ಗಾಂಜಾ ಎಣ್ಣೆಯಲ್ಲಿ ಚಾಕೋಲೇಟ್! ಒಡಿಸಾದ ಇಬ್ಬರು ಐನಾತಿಗಳು ಮಹದೇವಪುರದಲ್ಲಿ ಅರೆಸ್ಟ್

ಗಾಂಜಾ ಎಣ್ಣೆಯಲ್ಲಿ ಚಾಕೋಲೇಟ್! ಒಡಿಸಾದ ಇಬ್ಬರು ಐನಾತಿಗಳು ಮಹದೇವಪುರದಲ್ಲಿ ಅರೆಸ್ಟ್
ಗಾಂಜಾ ಎಣ್ಣೆಯಲ್ಲಿ ಚಾಕೋಲೇಟ್! ಒಡಿಸಾದ ಇಬ್ಬರು ಐನಾತಿಗಳು ಮಹದೇವಪುರದಲ್ಲಿ ಅರೆಸ್ಟ್

ಒಡಿಸ್ಸಾದಿಂದ ರಾಜ್ಯಕ್ಕೆ ಗಾಂಜಾ ಚಾಕ್ಲೇಟ್ ತರ್ತಿದ್ದ ಇವರು 1ರೂಪಾಯಿಂದ 20ರೂಪಾಯಿವರೆಗೂ ಸೇಲ್ ಮಾಡ್ತಿದ್ರು. ಅದೂ ಕೂಡ ಜಿಗಣಿಯಲ್ಲಿರೋ ತಮ್ಮ ಸಂಬಂಧಿಯ ಪಾನ್ಶಾಪ್ನಲ್ಲಿ ಚಾರ್ಮಿನಾರ್ ಗೋಲ್ಡ್ ಹೆಸ್ರಲ್ಲಿ ಮಾರುತ್ತಿದ್ರು.

TV9kannada Web Team

| Edited By: Ayesha Banu

Mar 04, 2022 | 7:56 PM

ಬೆಂಗಳೂರು: ನಗರದಲ್ಲಿ ಡ್ರಗ್ಸ್(Drugs), ಗಾಂಜಾ(Ganja) ಘಮಲು ಮಾಮೂಲಿ. ಗಾಂಜಾ ಮಾರಾಟ ಮಾಡುವವರನ್ನು ಪೊಲೀಸರು ಹುಡುಕಿ ಹುಡುಕಿ ಅರೆಸ್ಟ್ ಮಾಡುತ್ತಿದ್ದಾರೆ. ಆದ್ರೆ ಖದೀಮರು ಪೊಲೀಸರ ಕಣ್ತಪ್ಪಿಸಿ ನಾನಾ ದಾರಿಗಳನ್ನು ಹಿಡಿದು ಗಾಂಜಾ ಮಾರಾಟ ಮಾಡುತ್ತಿದ್ದಾರೆ. ಸದ್ಯ ಗಾಂಜಾ ಎಣ್ಣೆಯಲ್ಲಿ ಚಾಕೋಲೇಟ್ ತಯಾರಿಸಿ ಮಾರಾಟ ಮಾಡುತ್ತಿದ್ದ ಖದೀಮರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪ್ರದೀಪ್ ಕುಮಾರ್ ಮತ್ತು ಎಸ್.ಕೆ ಸಜಾನ್ ಬಂಧಿತ ಆರೋಪಿಗಳು.

ಬೆಂಗಳೂರಿನ ವೆಲ್ಡಿಂಗ್ ಶಾಪ್ವೊಂದ್ರಲ್ಲಿ ಕೆಲ್ಸ ಮಾಡ್ತಿದ್ದ ಆರೋಪಿ ಪ್ರದೀಪ್ ಕುಮಾರ್ ಮತ್ತು ಎಸ್.ಕೆ ಸಜಾನ್ ಇಬ್ರೂ ದುಡ್ಡು ಮಾಡೋಕೆ ಅಡ್ಡದಾರಿ ಹಿಡಿದಿದ್ರು. ಒಡಿಸ್ಸಾದಿಂದ ರಾಜ್ಯಕ್ಕೆ ಗಾಂಜಾ ಚಾಕ್ಲೇಟ್ ತರ್ತಿದ್ದ ಇವರು 1ರೂಪಾಯಿಂದ 20ರೂಪಾಯಿವರೆಗೂ ಸೇಲ್ ಮಾಡ್ತಿದ್ರು. ಅದೂ ಕೂಡ ಜಿಗಣಿಯಲ್ಲಿರೋ ತಮ್ಮ ಸಂಬಂಧಿಯ ಪಾನ್ಶಾಪ್ನಲ್ಲಿ ಚಾರ್ಮಿನಾರ್ ಗೋಲ್ಡ್ ಹೆಸ್ರಲ್ಲಿ ಮಾರುತ್ತಿದ್ರು. ಹಾಲು, ನೀರು ಹಾಗೇ ಪಾನ್ಬೀಡಾದಲ್ಲಿ ಹಾಕಿ ತಿನ್ನುವಂತೆ ತಾವೇ ಐಡಿಯಾ ಕೊಡ್ತಿದ್ರು. ಈ ನಡುವೆ ಬೆಂಗಳೂರಲ್ಲಿ ಗಾಂಜಾ ಮಾರಾಟ ಮಾಡಲು ಮಾಲು ತರ್ತಿದ್ದಾರೆ ಅನ್ನೋ ಮಾಹಿತಿ ಪಡೆದು ಮಹದೇವಪುರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಪ್ರದೀಪ್ ಮತ್ತು ಸಜಾನ್ ಲಾಕ್ ಆಗಿದ್ದಾರೆ. ಆರಂಭದಲ್ಲಿ ಇವು ನಾರ್ಮಲ್ ಚಾಕ್ಲೇಟ್ಗಳು ಅಂತಾ ನಂಬಿಸೋಕೆ ಟ್ರೈ ಮಾಡಿದ್ದಾರೆ. ಆದ್ರೆ ಪೊಲೀಸ್ರಿಗೆ ಡೌಟ್ ಬಂದು ತಮ್ಮದೇ ಸ್ಟೈಲ್ನಲ್ಲಿ ವಿಚಾರಣೆ ನಡೆಸಿದಾಗ ಅಸಲಿಯತ್ತನ್ನ ಬಾಯ್ಬಿಟ್ಟಿದ್ದಾರೆ.

ಬೆಂಗಳೂರಲ್ಲಿ ನಶೆ ಜಾಲ ಹೆಚ್ಚಾಗ್ತಿದ್ದು, ಗಾಂಜಾ ಗಿರಾಕಿಗಳನ್ನ ಹುಡುಕಿ ಹುಡುಕಿ ಪೊಲೀಸ್ರು ಗುನ್ನಾ ಇಡ್ತಿದ್ದಾರೆ. ಆದ್ರೆ ಖಾಕಿ ಬಲೆಯಿಂದ ತಪ್ಪಿಸಿಕೊಳ್ಳೋಕೆ ಐನಾತಿಗಳು ನಾನಾ ದಾರಿ ಹಿಡಿದಿದ್ದಾರೆ. ಈಗಂತೂ ಮಕ್ಕಳು ತಿನ್ನೋ ಚಾಕ್ಲೇಟ್ಗಳಲ್ಲೇ ನಶೆ ಮಿಕ್ಸ್ ಮಾಡಿರೋರು ಎಲ್ಲರ ಆತಂಕಕ್ಕೆ ಕಾರಣವಾಗಿದೆ.

ವರದಿ: ಪ್ರಜ್ವಲ್, ಟಿವಿ9, ಬೆಂಗಳೂರು

ಇದನ್ನೂ ಓದಿ: ದೇವೇಗೌಡರು ಪ್ರಧಾನಿಯಾಗಿದ್ದಾಗ 9 ಟಿ ಎಮ್ ಸಿ ನೀರು ಬಿಡಿಸಿರದಿದ್ದರೆ, ಕಾಂಗ್ರೆಸ್ ಆಣೆಕಟ್ಟುಗಳನ್ನು ಎಲ್ಲಿ ಕಟ್ಟುತ್ತಿತ್ತು? ಕುಮಾರಸ್ವಾಮಿ

Crime Updates: ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳ ಬಳಿ 1 ಕೆಜಿ ಗಾಂಜಾ ಪತ್ತೆ; ಆರೋಪಿಗಳ ಬಂಧನ

Follow us on

Related Stories

Most Read Stories

Click on your DTH Provider to Add TV9 Kannada