ಬಹುಭಾಷಾ ನಟಿ ರಶ್ಮಿಕಾ ಮಂದಣ್ಣಗೆ (Rashmika Mandanna) ದೊಡ್ಡ ಸಂಖ್ಯೆಯಲ್ಲಿ ಅಭಿಮಾನಿ ಬಳಗವಿದೆ. ಹಲವು ಕಾರಣಗಳಿಗೆ ನಟಿ ಸುದ್ದಿಯಾಗುವುದೂ ಇದೆ. ಆದರೆ ಇದ್ಯಾವುದಕ್ಕೂ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ತಾರೆಯರಿಗೆ ಟೀಕೆ, ನಿಂದನೆ, ಹೊಗಳಿಕೆಗಳು ಸಾಮಾನ್ಯ. ಆದರೆ ಇವುಗಳನ್ನು ಬ್ಯಾಲೆನ್ಸ್ ಮಾಡುವುದು ತುಸು ಕಷ್ಟ. ರಶ್ಮಿಕಾ ಇವುಗಳನ್ನು ಚೆನ್ನಾಗಿ ಬ್ಯಾಲೆನ್ಸ್ ಮಾಡುತ್ತಾರೆ. ಟೀಕೆಗಳು ಎದುರಾದಾಗ ಅವರು ಹೆಚ್ಚಾಗಿ ತಲೆಗೆ ಹಾಕಿಕೊಳ್ಳುವುದಿಲ್ಲ. ಅವುಗಳನ್ನು ನಗುತ್ತಲೇ ಎದುರಿಸಿರುವ ರಶ್ಮಿಕಾ ‘ನ್ಯಾಷನಲ್ ಕ್ರಶ್’ ಆಗಿ ಗುರುತಿಸಿಕೊಂಡಿದ್ದಾರೆ. ಆದರೆ ಅವರ ಈ ಪಯಣ ಅಷ್ಟೇನೂ ಸುಲಭದ್ದಾಗಿರಲಿಲ್ಲ. ರಶ್ಮಿಕಾ ಎಲ್ಲವನ್ನೂ ಹೇಗೆ ಬ್ಯಾಲೆನ್ಸ್ ಮಾಡುತ್ತಾ ಖುಷಿಯಾಗಿರುತ್ತಾರೆ? ಎಂಬುದು ಅಭಿಮಾನಿಗಳ ಪ್ರಶ್ನೆ. ಈ ಪ್ರಶ್ನೆಗೆ ಸ್ವತಃ ರಶ್ಮಿಕಾ ಅವರೇ ಉತ್ತರಿಸಿದ್ದಾರೆ. ಅದೂ ಮಜವಾದ ವಿಡಿಯೋ ಮೂಲಕ.
ಇನ್ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿರುವ ನಟಿ, ಜನರು ಕೇಳುವ ಪ್ರಶ್ನೆಯನ್ನು ಕ್ಯಾಪ್ಶನ್ ಆಗಿ ಬರೆದಿದ್ದಾರೆ. ‘ಜನರು: ನೀವು ಯಾವಾಗಲೂ ಹೇಗೆ ಖುಷಿಯಾಗಿರುತ್ತೀರಿ?’ ‘ನಾನು:’ ಎಂದು ಬರೆದಿರುವ ರಶ್ಮಿಕಾ, ತಾವು ಹೇಗೆ ಖುಷಿಯಾಗಿರುತ್ತೇನೆ ಎನ್ನುವುದರ ವಿಡಿಯೋ ಹಂಚಿಕೊಂಡಿದ್ದಾರೆ. ಇದಕ್ಕೆ ಹಿನ್ನೆಲೆಯಲ್ಲಿ ‘ಮೈಂಡ್ ಮೈ ಬ್ಯುಸಿನೆಸ್’ ಹಾಡನ್ನು ಅವರು ಹಾಕಿದ್ದಾರೆ. ಅದಕ್ಕೆ ಹೆಜ್ಜೆ ಹಾಕುತ್ತಾ, ತನ್ನ ಕೆಲಸವನ್ನು ತಾನು ಮಾಡುತ್ತೇನೆ ಎಂದು ಅವರು ಮಜವಾಗಿ ಹೇಳಿಕೊಂಡಿದ್ದಾರೆ.
ರಶ್ಮಿಕಾ ಹಂಚಿಕೊಂಡ ವಿಡಿಯೋ ಇಲ್ಲಿದೆ:
View this post on Instagram
ಸದ್ಯ ರಶ್ಮಿಕಾ ‘ಪುಷ್ಪ’ ಚಿತ್ರದ ಯಶಸ್ಸಿನಲ್ಲಿದ್ದಾರೆ. ಅಲ್ಲು ಅರ್ಜುನ್ ನಟನೆಯ, ಸುಕುಮಾರ್ ನಿರ್ದೇಶನದ ಈ ಚಿತ್ರ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿತು. ಹಿಂದಿ ಅವತರಣಿಕೆಯೂ ಉತ್ತಮ ಕಲೆಕ್ಷನ್ ಮಾಡಿತ್ತು. ಪ್ರಸ್ತುತ ಹಿಂದಿ ಚಿತ್ರರಂಗದಲ್ಲೂ ಸಕ್ರಿಯರಾಗಿರುವ ರಶ್ಮಿಕಾ, ಪುಷ್ಪ ಮೂಲಕ ಈಗಾಗಲೇ ಬಾಲಿವುಡ್ ಪ್ರೇಕ್ಷಕರಿಗೆ ಪರಿಚಯವಾದಂತಾಗಿದೆ. ‘ಮಿಷನ್ ಮಜ್ನು’ ಮೂಲಕ ಬಾಲಿವುಡ್ಗೆ ಎಂಟ್ರಿ ನೀಡಲಿರುವ ರಶ್ಮಿಕಾ, ಇತ್ತೀಚೆಗೆ ಖ್ಯಾತ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಕಚೇರಿಯ ಮುಂಭಾಗದಲ್ಲಿ ಕಾಣಿಸಿಕೊಂಡಿದ್ದರು. ಇದು ದೊಡ್ಡ ಸುದ್ದಿಯಾಗಿತ್ತು.
ಇದೀಗ ಶರ್ವಾನಂದ್ ಜತೆ ನಟಿಸಿರುವ ‘ಆಡವಾಳ್ಳು ಮೀಕು ಜೋಹಾರ್ಲು’ ಚಿತ್ರದ ರಿಲೀಸ್ ಸಿದ್ಧತೆಯಲ್ಲಿದ್ದಾರೆ ರಶ್ಮಿಕಾ ಮಂದಣ್ಣ. ಫೆಬ್ರವರಿ 25ರಂದು ಈ ಚಿತ್ರ ತೆರೆಕಾಣಲಿದೆ.
ಇದನ್ನೂ ಓದಿ:
ರಶ್ಮಿಕಾ ಜತೆಗಿನ ಮದುವೆಯ ಗಾಸಿಪ್ಗೆ ಕೊನೆಗೂ ಪ್ರತಿಕ್ರಿಯಿಸಿದ ವಿಜಯ್ ದೇವರಕೊಂಡ; ನಟ ಹೇಳಿದ್ದೇನು?
‘ನಂಗೆ 4-5 ಮಕ್ಕಳು ಆಗದಿದ್ರೂ ಒಂದೆರಡು ಮಕ್ಕಳು ದತ್ತು ತಗೋಬೇಕು ಅಂತ ಆಸೆ ಇದೆ’: ಪ್ರಿಯಾಂಕಾ ತಿಮ್ಮೇಶ್