Harsha Murder: ಹರ್ಷ ಕುಟುಂಬಕ್ಕೆ ಅಕ್ಷರದಲ್ಲಿ 5 ಲಕ್ಷ, ಅಂಕಿಯಲ್ಲಿ 50,000 ಅಂತ ಬರೆದು ಚೆಕ್ ಕೊಟ್ಟ ಶಾಸಕ ಯತ್ನಾಳ್!
ಸಿದ್ದಸಿರಿ ಸೌಹಾರ್ದ ಸಹಕಾರ ಸಂಸ್ಥೆಯಿಂದ 5 ಲಕ್ಷ ರೂಪಾಯಿ ಆರ್ಥಿಕ ಸಹಾಯ ಮಾಡಿದ್ದಾರೆ. ಹರ್ಷ ಮನೆಗೆ ಭೇಟಿ ನೀಡಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೆರವು ನೀಡಿದ್ದಾರೆ. ಆದ್ರೆ ಯತ್ನಾಳ್ ಚೆಕ್ ಬರೆಯುವಾಗ ಅಕ್ಷರಗಳಲ್ಲಿ 5 ಲಕ್ಷ ಎಂದು ನಮೂದಿಸಿ. ಸಂಖ್ಯೆಯಲ್ಲಿ 50 ಸಾವಿರ ಎಂದು ನಮೂದಿಸಿದ್ದಾರೆ. ಸದ್ಯ ತಪ್ಪಿನ ಬಗ್ಗೆ ಅವರ ಪಿಎ ಸದಾಶಿವ ಗಮನಕ್ಕೆ ತಂದಿದ್ದು ಹೊಸ ಚೆಕ್ ಕೊಡುವುದಾಗಿ ತಿಳಿಸಿದ್ದಾರೆ.
ಶಿವಮೊಗ್ಗ: ಬಜರಂಗದಳ ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ(Harsha Murder) ಸಂಬಂಧ ಸಾಂತ್ವಾನ ಹೇಳಲು ಹರ್ಷ ಮನೆಗೆ ಭೇಟಿ ಕೊಟ್ಟ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್(Basangouda Patil Yatnal) ಹರ್ಷ ಕುಟುಂಬಸ್ಥರಿಗೆ ಚೆಕ್ ವಿತರಿಸಿದ್ದಾರೆ. ಸಿದ್ದಸಿರಿ ಸೌಹಾರ್ದ ಸಹಕಾರ ಸಂಸ್ಥೆಯಿಂದ 5 ಲಕ್ಷ ರೂಪಾಯಿ ಆರ್ಥಿಕ ಸಹಾಯ ಮಾಡಿದ್ದಾರೆ. ಹರ್ಷ ಮನೆಗೆ ಭೇಟಿ ನೀಡಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೆರವು ನೀಡಿದ್ದಾರೆ. ಆದ್ರೆ ಯತ್ನಾಳ್ ಚೆಕ್ ಬರೆಯುವಾಗ ಅಕ್ಷರಗಳಲ್ಲಿ 5 ಲಕ್ಷ ಎಂದು ನಮೂದಿಸಿ. ಸಂಖ್ಯೆಯಲ್ಲಿ 50 ಸಾವಿರ ಎಂದು ನಮೂದಿಸಿದ್ದಾರೆ. ಸದ್ಯ ತಪ್ಪಿನ ಬಗ್ಗೆ ಅವರ ಪಿಎ ಸದಾಶಿವ ಗಮನಕ್ಕೆ ತಂದಿದ್ದು ಹೊಸ ಚೆಕ್ ಕೊಡುವುದಾಗಿ ತಿಳಿಸಿದ್ದಾರೆ.
ಮೃತ ಹರ್ಷ ಮನೆಗೆ ಭೇಟಿ ಕೊಟ್ಟ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಕೆ.ಎಸ್. ಈಶ್ವರಪ್ಪ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಸಿದ್ದಸಿರಿ ಸೌಹಾರ್ದ ಸಹಕಾರ ಸಂಸ್ಥೆಯಿಂದ 5 ಲಕ್ಷ ರೂಪಾಯಿ ಚೆಕ್ ನೀಡಿದ್ರು. ಈ ವೇಳೆ ಯತ್ನಾಳ್ ಚೆಕ್ನಲ್ಲಿ 50,000 ಅಂತ ಅಂಕಿಯಲ್ಲಿ, ಐದು ಲಕ್ಷ ಅಂತ ಅಕ್ಷರದಲ್ಲಿ ಬರೆದಿದ್ದಾರೆ. ಚೆಕ್ ಕೊಟ್ಟ ಕುಟುಂಬಸ್ಥರಿಗೆ ಧೈರ್ಯದ ಮಾತುಗಳನ್ನಾಡಿ ಹೊರಟಿದ್ದಾರೆ. ಬಳಿಕ ಚೆಕ್ ನೋಡಿದ ಕುಟುಂಬಸ್ಥರಿಗೆ ಗೊಂದಲ ಉಂಟಾಗಿದ್ದು ಈ ಬಗ್ಗೆ ಶಾಸಕ ಯತ್ನಾಳ್ರ ಪಿಎ ಸದಾಶಿವರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಯತ್ನಾಳ್, ಕಣ್ತಪ್ಪಿನಿಂದ ಹೀಗಾಗಿ ತಪ್ಪನ್ನು ತಿದ್ದಿ 5 ಲಕ್ಷ ಚೆಕ್ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಇದೇ ವೇಳೆ ಮಾತನಾಡಿದ ಅವರು, ಸರ್ಕಾರದ ಕ್ರಮ ಸಾಲದು ಆರೋಪಿಗಳನ್ನು ಗಲ್ಲಿಗೆ ಏರಿಸಬೇಕು ಎಂದಿದ್ದಾರೆ. ಹಿಂದೂಗಳ ಆತ್ಮಸ್ಥೈರ್ಯ ಕುಗ್ಗಿಸಲು ಇಂತಹ ಕೃತ್ಯ ಎಸಗಲಾಗುತ್ತಿದೆ. ಒಂದು ದೊಡ್ಡ ಷಡ್ಯಂತ್ರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಗುತ್ತಿದೆ. ಇವರು ಸ್ವಂತ ಶೂರರಲ್ಲ ಹೆಣ್ಣು ಮಕ್ಕಳ ಮುಂದಿಟ್ಟುಕೊಂಡು ಕೃತ್ಯ ಎಸಗುತ್ತಿದ್ದಾರೆ. ನಮ್ಮ ದೇಶ, ಹಿಂದೂ ಸಮಾಜದ ಭವಿಷ್ಯದ ಬಗ್ಗೆ ಪ್ರಶ್ನೆ ಮೂಡಿದೆ. ಕಾಂಗ್ರೆಸ್ ಪಕ್ಷ ಇದ್ದಾಗ ಇಂತಹ ಕೃತ್ಯಕ್ಕೆ ಶಿಕ್ಷೆ ಆಗಿಲ್ಲ. ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಕೇರಳದ ಗಡಿ ಭಾಗದಿಂದ ಶಸ್ತ್ರಾಸ್ತ್ರ ಪೂರೈಕೆಯಾಗುತ್ತಿದೆ. ಮಕ್ಕಳನ್ನು ಬಳಸಿಕೊಂಡು ಇಂತಹ ಕೃತ್ಯ ಮಾಡಲಾಗುತ್ತಿದೆ. ಹತ್ಯೆಯಾದರೂ ಒಬ್ಬ ಕಾಂಗ್ರೆಸ್ ನಾಯಕರು ಬಂದರಾ? ಮುಸ್ಲಿಂ ಆಗಿದ್ದರೆ ಸೋನಿಯಾ, ರಾಹುಲ್ ಬರುತ್ತಿದ್ದರು ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಶಾಸಕ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಕಾರವಾರ: ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ 2 ಅಂಗಡಿಗಳು; 8 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ಹಾನಿ
ಶಿವಮೊಗ್ಗ ಭಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣ: ಪೊಲೀಸರಿಂದ ಇಂದು ಸ್ಥಳ ಮಹಜರು ಪ್ರಕ್ರಿಯೆ