ಮೇಕೆದಾಟು ವಿಚಾರವೂ ಮಾತುಕತೆ ಮೂಲಕ ಬಗೆಹರಿಯಲಿ: ಕೇಂದ್ರ ಜಲ‌ ಶಕ್ತಿ ಸಚಿವ ಶೇಖಾವತ್ ಆಶಯ, ಅಭಿಪ್ರಾಯ!

ಮೇಕೆದಾಟು ವಿಚಾರವೂ ಮಾತುಕತೆ ಮೂಲಕ ಬಗೆಹರಿಯಲಿ: ಕೇಂದ್ರ ಜಲ‌ ಶಕ್ತಿ ಸಚಿವ ಶೇಖಾವತ್ ಆಶಯ, ಅಭಿಪ್ರಾಯ!
ಮೇಕೆದಾಟು ವಿಚಾರವೂ ಮಾತುಕತೆ ಮೂಲಕ ಬಗೆಹರಿಯಲಿ: ಕೇಂದ್ರ ಜಲ‌ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಆಶಯ, ಅಭಿಪ್ರಾಯ!

Union Jal Shakti Minister Gajendra Singh Shekhawat : ಎರಡೂ ರಾಜ್ಯಗಳು ಕುಳಿತು ಮಾತನಾಡಿದ್ರೆ ಮೇಕೆದಾಟು ಕುಡಿಯುವ ನೀರು ಯೋಜನೆ ಆರಂಭವಾಗಲಿದೆ. ಇದಕ್ಕೆ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಲು ಸಿದ್ದವಿದೆ ಎಂದು ಕೇಂದ್ರ ಜಲ‌ ಶಕ್ತಿ ಸಚಿವ ಶೇಖಾವತ್ ಹೇಳಿದ್ದಾರೆ.

TV9kannada Web Team

| Edited By: sadhu srinath

Mar 05, 2022 | 3:29 PM

ಬೆಂಗಳೂರು: ಕಾವೇರಿ ನದಿಗೆ ಅಡ್ಡಲಾಗಿ ತಮಿಳುನಾಡಿನ ಗಡಿಯಲ್ಲಿ ಕರ್ನಾಟಕದ ಮೇಕೆದಾಟು ಕುಡಿಯುವ ನೀರು ಯೋಜನೆ (Mekedatu Project) ನಿರ್ಮಾಣಕ್ಕೆ ತಮಿಳುನಾಡು ಸರ್ಕಾರ ಅಡ್ಡಗಾಲು ಹಾಕಿದೆ. ಈ ಮಧ್ಯೆ, ಇಂದು ಬೆಂಗಳೂರಿಗೆ ಬಂದಿರುವ ಕೇಂದ್ರ ಜಲ‌ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ವಿಧಾನಸೌಧದಲ್ಲಿ ಮಾತನಾಡುತ್ತಾ ಎರಡೂ ರಾಜ್ಯಗಳಿಗೆ ಹಿತವಚನ ನೀಡಿದ್ದಾರೆ. ಆದರೆ ಇದು ಕರ್ನಾಟಕಕ್ಕೆ ಹಿತವಾ? ಎಂಬುದು ತಕ್ಷಣದ ಪ್ರಶ್ನೆಯಾಗಿದೆ. ಏಕೆಂದರೆ ಕರ್ನಾಟಕ ತನ್ನ ಪಾಲಿಗೆ ಮೇಕೆದಾಟು ಕುಡಿಯುವ ನೀರು ಯೋಜನೆ ನಿರ್ಮಾಣ ಕೈಗೊಳ್ಳುವುದು ಅದರ ಹಕ್ಕಿನ ವಿಚಾರವಾಗಿದೆ. ಇನ್ನುಕೇಂದ್ರ ಜಲ‌ ಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ವಿಚಾರ, ಆಶಯ, ಅಭಿಪ್ರಾಯ ಏನು ಎಂದು ನೋಡುವುದಾದರೆ ವಿಧಾನಸೌಧದಲ್ಲಿ ಇಂದು ನಡೆದ ಸಭೆಯಲ್ಲಿ ಮೇಕೆದಾಟು ಯೋಜನೆ ವಿಚಾರ ಚರ್ಚೆಯಲ್ಲಿ ಇರಲಿಲ್ಲ. ಮೇಕೆದಾಟು ಯೋಜನೆಗೆ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿರುವ ವಿಚಾರ ಒಳ್ಳೆಯದೇ. ನಾನು ಯೋಜನೆ ಆಗಲಿ ಅನ್ನೋ ಆಶಯ ವ್ಯಕ್ತಪಡಿಸುತ್ತೇನೆ. ಆದರೆ ನ್ಯಾಯಾಧಿಕರಣದಲ್ಲಿ ಪ್ರಕರಣ ಇರುವುದರಿಂದ ಹೆಚ್ಚಿನದೇನೂ ಮಾತನಾಡುವುದಿಲ್ಲ ಎಂದಿದ್ದಾರೆ (Union Jal Shakti Minister Gajendra Singh Shekhawat ).

ಮೇಕೆದಾಟು ಪ್ರಕರಣ ನ್ಯಾಯಾಧಿಕರಣದಲ್ಲಿ ಇರುವುದರಿಂದ ನಾನು ಆ ಬಗ್ಗೆ ಮಾ‌ತನಾಡಲ್ಲ. ಆದರೂ ಎರಡೂ ರಾಜ್ಯಗಳು ಕುಳಿತು ಮಾತನಾಡಿದ್ರೆ ಯೋಜನೆ ಆರಂಭವಾಗಲಿದೆ. ಇದಕ್ಕೆ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಲು ಸಿದ್ದವಿದೆ ಎಂದು ಕೇಂದ್ರ ಜಲ‌ ಶಕ್ತಿ ಸಚಿವ ಶೇಖಾವತ್ ಹೇಳಿದ್ದಾರೆ. ಮುಂದುವರಿದು ಮಾತನಾಡಿರುವ ಅವರು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ನಡುವೆ ಕೂಡಾ ಇದೇ ರೀತಿ ಸಮಸ್ಯೆ ಇತ್ತು. ಕೆನ್ ಬೆತ್ವಾ ನದಿ ಜೋಡಣೆ ಸಮಸ್ಯೆ ಅಲ್ಲಿತ್ತು. ಅವರು ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಂಡಿದ್ದರು. ಮೇಕೆದಾಟು ವಿಚಾರದಲ್ಲೂ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಿ ಎಂದು ಕಿವಿಮಾತು ಹೇಳಿದ್ದಾರೆ.

ಕಾಂಗ್ರೆಸ್ ನಿಂದಲೇ ಈ ಸಮಸ್ಯೆ ಸೃಷ್ಟಿಯಾಗಿರುವುದು: ಕಾಂಗ್ರೆಸ್ ಗೆ ಮೇಕೆದಾಟು ಬಗ್ಗೆ ಮಾತನಾಡಲು ನೈತಿಕತೆ ಇಲ್ಲ. ಕಳೆದು 55 ವರ್ಷಗಳಿಂದ ಅಧಿಕಾರದಲ್ಲಿದ್ದಾಗ ಸಮಸ್ಯೆ ಬಗೆಹರಿಸಲು ಯೋಚಿಸಿಲ್ಲ. ಕಾಂಗ್ರೆಸ್ ನಿಂದ ಈ ರೀತಿ ಸಮಸ್ಯೆ ಸೃಷ್ಟಿಯಾಗಿರುವುದು ಎಂದು ಕಾಂಗ್ರೆಸ್​ ವಿರುದ್ಧ ಕೇಂದ್ರ ಸಚಿವ ಶೇಖಾವತ್ ಹರಿಹಾಯ್ದರು. ಇನ್ನು ಮಹದಾಯಿ ವಿಚಾರ ಪ್ರಸ್ತಾಪಿಸಿ, ಆ ವಿಚಾರದಲ್ಲೂ ಕೂಡ ಬೇರೆ ಬೇರೆ ರೀತಿಯ ಸಮಸ್ಯೆ ಇದೆ. ಅದರ ಬಗ್ಗೆ ಕೂಡಾ ಈಗ ಚರ್ಚೆ ಮಾಡುವುದಿಲ್ಲ ಎಂದು ಮಾರ್ಮಿಕವಾಗಿ ಹೇಳಿದರು.

47 % ಗ್ರಾಮೀಣ ಜನತೆಗೆ ಕುಡಿಯುವ ನೀರು ಸಿಕ್ಕಿದೆ: ಭಾರತವನ್ನು ನಿರ್ಮಿಸುವಲ್ಲಿ ಮೋದಿ ಅನೇಕ ಯೋಜನೆ ಕೈಗೆತ್ತಿಕೊಂಡಿದ್ದಾರೆ ಎಂದು ಇಂದಿನ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಕೇಂದ್ರ ಜಲ‌ ಶಕ್ತಿ ಸಚಿವ ಶೇಖಾವತ್ ಅವರು ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ಜನಪರ ಯೋಜನೆ ನೀಡಿದ್ದಾರೆ. ಸ್ವಚ್ಚ ಭಾರತ್ ಮಿಷನ್, ಅಡುಗೆ ಅನಿಲ ಹೀಗೆ ಅನೇಕ ಯೋಜನೆಗಳ ಗುರಿಯನ್ನು ಕೇಂದ್ರ ಸರ್ಕಾರ ತಲುಪಿದೆ. ಸುರಕ್ಷಿತ ಕುಡಿಯುವ ನೀರನ್ನು ಗ್ರಾಮೀಣ ಜನರಿಗೆ ತಲುಪಿಸುವ ನಿರ್ಧಾರವನ್ನು ಮೋದಿ ಮಾಡಿದರು. ಅಲ್ಲಿಯವರೆಗೂ ಕೇವಲ 17 % ಗ್ರಾಮೀಣ ಜನರಿಗೆ ಮಾತ್ರ ಶುದ್ದು ಕುಡಿಯುವ ನೀರು ಸಿಗುತ್ತಿತ್ತು. ನಾವು ಕುಡಿಯುವ ನೀರನ್ನು ಪೂರೈಸುವ ಯೋಜನೆ ಕೈಗೆತ್ತಿಕೊಂಡ ಮೂರು ತಿಂಗಳಿಗೆ ಕೊರೋನಾ ಅಪ್ಪಳಿಸಿತು. ನೀರು ಕೊಡುವ ನಮ್ಮ ಗುರಿ 2024 ಆಗಿತ್ತು. ಕೋವಿಡ್ ಇದ್ದರೂ ಕೂಡ ನಾವು ನಮ್ಮ ಗುರಿಯನ್ನು ತಲುಪಿದ್ದೇವೆ. 3 ಕೋಟಿ 27 ಲಕ್ಷ ನಳಗಳಿಗೆ ನೀರು ಪೂರೈಕೆ ಮಾಡಿದ್ದೇವೆ. 47 % ಗ್ರಾಮೀಣ ಜನತೆಗೆ ಕುಡಿಯುವ ನೀರು ಸಿಕ್ಕಿದೆ. ಪ್ರತಿ ವರ್ಷ ನಾವು ರಿವ್ಯೂ ಮೀಟಿಂಗ್ ಮಾಡಲು ತೀರ್ಮಾನಿಸಿದ್ದೇವೆ. ಇಂದು 6 ರಾಜ್ಯ, 2 ಕೇಂದ್ರಾಡಳಿತ ಪ್ರದೇಶಗಳ ಜೊತೆ ಸಭೆ ನಡೆಸಲಾಗಿದೆ. 6 ರಾಜ್ಯ, 2 ಕೇಂದ್ರಡಾಳಿತ ಪ್ರದೇಶಕ್ಕೆ 21,842 ಕೋಟಿ ಅನುದಾನ ನೀಡಲಾಗಿದೆ. ಕರ್ನಾಟಕ ಜಲಜೀವನ್ ಮಿಷನ್‌ಗೆ 7 ಸಾವಿರ ಕೋಟಿ ರೂ ನಿಯೋಜಿಸಲಾಗಿದೆ ಎಂದರು.

Follow us on

Related Stories

Most Read Stories

Click on your DTH Provider to Add TV9 Kannada