‘ನಂಗೆ 4-5 ಮಕ್ಕಳು ಆಗದಿದ್ರೂ ಒಂದೆರಡು ಮಕ್ಕಳು ದತ್ತು ತಗೋಬೇಕು ಅಂತ ಆಸೆ ಇದೆ’: ಪ್ರಿಯಾಂಕಾ ತಿಮ್ಮೇಶ್​

‘ಮೇಡ್​ ಇನ್​ ಚೈನಾ’ ಸಿನಿಮಾದ ಶೂಟಿಂಗ್​ ಅನುಭವವನ್ನು ಪ್ರಿಯಾಂಕಾ ತಿಮ್ಮೇಶ್​ ಹಂಚಿಕೊಂಡಿದ್ದಾರೆ. ಬಿಗ್​ ಬಾಸ್​ ಸ್ನೇಹಿತರ ಬಗ್ಗೆಯೂ ಈ ವಿಡಿಯೋದಲ್ಲಿ ಅವರು ಮಾತನಾಡಿದ್ದಾರೆ.

TV9kannada Web Team

| Edited By: Madan Kumar

Feb 24, 2022 | 9:24 AM

ಬಿಗ್​ ಬಾಸ್​ ಮೂಲಕ ಹೆಚ್ಚು ಜನಪ್ರಿಯತೆ ಪಡೆದ ನಟಿ ಪ್ರಿಯಾಂಕಾ ತಿಮ್ಮೇಶ್​ (Priyanka Thimmesh) ಅವರು ಈಗ ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ನಾಗಭೂಷಣ್​ ಜೊತೆ ಅವರು ನಟಿಸಿರುವ ‘ಮೇಡ್​ ಇನ್​ ಚೈನಾ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರದಲ್ಲಿ ಪ್ರಿಯಾಂಕಾ ತಿಮ್ಮೇಶ್​ ಅವರು ಪ್ರೆಗ್ನೆಂಟ್​ ಲೇಡಿ ಪಾತ್ರ ಮಾಡಿದ್ದಾರೆ. ನಿಜಜೀವನದಲ್ಲಿಯೂ ತಮಗೆ ಮಕ್ಕಳು ಎಂದರೆ ತುಂಬ ಇಷ್ಟ ಎಂದು ಅವರು ಹೇಳಿದ್ದಾರೆ. ‘ನನಗೆ ಮಕ್ಕಳು ಸಖತ್​ ಇಷ್ಟ. ಕಿರಿಕಿರಿ ಮಾಡಿದರೆ ಕಷ್ಟ ಎನಿಸುತ್ತದೆ. ನನಗೆ ನಾಲ್ಕು-ಐದು ಮಕ್ಕಳು ಆಗದೇ ಇದ್ದರೂ ಒಂದೆರೆಡು ಮಕ್ಕಳನ್ನು ದತ್ತ ತಗೊಂಡಾದ್ರೂ ಮನೆತುಂಬ ಮಕ್ಕಳು ಇರಬೇಕು ಅಂತ ಆಸೆ ಇದೆ’ ಎಂದು ಪ್ರಿಯಾಂಕಾ ತಿಮ್ಮೇಶ್​ ಹೇಳಿದ್ದಾರೆ. ‘ಮೇಡ್​ ಇನ್​ ಚೈನಾ’ (Made In China Kannada Movie) ಚಿತ್ರಕ್ಕೆ ಪ್ರೀತಂ ತೆಗ್ಗಿನಮನೆ ನಿರ್ದೇಶನ ಮಾಡಿದ್ದಾರೆ. ಅಶ್ವಿನ್​ ರಾವ್​ ಪಲ್ಲಕ್ಕಿ ಕೂಡ ಒಂದು ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಚಿತ್ರದ ಶೂಟಿಂಗ್​ ಅನುಭವವನ್ನು ಕೂಡ ಪ್ರಿಯಾಂಕಾ ತಿಮ್ಮೇಶ್​ ಹಂಚಿಕೊಂಡಿದ್ದಾರೆ. ಬಿಗ್​ ಬಾಸ್​ (Bigg Boss) ಸ್ನೇಹಿತರ ಬಗ್ಗೆಯೂ ಈ ವಿಡಿಯೋದಲ್ಲಿ ಅವರು ಮಾತನಾಡಿದ್ದಾರೆ.

ಇದನ್ನೂ ಓದಿ:

ಅಮೂಲ್ಯ ಪ್ರೆಗ್ನೆನ್ಸಿ ಫೋಟೋಶೂಟ್​ ವೈರಲ್​: ನೆಚ್ಚಿನ ನಟಿಗೆ ಅಭಿಮಾನಿಗಳ ಶುಭ ಹಾರೈಕೆ

ಗರ್ಭಿಣಿ ಪಾತ್ರದಲ್ಲಿ ಪ್ರಿಯಾಂಕಾ; ‘ಮೇಡ್​ ಇನ್ ಚೈನಾ’ ಅಂತಿದ್ದಾರೆ ನಾಗಭೂಷಣ್​; ಕನ್ನಡದಲ್ಲಿ ಹೊಸ ಪ್ರಯತ್ನ

Follow us on

Click on your DTH Provider to Add TV9 Kannada