ಯಾದಗಿರಿ ಜಿಲ್ಲೆಯಲ್ಲೊಂದು ವಿಶೇಷ ಬರ್ತಡೇ ಆಚರಣೆ; ಹುಂಜದ ಹುಟ್ಟುಹಬ್ಬ ಸೆಲೆಬ್ರೇಟ್ ಮಾಡಿದ ವ್ಯಕ್ತಿ
ಕಾಣಿಕೇರಿ ಓಣಿಯ ನಿವಾಸಿ ಹನುಮಂತ ಮೂರು ವರ್ಷದಿಂದ ಈ ಹುಂಜವನ್ನು ಸಾಕುತ್ತಿದ್ದಾರೆ. ಇದರ ಜತೆಗೆ ಅನೇಕ ಕೋಳಿ, ಹುಂಜ ಸಾಕಿದ್ದಾರೆ. ಆದರೆ ಈ ಹುಂಜ ಹನುಮಂತನಿಗೆ ಅತ್ಯಂತ ಅಚ್ಚುಮೆಚ್ಚು. ದಿನದ 24 ಗಂಟೆಯೂ ನಿಗ ಇಟ್ಟು ಈ ಹುಂಜವನ್ನು ಸಾಕಿದ್ದಾರೆ.
ಯಾದಗಿರಿ: ಮನುಷ್ಯರಂತೆ ಪ್ರಾಣಿಗಳಿಗೂ ಹುಟ್ಟುಹಬ್ಬ(Birthday) ಮಾಡುವುದು ಸರ್ವೆ ಸಾಮಾನ್ಯ ಎನ್ನುವಂತಾಗಿದೆ. ಇತ್ತೀಚೆಗೆ ಇದಕ್ಕೆ ಅನುಗುಣವಾಗಿ ನಾಯಿ(Dog), ದನ, ಕುರಿಗಳ ಹುಟ್ಟುಹಬ್ಬ, ಸೀಮಂತ ಮಾಡಿ ಸಂಭ್ರಮಿಸಿದ್ದಾರೆ. ಸದ್ಯ ಹುಂಜದ(Cock) ಹುಟ್ಟುಹಬ್ಬವನ್ನು ವ್ಯಕ್ತಿಯೊಬ್ಬರು ಸತ್ಯಂತ ಸಂಭ್ರಮದಿಂದ ಆಚರಿಸಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ನಗರದ ಕಾಣಿಕೇರಿ ಓಣಿಯಲ್ಲಿ ಹನುಮಂತ ಎಂಬ ವ್ಯಕ್ತಿ ತಾವು ಸಾಕಿದ ಹುಂಜದ ಮೂರನೇ ವರ್ಷದ ಹುಟ್ಟುಹಬ್ಬ ಆಚರಿಸಿದ್ದಾರೆ.
ಕಾಣಿಕೇರಿ ಓಣಿಯ ನಿವಾಸಿ ಹನುಮಂತ ಮೂರು ವರ್ಷದಿಂದ ಈ ಹುಂಜವನ್ನು ಸಾಕುತ್ತಿದ್ದಾರೆ. ಇದರ ಜತೆಗೆ ಅನೇಕ ಕೋಳಿ, ಹುಂಜ ಸಾಕಿದ್ದಾರೆ. ಆದರೆ ಈ ಹುಂಜ ಹನುಮಂತನಿಗೆ ಅತ್ಯಂತ ಅಚ್ಚುಮೆಚ್ಚು. ದಿನದ 24 ಗಂಟೆಯೂ ನಿಗ ಇಟ್ಟು ಈ ಹುಂಜವನ್ನು ಸಾಕಿದ್ದಾರೆ. ಈ ಹುಂಜಕ್ಕೆ ಬ್ಲೇಡ್ ನಾಗ ಎಂದು ಹೆಸರಿಟ್ಟಿದ್ದಾರೆ. ಈ ಹುಂಜ ಅನೇಕ ಕಡೆ ಕುಸ್ತಿ ಪಂದ್ಯದಲ್ಲಿ ಗೆಲುವು ಸಾಧಿಸಿದೆ.
ಹನುಮಂತ ತನ್ನ ಪ್ರೀತಿಯ ಹುಂಜಕ್ಕೆ ಇಂದು (ಮಾರ್ಚ್ 04) 3 ನೇ ವರ್ಷದ ಹುಟ್ಟುಹಬ್ಬ ಮಾಡಿ ಸಂಭ್ರಮಿಸಿದ್ದಾರೆ. ತನ್ನ ಅಚ್ಚುಮೆಚ್ಚಿನ ಹುಂಜಕ್ಕೆ ಕೇಕ್ ಕಟ್ ಮಾಡಿ, ಶಾಲು ಹೊದಿಸಿ ಹೂವಿನ ಹಾರ ಹಾಕಿ ಹುಟ್ಟುಹಬ್ಬ ಆಚರಿಸಿದ್ದಾರೆ. ಸ್ನೇಹಿತರ ಜೊತೆ ಸೇರಿ ಹನುಮಂತ ಹುಂಜದ ಬರ್ತಡೇ ಮಾಡಿದ್ದಾರೆ.
ಈ ಹಿಂದೆಯೂ ಹುಂಜಗಳಿಗೆ ಹುಟ್ಟುಹಬ್ಬ ಆಚರಿಸಲಾಗಿತ್ತು
ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ನೆಚ್ಚಿನ ಪ್ರಾಣಿಗಳ ಹುಟ್ಟುಹಬ್ಬವನ್ನು ತಮ್ಮ ಕುಟುಂಬದ ಸದಸ್ಯರೊಬ್ಬರ ಜನುಮ ದಿನ ಎಂಬಂತೆ ಸಡಗರದಿಂದ ಆಚರಿಸುವುದು ತೀರ ಸಾಮಾನ್ಯವಾಗಿದೆ. ಆದರೆ ಇಲ್ಲೊಂದು ಕುಟುಂಬ ಸ್ವಲ್ಪ ವಿಭಿನ್ನವಾಗಿ ಮನೆಯಲ್ಲಿ ಸಾಕಿದ್ದ ಹುಂಜಗಳ ಬರ್ತ್ ಡೇಯನ್ನು ಸಂಭ್ರಮದಿಂದ ಆಚರಿಸಿದೆ.
ಬೆಳಗಾವಿಯ ಮಾಳಿಗಲ್ಲಿಯ ಮೇಘನಾ ಲಂಗರಖಂಡೆ ಕುಟುಂಬಸ್ಥರಿಂದ ಈ ವಿಶಿಷ್ಟ ಹುಟ್ಟುಹಬ್ಬ ಆಚರಣೆ ನಡೆದಿದೆ. ತಮ್ಮ ಮನೆಯಲ್ಲಿ ಸಾಕಿದ ಹುಂಜಗಳಿಗೆ ಶೇರು ಹಾಗೂ ವೀರು ಅಂತಾ ಹೆಸರಿಟ್ಟಿದ್ದು, ಇವುಗಳ 5ನೇ ವರ್ಷದ ಜನ್ಮದಿನವನ್ನು ಕೇಕ್ ಕತ್ತರಿಸಿ, ಸಂಭ್ರಮದಿಂದ ಆಚರಿಸಿದ್ದಾರೆ. ಕೇಕ್ ಮೇಲೆ ಕೂಡ ಹುಂಜಗಳ ಚಿತ್ರವನ್ನೇ ನಮೂದಿಸಿದ್ದನ್ನು ನೋಡಬಹುದು.. ಹುಂಜಗಳ ಹುಟ್ಟುಹಬ್ಬ ಆಚರಣೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.
ಇದನ್ನೂ ಓದಿ: ಹಣ್ಣು, ಬಿಸ್ಕತ್ತು ಇಟ್ಟು ಮಗನಂತೆ ಸಾಕಿದ ನಾಯಿಯ ತಿಥಿ ಮಾಡಿದ ಹಾವೇರಿ ದಂಪತಿ; ಟೈಸನ್ ನೆನೆದು ಕಣ್ಣೀರು
ಧಾರವಾಡ: ಮನೆ ಮಗನಂತೆ ಸಾಕಿರುವ ಎತ್ತಿಗೆ ಹುಟ್ಟುಹಬ್ಬ; 8 ಕೆಜಿ ಕೆಕ್ ಕತ್ತರಿಸಿ ಸಂಭ್ರಮಿಸಿದ ರೈತ ಕುಟುಂಬ
Published On - 6:35 pm, Fri, 4 March 22