‘ಓ ಅಂಟಾವಾ’ ಹಾಡನ್ನು ಹಾಡಿ ನೆಟ್ಟಿಗರ ಮನ ಗೆದ್ದ ಡಚ್​ ಮಹಿಳೆ: ವಿಡಿಯೋ ವೈರಲ್​

ಈ ಹಿಂದೆ ಶ್ರೀವಲ್ಲಿ ಹಾಡಿಗೆ ಧನಿಯಾಗಿದ್ದ ಡಚ್​ ಮಹಿಳೆ ಇದೀಗ ಓ ಅಂಟವಾ ಹಾಡನ್ನು ಮೂಲಕ ಭಾರತೀಯರ ಮನಗೆದ್ದಿದ್ದಾರೆ.

'ಓ ಅಂಟಾವಾ' ಹಾಡನ್ನು ಹಾಡಿ ನೆಟ್ಟಿಗರ ಮನ ಗೆದ್ದ ಡಚ್​ ಮಹಿಳೆ: ವಿಡಿಯೋ ವೈರಲ್​
ಎಮ್ಮಾ ಹೀಸ್ಟರ್ಸ್
Follow us
TV9 Web
| Updated By: Pavitra Bhat Jigalemane

Updated on:Feb 24, 2022 | 10:20 AM

ಪುಷ್ಪ (Pushpa) ಚಿತ್ರ ಬಿಡುಗಡೆಯಾಗಿ ತಿಂಗಳುಗಳೇ ಕಳೆದಿದೆ. ರಶ್ಮಿಕಾ ಮಂದಣ್ಣ(Rashmika Mandanna) ಮತ್ತು ಅಲ್ಲು ಅರ್ಜುನ್ (Allu Arjun)​ ಜೋಡಿ ಸಖತ್​ ಹಿಟ್​ ಆಗಿದ್ದು, ಪ್ರೇಕ್ಷಕರ ಮನ ಗೆದ್ದಿದೆ.  ಆದರೂ ಚಿತ್ರದ ಹಾಡು, ಡೈಲಾಗ್​ಗಳ ಕ್ರೇಜ್​ ಇನ್ನೂ ಮುಗಿದಿಲ್ಲ. ಭಾರತ ಮಾತ್ರವಲ್ಲದೆ ವಿದೇಶದಲ್ಲೂ ಹಾಡಿನ ಕ್ರೇಜ್​ ಮುಂದುವರೆದಿದೆ. ಇದೀಗ  ಡಚ್​ ಮಹಿಳೆ ಎಮ್ಮಾ ಹೀಸ್ಟರ್ಸ್ ಪುಚ್ಪ ಚಿತ್ರದ ಓ ಅಂಟವಾ ಹಾಡನ್ನು ಹಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸದ್ಯ ಈ ವಿಡಿಯೋ ಸಖತ್​ ವೈರಲ್​ ಆಗಿದೆ. ಈ ಹಿಂದೆ ಶ್ರೀವಲ್ಲಿ ಹಾಡಿಗೆ ಧನಿಯಾಗಿದ್ದ ಡಚ್​ ಮಹಿಳೆ ಇದೀಗ ಓ ಅಂಟವಾ ಹಾಡನ್ನು ಮೂಲಕ ಭಾರತೀಯರ ಮನಗೆದ್ದಿದ್ದಾರೆ. ಇನ್ಸ್ಟಾಗ್ರಾಮನ್​ನಲ್ಲಿ ಹಾಡನ್ನು ಹಂಚಿಕೊಳ್ಳುವ ನೆಟ್ಟಿಗರ ಗಮನ ಸೆಳೆದಿದ್ದಾರೆ.

ಎಮ್ಮಾ ಹೀಸ್ಟರ್ಸ್ ಈ ಹಿಂದೆ ಬಾಲಿವುಡ್​ನ ಬಿಜಲಿ ಸೇರಿದಂತೆ ಹಲವು ಹಾಡನ್ನು ಹಾಡಿದ್ದಾರೆ. ವಿದೇಶಿ ಮಹಿಳೆಯಾಗಿದ್ದರೂ ಭಾರತದ ಹಾಡುಗಳ ಮೇಲಿನ ಪ್ರೀತಿ ನೋಡಿ ಭಾರತೀಯರೂ ಕೂಡ ಅಚ್ಚರಿಗೊಂಡಿದ್ದಾರೆ. ಎಮ್ಮಾ ಹೀಸ್ಟರ್ಸ್ ತಮ್ಮ ಇನ್ಸ್ಟಾಗ್ರಾಮ್​ ಖಾತೆಯಲ್ಲಿ ಇದರ ವಿಡಿಯೋ ಹಂಚಿಕೊಂಡಿದ್ದಾರೆ. ಸದ್ಯ ವಿಡಿಯೋ ವೈರಲ್​ ಆಗಿದ್ದು 2 ಲಕ್ಷಕ್ಕೂ ಹೆಚ್ಚು ಲೈಕ್ಸ್ ಗಳಿಸಿದೆ. ಎಮ್ಮಾ ಅವರ ಸಾಂಗ್​ ಕೇಳಿ ನೆಟ್ಟಿಗರು ಅಚ್ಚರಿಗೊಂಡಿದ್ದು, ವಾವ್​ ಎಂದು ಉದ್ಘರಿಸಿದ್ದಾರೆ.

ಇದನ್ನೂ ಓದಿ:

5 ಭಾಷೆಗಳಲ್ಲಿ ಪುಷ್ಪ ಚಿತ್ರದ ಶ್ರೀವಲ್ಲಿ ಹಾಡನ್ನು ಹಾಡಿದ ವ್ಯಕ್ತಿ: ಇಲ್ಲಿದೆ ನೋಡಿ ವಿಡಿಯೋ

Published On - 10:16 am, Thu, 24 February 22