ವೈಶಿಷ್ಟ್ಯಪೂರ್ಣ ಪಾತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಳ್ಳುತ್ತಿರುವ ಕಲಾವಿದ ನಾಗಭೂಷಣ್. ಅವರು ನಟಿಸಿದ್ದ, ಲಾಕ್ಡೌನ್ ಕುರಿತು ಕತಾ ವಸ್ತುವಿದ್ದ ‘ಇಕ್ಕಟ್’ ಗಮನ ಸೆಳೆದಿತ್ತು. ಇದೀಗ ‘ಮೇಡ್ ಇನ್ ಚೈನಾ’ (Made In China) ಚಿತ್ರದ ಟೀಸರ್ ಬಿಡುಗಡೆ ಆಗಿದ್ದು, ಅದೂ ಕೂಡ ಇದೇ ಕತಾ ವಸ್ತುವಿನಿಂದ ಗಮನ ಸೆಳೆಯುತ್ತಿದೆ. ಕನ್ನಡ ಚಿತ್ರರಂಗದಲ್ಲಿ ಮೊದಲ ಬಾರಿಗೆ ಹೊಸ ವಿಧಾನದ ಮೂಲಕ ಚಿತ್ರವನ್ನು ಕಟ್ಟಿಕೊಡಲಾಗುತ್ತಿದೆ. ಟೀಸರ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ನಾಗಭೂಷಣ್ ಟಿವಿ9 ಡಿಜಿಟಲ್ ಜತೆ ಮಾತನಾಡಿದ್ದಾರೆ. ಧನಂಜಯ್ ಸ್ನೇಹಿತರಾಗಿರುವ ಅವರು ‘ಬಡವ ರಾಸ್ಕಲ್’ನಲ್ಲೂ ಗಮನ ಸೆಳೆದಿದ್ದರು. ಆ ಕುರಿತೂ ಅವರು ಮಾತನಾಡಿದ್ದಾರೆ. ತೆಲುಗಿನಲ್ಲೂ ರಿಲೀಸ್ ಆಗುತ್ತಿರುವ ‘ಬಡವ ರಾಸ್ಕಲ್’ ಇತ್ತೀಚೆಗೆ ಪ್ರಿರಿಲೀಸ್ ಈವೆಂಟ್ ಹಮ್ಮಿಕೊಂಡಿತ್ತು. ಅದಕ್ಕೆ ರಾಮ್ಗೋಪಾಲ್ ವರ್ಮಾ ಆಗಮಿಸಿದ್ದರು. ಅದನ್ನೆಲ್ಲಾ ನೋಡಿ ಖುಷಿಯಾಗುತ್ತದೆ. ತೆಲುಗಿನಲ್ಲೂ ರಿಲೀಸ್ ಆಗಲು ನಾನು ಕಾಯುತ್ತಿದ್ದೇನೆ ಎಂದಿದ್ದಾರೆ ನಾಗಭೂಷಣ್.
ಬಡವ ರಾಸ್ಕಲ್ ಪಾತ್ರಕ್ಕೆ ಸಿಕ್ಕ ಬೆಸ್ಟ್ ಕಾಂಪ್ಲಿಮೆಂಟ್ ಯಾವುದು ಎಂಬ ಪ್ರಶ್ನೆಗೆ ಉತ್ತರಿಸಿದ ನಾಗಭೂಷಣ್, ‘ಇದ್ರೆ ನಿನ್ನಂಥಾ ಫ್ರೆಂಡ್ ಇರ್ಬೇಕ್ ಗುರು’ ಎಂದು ಯಾರೋ ಒಬ್ಬರು ಕಾಮೆಂಟ್ ಹಾಕಿದ್ದರು. ಬಹುಶಃ ಅದೇ ಇರಬಹುದು ಎಂದು ನಗುತ್ತಾ ನುಡಿದಿದ್ದಾರೆ.
ಇದನ್ನೂ ಓದಿ:
Rashmika Mandanna: ರಶ್ಮಿಕಾ ಸದಾ ಖುಷಿಯಾಗಿರೋ ಹಿಂದಿನ ಕಾರಣ ಗೊತ್ತಾ? ರಿವೀಲ್ ಮಾಡಿದ ನಟಿ
‘ನಂಗೆ 4-5 ಮಕ್ಕಳು ಆಗದಿದ್ರೂ ಒಂದೆರಡು ಮಕ್ಕಳು ದತ್ತು ತಗೋಬೇಕು ಅಂತ ಆಸೆ ಇದೆ’: ಪ್ರಿಯಾಂಕಾ ತಿಮ್ಮೇಶ್