಿ ಕೇಳಿ ಅವರ ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ನಟಿಯರಾದ ರಮ್ಯಾ, ಆಶಿಕಾ ರಂಗನಾಥ್, ಅದ್ವಿತಿ ಶೆಟ್ಟಿ, ಹರ್ಷಿಕಾ ಪೂಣಚ್ಚ, ಸೋನು ಗೌಡ ಮೊದಲಾದವರು ದಂಪತಿಗೆ ಶುಭಾಶಯ ಹೇಳಿದ್ದಾರೆ.

ಇತ್ತೀಚೆಗೆ ಸ್ಯಾಂಡಲ್ವುಡ್ಮಂದಿ ಅಮೂಲ್ಯಗೆ ಸೀಮಂತ ನಡೆಸಿದ್ದರು. ಈ ಫೋಟೋಗಳನ್ನು ಅಮೂಲ್ಯ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದರು.
Published On - 3:39 pm, Tue, 1 March 22




