AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವಮೊಗ್ಗ ಭಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣ: ಪೊಲೀಸರಿಂದ ಇಂದು ಸ್ಥಳ ಮಹಜರು ಪ್ರಕ್ರಿಯೆ

ಶಿವಮೊಗ್ಗದಲ್ಲಿ ನಡೆದ ಭಜರಂಗ ದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ. ನ್ಯಾಯಾಂಗ ಬಂಧನದಲ್ಲಿರುವ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆಯಿದೆ.

ಶಿವಮೊಗ್ಗ ಭಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣ: ಪೊಲೀಸರಿಂದ ಇಂದು ಸ್ಥಳ ಮಹಜರು ಪ್ರಕ್ರಿಯೆ
ಬಜರಂಗದಳ ಕಾರ್ಯಕರ್ತ ಹರ್ಷ
TV9 Web
| Edited By: |

Updated on:Feb 25, 2022 | 1:16 PM

Share

ಶಿವಮೊಗ್ಗದಲ್ಲಿ ನಡೆದ ಭಜರಂಗ ದಳದ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣದಲ್ಲಿ ತನಿಖೆ ನಡೆಯುತ್ತಿದೆ. ನ್ಯಾಯಾಂಗ ಬಂಧನದಲ್ಲಿರುವ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆಯುವ ಸಾಧ್ಯತೆಯಿದೆ.  ಕೊಲೆ ತನಿಖೆ, ಸ್ಥಳದ ಮಹಜರು, ಮಾರಕಾಸ್ತ್ರ ಜಪ್ತಿ, ಮುಂತಾದ ಪ್ರಕ್ರಿಯೆ ಇಂದು ನಡೆಯಲಿದೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯ ಸಿಪಿಐ ಗುರುರಾಜ್ ನೇತೃತ್ವದಲ್ಲಿ ಆರೋಪಿಗಳ ವಿಚಾರಣೆ ನಡೆಯಲಿದೆ.

ಕೊಲೆ ಆರೋಪಿಗಳ ಪತ್ತೆ ಗೆ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸುತ್ತಿದ್ದು, ಕೊಲೆ ನಡೆದ ಜಾಗ ಮತ್ತು ಸುತ್ತಮುತ್ತಲಿನ ಮತ್ತು ಆರೋಪಿ ಗಳ ಸೇರಿ ಸುಮಾರು 6 ಸಾವಿರ ಮೊಬೈಲ್ ಕಾಲ್ ಗಳ ಪರಿಶೀಲನೆ ನಡೆಸಿದ್ದಾರೆ. ಹಂತಕರಿಗೆ ಯಾರ ಯಾರ ಸಂಪರ್ಕ ಇದೆ ಎನ್ನುವುದರ ಕುರಿತು ಆಳವಾದ ತನಿಖೆ ನಡೆಯುತ್ತಿದೆಈಗಾಗಲೇ ಗೃಹ ಸಚಿವರು ಕೊಲೆಯ ಹಿಂದೆ ಸಂಘಟನೆ ಕೈವಾಡದ ಶಂಕೆ ಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಲೆಯ ಹಿಂದೆ ಯಾರೆಲ್ಲ ಇದ್ದಾರೆ ಅವರ ಪತ್ತೆಗಾಗಿ ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ.  ಇನ್ನು ಸಿಎಂ ಬೊಮ್ಮಾಯಿ‌ ಭೇಟಿಯಾದ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ.  ಇಂದು ಶಿವಮೊಗ್ಗಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ತೆರಳುತ್ತಿದ್ದಾರೆ.

ಇನ್ನು ಈ ಕುರಿತು ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಕ್ರಮ ಸಾಲದು ಆರೋಪಿಗಳ‌ನ್ನು ಗಲ್ಲಿಗೆ ಏರಿಸದಿದ್ದರೆ ಆಗುವುದಿಲ್ಲ ಎಂದು  ಶಿವಮೊಗ್ಗದಲ್ಲಿ ಶಾಸಕ ಬಸನ ಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ. ಹಿಂದೂಗಳ ಆತ್ಮಸ್ಥೈರ್ಯ ಕುಗ್ಗಿಸಲು ಇಂತಹ ಕೃತ್ಯ ಮಾಡಲಾಗುತ್ತಿದೆ. ಇದು ಒಂದು ದೊಡ್ಡ ಷಡ್ಯಂತರ ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ಆಗುತ್ತಿದೆ. ಕೆ ಜೆ ಹಳ್ಳಿ ಮಂಗಳೂರು ಪ್ರಕರಣದ ಉದಾಹರಣೆ ನೀಡಿದ ಯತ್ನಾಳ್ ನಮ್ಮ ದೇಶ, ಹಿಂದೂ ಸಮಾಜದ ಭವಿಷ್ಯದ ಬಗ್ಗೆ ಪ್ರಶ್ನೆ ಮೂಡಿದೆ. ಕಾಂಗ್ರೆಸ್ ಪಕ್ಷ ಇದ್ದಾಗ ಇಂತಹ ಕೃತ್ಯಕ್ಕೆ ಶಿಕ್ಷೆ ಆಗಿಲ್ಲ. ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಸರ್ಕಾರ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಕೇರಳದ ಗಡಿ ಭಾಗದಿಂದ ಶಸ್ತ್ರಾಸ್ತ್ರ ಪೂರೈಕೆಯಾಗುತ್ತಿದೆ. ಮಕ್ಕಳನ್ನು ಇಟ್ಟುಕೊಂಡು ಇಂತಹ ಕೃತ್ಯ ಮಾಡಲಾಗುತ್ತಿದೆ. ಇವರು ಸ್ವಂತ. ಶೂರರಲ್ಲ ಹೆಣ್ಣು ಮಕ್ಕಳನ್ನು ಮುಂದೆ ಇಟ್ಟುಕೊಂಡು ಕೃತ್ಯ ಮಾಡಲಾಗುತ್ತಿದೆ. ಕಾಶ್ಮೀರದಲ್ಲೂ ಇದೇ ರೀತಿಯ ಕೃತ್ಯವೆಸಗಲಾಗುತಿತ್ತು. ಹತ್ಯೆಯಾದರೂ ಒಬ್ಬ ಕಾಂಗ್ರೆಸ್ ನಾಯಕರು ಬಂದರಾ ? ಮುಸ್ಲಿಂಗೆ ಆಗಿದ್ದರೆ ಸೋನಿಯಾ ರಾಹುಲ್ ಬರುತ್ತಿದ್ದರು. ಕಾಂಗ್ರೆಸ್ ಪಕ್ಷದ ವಿರುದ್ದ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ಸರ್ಕಾರ ಇದನ್ನು ತಡೆಗಟ್ಟಬೇಕು ಆಡಳಿತ ಗೃಹ ಇಲಾಖೆ ಇರುವುದು ಏಕೆ ?ಬರಿ ಸಾಂತ್ವನ ಪ್ರಯೋಜನವಿಲ್ಲ. ಎಲ್ಲಕ್ಕಿಂತ ಮೊದಲ ದೇಶ ಮುಖ್ಯ ಎಂದು ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ:

ಹರ್ಷ ಹತ್ಯೆ ಆರೋಪಿಗಳನ್ನು ಹೇಗೆ ಸಾಕಿದ್ದಾರೆ ಇಷ್ಟು ವರ್ಷ? ಸಂಬಂಧಪಟ್ಟ ಪೊಲೀಸರ ವಿರುದ್ಧವೂ ಕ್ರಮಕೈಗೊಳ್ತೇವೆ ಎಂದ ಆರಗ ಜ್ಞಾನೇಂದ್ರ

Published On - 9:46 am, Thu, 24 February 22