ಎಲ್ಲಾ ಕ್ಷೇತ್ರಗಳನ್ನು ಗಮನದಲ್ಲಿರಿಸಿ ಈ ಬಾರಿ ಸೂಕ್ಷ್ಮ ಬಜೆಟ್ ಮಂಡನೆ: ಸಿಎಂ ಬಸವರಾಜ ಬೊಮ್ಮಾಯಿ
ಸುದ್ದಿಗೋಷ್ಟಿಯಲ್ಲಿ ಬಜೆಟ್ ಬಗ್ಗೆ ಮಾತನಾಡಿದ ಅವರು, ಈ ಬಾರಿ ಸೂಕ್ಷ್ಮ ಬಜೆಟ್ ಮಂಡಿಸಲಾಗಿದೆ. ಈಗ ರಾಜ್ಯದ ಆರ್ಥಿಕತೆ ಸುಧಾರಿಸುತ್ತಿದೆ ಹೀಗಾಗಿ ಲೆಕ್ಕಚಾರ ಹಾಕೋದಕ್ಕೆ ಗೊತ್ತಾಗುತ್ತಿದೆ ಎಂದಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavraj Bommai) ಅವರು ಸಿಎಂ ಆಗಿ 9 ತಿಂಗಳ ಬಳಿಕ ಚೊಚ್ಚಲ ಬಜೆಟ್ (Budget) ಮಂಡಿಸಿದ್ದಾರೆ. ಕೊರೊನಾ, ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಇಂದು(ಮಾ.4) 2022-23ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ. ಶಿಕ್ಷಣ, ಆರೋಗ್ಯ, ಶಿಕ್ಷಣ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇಂದು ಮಧ್ಯಾಹ್ನ ಬಜೆಟ್ ಮಂಡಿಸಿದ ಬಳಿಕ ಸುದ್ದಿಗೋಷ್ಟಿ ನಡೆಸಿ ಮಾತನಾಡಿದರು.
ಸುದ್ದಿಗೋಷ್ಟಿಯಲ್ಲಿ ಬಜೆಟ್ ಬಗ್ಗೆ ಮಾತನಾಡಿದ ಅವರು, ಈ ಬಾರಿ ಸೂಕ್ಷ್ಮ ಬಜೆಟ್ ಮಂಡಿಸಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಆರ್ಥಿಕತೆ ಬಹಳಷ್ಟು ಪೆಟ್ಟುಬಿದ್ದಿತ್ತು. ನೈಸರ್ಗಿಕ ವಿಕೋಪ ಹಾಗೂ ಕೋವಿಡ್ ನಿಂದ 2021 -22 ರಲ್ಲಿ ಕುಸಿತವಾಗಿತ್ತು. ಈಗ ಆರ್ಥಿಕತೆ ಸುಧಾರಿಸುತ್ತಿದೆ ಲೆಕ್ಕಚಾರ ಹಾಕೋದಕ್ಕೆ ಗೊತ್ತಾಗುತ್ತಿದೆ. 2.65.720 ಕೋಟಿ ಈ ಬಾರಿಯ ಬಜೆಟ್ ಗಾತ್ರವಾಗಿದೆ. ಕಳೆದ ಬಾರಿಗಿಂತ 19,513 ಕೋಟಿ ಹೆಚ್ಚಳವಾಗಿದೆ. ಕಳೆದ ಬಾರಿಗೆ ಕಂಪೇರ್ ಮಾಡಿದರೆ, ಕ್ಯಾಪಿಟಲ್ ಎಕ್ಸ್ಪೆಂಡೇಚರ್ ಸುಮಾರು 2700 ಕೋಟಿ ಹೆಚ್ಚಳವಾಗಿದೆ. ನಮಗೆ 67100 ಕೋಟಿ ಸಾಲ ತೆಗೆದುಕೊಳ್ಳಲು ಅವಕಾಶವಿತ್ತು. ಆದರೆ ಆರ್ಥಿಕ ಸಂಪೂನ್ಮೂಲ ಹೆಚ್ಚಳ ಮಾಡುವುದರ ಮೂಲಕ, ಖರ್ಚುಗಳನ್ನ ಕಡಿಮೆಮಾಡುವುದರ ಮೂಲಕ ಸುಮಾರು 4 ಕೋಟಿ ಕಡಿಮೆ ಮಾಡಿದ್ದೇವೆ. ಇದು ನಮ್ಮ ಆರ್ಥಿಕತೆ ಬಗ್ಗೆ ಪ್ರತಿಬಿಂಬಿಸುತ್ತದೆ ಎಂದಿದ್ದಾರೆ.
ನಾವೂ ಆರ್ಥಿಕ ಸಂಪನ್ಮೂಲ ಕ್ರೂಢಿಕರಿಸುವುದು, ಖರ್ಚುವೆಚ್ಚ ಕಡಿಮೆ ಮಾಡುವುದು ನಮ್ಮ ಮುಂದಿರುವ ಗುರಿಯಾಗಿದೆ ಈ ಬಾರಿಯ ಬಜೆಟ್ ನಲ್ಲಿ ಕೇಂದ್ರದ ಜಿಎಸ್ ಟಿ ಪರಿಹಾರವನ್ನ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ನಾವೂ ಕೇಂದ್ರ ಸರ್ಕಾರಕ್ಕೆ ಕನಿಷ್ಠ ಮೂರು ವರ್ಷ ಮುಂದುವರಿಸಿ ಎಂದು ಮನವಿ ಮಾಡಿದ್ದೇವೆ. ಆಗ ಗಣನೀಯವಾಗಿ ಆರ್ಥಿಕತೆಯನ್ನ ನಾವೂ ಸುಧಾರಿಸಬಹುದು. ರೈತರಿಗೆ ಐದು ಎಕರೆವರೆಗೂ ಡೀಸೆಲ್ ಗೆ ಎಕರೆಗೆ 250 ರೂಪಾಯಿವರೆಗೂ ಸಬ್ಸಿಡಿ ನೀಡುತ್ತೇವೆ. ಯಶಸ್ವಿನಿ ಯೋಜನೆಗೆ ೩೦೦ ಕೋಟಿ ಮೀಸಲಿಟ್ಟು ರೈತರ ಆರೋಗ್ಯಕ್ಕೆ ನೆರುವು ಆಗುವಂತೆ ಮಾಡಿದ್ದೇವೆ. 33 ಲಕ್ಷ ರೈತರಿಗೆ ಬಡ್ಡಿ ರಹಿತ ಸಾಲ ನೀಡುತ್ತೇವೆ. ಇದು ರೈತರಿಗೆ ನೆರವಾಗಲಿದೆ. ಇದು ಬಡವರ ಪರವಾದ, ಕಷ್ಟದಲ್ಲಿರುವವರನ್ನ ಅರಿತು ಮಾಡಿರುವ ಸೂಕ್ಷ್ಮ ಬಜೆಟ್ ಆಗಿದೆ. ರಾಜ್ಯವನ್ನು ನವಕರ್ನಾಟಕದಿಂದ ನವಭಾರತದತ್ತ ತೆಗೆದುಕೊಂಡು ಹೋಗಲು ಬೇಕಾದ ಕ್ರಮ ಕೈಗೊಳ್ಳಲಾಗುವುದು.
ಇನ್ನು ಕೆಲವು ಸಮಸ್ಯೆಗಳಿಗೆ ಕಾನೂನಿನ ತೊಡಕು ಇದೆ. ಅದನ್ನು ನಿವಾರಿಸಿ ಜನರಿಗೆ ಉಪಯುಕ್ತವಾಗುವಂತೆ ಮಾಡುತ್ತೇವೆ. ಇದು ಅತ್ಯಂತ ಗುರಿಯಿಟ್ಟ, ಪ್ರಾದೇಶಿಕ ಸಮಾನತೆಯ ಬಜೆಟ್, ಕೃಷಿ, ದುಡಿಯುವವರಿಗೆ, ಮಹಿಳೆ, ಯುವ ಜನತೆಗೆ ಉಪಯೋಗವಾಗಲಿದೆ. ಬಜೆಟ್ ನಲ್ಲಿ ಒಂದಷ್ಟು ಹೊಸ ವಿಚಾರ ಅಡಕವಾಗಿದೆ, ಈ ಬಾರಿಯ ಬಜೆಟ್ನಲ್ಲಿ ಘೋಷಣೆಯಾದ ಯೋಜನೆಗಳನ್ನು ಇದೇ ವರ್ಷದಲ್ಲಿ ಜಾರಿಗೆ ತರಲಾಗುವುದು. ಎಂದರು. ಇನ್ನು ಮೇಕೆ ದಾಟು ಯೋಜನೆಗ್ಎ ಹಣ ಮೀಸಲಿಟ್ಟ ಬಗ್ಗೆ ಮಾತನಾಡಿ, ಮೇಕೆದಾಟು ಯೋಜನೆ ಪ್ರಾರಂಭಿಸುವ ಇಚ್ಚಾಶಕ್ತಿ ಇದೆ. ಅದಕ್ಕಾಗಿಯೇ 1 ಸಾವಿರ ಕೊಟಿ ರೂ.ಹಳನ್ನು ತೆಗೆದಿಡಲಾಗಿದೆ. ಅದೇ ರಿತಿ ಕೆಲಸ ಮಾಡುತ್ತೇವೆ ಎಂದಿದ್ದಾರೆ.
ಇಂದಿನ ಬಜೆಟ್ ಮೇಲಿನ ಸುದ್ದಿಗೋಷ್ಟಿಯಲ್ಲಿ ಸಚಿವರಾದ ಗೋವಿಂದ್ ಕಾರಜೋಳ ಹಾಗೂ ಸಿಸಿ ಪಾಟೀಲ್ ಹಾಜರಾಗಿದ್ದು, ಉಳಿದಂತೆ ಎಲ್ಲಾ ಸಚಿವರು ಗೈರಾಗಿದ್ದರು.
ಇದನ್ನೂ ಓದಿ:
Published On - 5:28 pm, Fri, 4 March 22