AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral Story: ರಹಸ್ಯ ಮಸಾಲೆ ಎಂದು ಆಹಾರದಲ್ಲಿ ಗಾಂಜಾ ಬೆರೆಸುತ್ತಿದ್ದ ರೆಸ್ಟೋರೆಂಟ್

Viral News: ಪ್ರಾಥಮಿಕ ತನಿಖೆಯ ವೇಳೆ ದಿ ಸೀಕ್ರೆಟ್ ಆಫ್ ಸಿಯಾಮ್​ ರೆಸ್ಟೋರೆಂಟ್​ ಅನ್ನು ಮುಚ್ಚಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಲಾಸ್ ವೇಗಾಸ್ ಪೊಲೀಸರು ತಿಳಿಸಿದ್ದಾರೆ.

Viral Story: ರಹಸ್ಯ ಮಸಾಲೆ ಎಂದು ಆಹಾರದಲ್ಲಿ ಗಾಂಜಾ ಬೆರೆಸುತ್ತಿದ್ದ ರೆಸ್ಟೋರೆಂಟ್
ಸಾಂದರ್ಭಿಕ ಚಿತ್ರ
TV9 Web
| Updated By: ಝಾಹಿರ್ ಯೂಸುಫ್|

Updated on: Feb 23, 2022 | 10:30 PM

Share

ಇಂದಿನ ಪೈಪೋಟಿ ಯುಗದಲ್ಲಿ ಯಾವ ರೆಸ್ಟೋರೆಂಟ್​ನಲ್ಲಿ ಹೆಚ್ಚಿನ ರುಚಿ ನೀಡಲಾಗತ್ತೊ ಅಲ್ಲಿ ಗ್ರಾಹಕರು ಹೆಚ್ಚಿರುತ್ತಾರೆ. ಹೀಗಾಗಿ ಶೆಫ್​ಗಳು ಕೂಡ ವಿಭಿನ್ನ, ವಿಶೇಷ ರೆಸಿಪಿಗಳ ಮೊರೆ ಹೋಗುತ್ತಾರೆ. ಆದರೆ ಲಾಸ್ ವೇಗಾಸ್​ನ ರೆಸ್ಟೋರೆಂಟ್​ವೊಂದು ತನ್ನ ಆಹಾರಗಳಲ್ಲಿ ಗಾಂಜಾ ಬೆರೆಸುವ ಮೂಲಕ ಗ್ರಾಹಕರಿಗೆ ನಶೆ ಭರಿತ ರುಚಿ ನೀಡುತ್ತಿದೆ ಎಂಬ ಗಂಭೀರ ಆರೋಪಕ್ಕೆ ಗುರಿಯಾಗಿದೆ. ದಿ ಸೀಕ್ರೆಟ್ ಆಫ್ ಸಿಯಾಮ್ ಎಂಬ ಹೆಸರಿನ ಈ ಥಾಯ್ ರೆಸ್ಟೋರೆಂಟ್ ವಿರುದ್ಧ ಅನೇಕ ಜನರು ದೂರುಗಳನ್ನು ನೀಡಿದ್ದಾರೆ. ಈ ರೆಸ್ಟೋರೆಂಟ್​ನಲ್ಲಿ ಆಹಾರ ಸೇವಿಸಿದ ಬಳಿಕ ನಶೆಯಲ್ಲಿ ತೇಲುತ್ತಿರುವಂತ ಅನುಭವ ಅನೇಕರಿಗೆ ಉಂಟಾಗಿದೆ. ವಿಶೇಷ ಮಸಾಲೆ ಎಂಬ ಹೆಸರಿನಲ್ಲಿ ಕೆಲ ಆಹಾರಗಳನ್ನು ಗ್ರಾಹಕರ ಮುಂದಿಡಲಾಗುತ್ತಿತ್ತು. ಈ ಆಹಾರಗಳನ್ನು ಸೇವಿಸಿದ ಅನೇಕರಿಗೆ ಅಮಲಿನಲ್ಲಿ ತೇಲಿದ ಅನುಭವವಾಗುತ್ತಿತ್ತು. ಇದನ್ನು ಕೆಲವರು ಇಷ್ಟಪಟ್ಟಿದ್ದರು. ಹೀಗಾಗಿಯೇ ರೆಸ್ಟೋರೆಂಟ್​ನ ವ್ಯವಹಾರ ಕೂಡ ಉತ್ತಮಗೊಂಡಿತು.

ಆದರೆ ಇತ್ತೀಚೆಗೆ ದಿ ಸೀಕ್ರೆಟ್ ಆಫ್ ಸಿಯಾಮ್​ನಲ್ಲಿ ಸೂಪ್ ಸೇವಿಸಿದ್ದ ಸಮಂತಾ ಡಯಾಸ್ ಎಂಬ ಮಹಿಳೆಯು ಅಸ್ವಸ್ಥರಾಗಿದ್ದಾರೆ. ಅಲ್ಲದೆ ಆಕೆಗೆ ಹೃದಯಾಘಾತವಾದಂತೆ ಭಾಸವಾಗಿದೆ. ಇದಾಗ್ಯೂ ತನಗೆ ಏನಾಗುತ್ತಿದೆ ಎಂಬುದನ್ನು ವಿವರಿಸಲು ಸಮಂತಾ ಡಯಾಸ್​ಗೆ ಸಾಧ್ಯವಾಗುತ್ತಿರಲಿಲ್ಲ. ಕೂಡಲೇ ಪತಿಯು ಆಕೆಯನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಆ ಬಳಿಕ ಪರಿಶೀಲಿಸಿದಾಗ ಅಮಲಿನಲ್ಲಿ ತೇಲುತ್ತಿರುವ ಅರಿವಾಗಿದೆ.

ಇದರಿಂದ ಅನುಮಾನಗೊಂಡ ಸಮಂತಾ ದಿ ಸೀಕ್ರೆಟ್ ಆಫ್ ಸಿಯಾಮ್ ರೆಸ್ಟೋರೆಂಟ್​ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಹುಡುಕಾಡಿದ್ದಾರೆ. ತನಗಾದ ಅದೇ ರೀತಿಯ ಅನುಭವಗಳ ಬಗ್ಗೆ ಅನೇಕರು ವ್ಯಕ್ತಪಡಿಸಿದ್ದರು. ಅಲ್ಲದೆ ಈ ರೆಸ್ಟೊರೆಂಟ್‌ನಲ್ಲಿ ಆಹಾರದಲ್ಲಿ ಡ್ರಗ್ಸ್ ಬೆರೆಸಲಾಗುತ್ತಿದೆ ಎಂದು ಹಲವರು ಆರೋಪಿಸಿರುವುದನ್ನು ಕಂಡು ಅಚ್ಚರಿಗೊಂಡಿದ್ದರು. ಹೀಗಾಗಿ ಇದೀಗ ಸಮಂತಾ ಡಯಾಸ್ ದಿ ಸೀಕ್ರೆಟ್ ಆಫ್ ಸಿಯಾಮ್ ವಿರುದ್ದ ದೂರು ನೀಡಿದ್ದಾರೆ.

ಪ್ರಾಥಮಿಕ ತನಿಖೆಯ ವೇಳೆ ದಿ ಸೀಕ್ರೆಟ್ ಆಫ್ ಸಿಯಾಮ್​ ರೆಸ್ಟೋರೆಂಟ್​ ಅನ್ನು ಮುಚ್ಚಲಾಗಿದ್ದು, ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಲಾಸ್ ವೇಗಾಸ್ ಪೊಲೀಸರು ತಿಳಿಸಿದ್ದಾರೆ. ಈ ಆರೋಪಗಳು ನಿಜವೆಂದು ಕಂಡುಬಂದರೆ, ರೆಸ್ಟೋರೆಂಟ್ ಪರವಾನಗಿಯನ್ನು ರದ್ದುಗೊಳಿಸಲಾಗುತ್ತದೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: World Record: ಟಿ20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಯುವ ಬ್ಯಾಟ್ಸ್​ಮನ್

ಇದನ್ನೂ ಓದಿ: ಐಪಿಎಲ್ ಆರಂಭಿಕ ಪಂದ್ಯಗಳಿಗೆ ಈ ಆಟಗಾರರು ಅಲಭ್ಯ

ಇದನ್ನೂ ಓದಿ: IPL 2022: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಶೇನ್ ವಾಟ್ಸನ್ ಎಂಟ್ರಿ..!

(thai restaurant in mix marijuana in food as secret spice)

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?