AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರ್ಷ ಕೊಲೆ ನಡೆಯುವ ಕೆಲ ಗಂಟೆ ಮೊದಲು ಹತ್ಯೆಗೆ ಸ್ಕೆಚ್; ಮಹತ್ವದ ವಿಚಾರಗಳು ಬಹಿರಂಗ

ಪ್ರಕರಣ ಸಂಬಂಧಿಸಿ ಖಾಸಿಫ್​ನನ್ನು ಭದ್ರಾವತಿಯಲ್ಲಿಯೇ ಪೊಲೀಸರು ಬಂಧಿಸಿದ್ದಾರೆ. ಹಾಸನದಲ್ಲಿ ಮೂವರು ರಿಹಾನ್, ಆಶೀಪ್, ನೀಹಾಲ್, ಶಿವಮೊಗ್ಗದಲ್ಲಿ ನದೀಮ್​, ಬೆಂಗಳೂರು ಜಿಲಾನ್, ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಫ್ನಾನ್​ ಬಂಧಿಸಲಾಗಿದೆ.

ಹರ್ಷ ಕೊಲೆ ನಡೆಯುವ ಕೆಲ ಗಂಟೆ ಮೊದಲು ಹತ್ಯೆಗೆ ಸ್ಕೆಚ್; ಮಹತ್ವದ ವಿಚಾರಗಳು ಬಹಿರಂಗ
ಬಜರಂಗದಳ ಕಾರ್ಯಕರ್ತ ಹರ್ಷ
TV9 Web
| Edited By: |

Updated on:Feb 23, 2022 | 8:01 PM

Share

ಶಿವಮೊಗ್ಗ: ನಗರದಲ್ಲಿ ಬಜರಂಗದಳ ಕಾರ್ಯಕರ್ತನ (Bajarangdal Hindu Activist) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ವಿಚಾರಗಳು ಬುಧವಾರ (ಫೆಬ್ರವರಿ 23) ಲಭ್ಯವಾಗಿದೆ. ಹರ್ಷ ಕೊಲೆ (Harsha Death) ನಡೆಯುವ ಕೆಲ ಗಂಟೆ ಮೊದಲು, ಹತ್ಯೆಗೆ ಸ್ಕೆಚ್ ಹಾಕಿದ್ದರು. ಸೆಕೆಂಡ್ ಹ್ಯಾಂಡ್ ಸ್ವಿಫ್ಟ್ ಕಾರ್​ನಲ್ಲಿ ಬಂದಿದ್ದ ಹಂತಕರು ಕೊಲೆಗೆ ಸ್ಕೆಚ್ ಹಾಕಿದ್ರು ಎಂದು ಮಾಹಿತಿ ಲಭ್ಯವಾಗಿದೆ. ಕಾರಿನಲ್ಲಿದ್ದ 6 ಜನ ಒಟ್ಟಿಗೆ ಭಾರತಿ ಕಾಲೋನಿಗೆ ಎಂಟ್ರಿ ಕೊಟ್ಟಿದ್ದರು. ಕಾರು ಡೀಲರ್​ ಬದ್ರುದ್ದೀನ್ ಮಗ ಜಿಲಾನ್ ಸಹ ಬಂದಿದ್ದ. ಪ್ರಮುಖ ಆರೋಪಿ ರಿಯಾನ್ ಬಾಲ್ಯ ಸ್ನೇಹಿತ ಜಿಲಾನ್ ಬಂದಿದ್ದ. ಹರ್ಷಗೂ ಜಿಲಾನ್​ಗೂ ಯಾವುದೇ ರೀತಿ ವೈರತ್ವ ಇರಲಿಲ್ಲ. ಆದರೆ ರಿಯಾನ್ ಸಹಾಯಕ್ಕೆಂದು ಜಿಲಾನ್ ಬಂದಿದ್ದ ಎಂದು ತಿಳಿದುಬಂದಿದೆ.

ಹಿಂದೂ ಕಾರ್ಯಕರ್ತ ಹರ್ಷ ಕೊಲೆ ನಂತರ ಎಲ್ಲರ ಮೊಬೈಲ್ ಆಫ್​ ಆಗಿತ್ತು. ಕಮ್ಯೂನಿಕೇಷನ್​ಗಾಗಿ ಹಂತಕರ ಒರ್ವನ ಮೊಬೈಲ್ ಮಾತ್ರ​ ಆನ್ ಇತ್ತು. ಭದ್ರಾವತಿ ಮೂಲಕ ರೈಲಿನ ಮೂಲಕ ಹಂತಕರು ಪರಾರಿಯಾಗಿದ್ದರು. ರಾತ್ರಿ 10.30 ಗಂಟೆಯ ಶಿವಮೊಗ್ಗ ಟು ಬೆಂಗಳೂರು, ಶಿವಮೊಗ್ಗ ಟು ಮೈಸೂರುಗೆ ಹೊರಡುವ ರೈಲಿನ ಮೂಲಕ ಪರಾರಿ ಆಗಿದ್ದರು. ಭದ್ರಾವತಿ ರೈಲ್ವೆ ಸ್ಟೆಷನ್​ವರೆಗೂ ಕಾರಿನಲ್ಲಿಯೇ ಬಂದಿದ್ದ ಹಂತಕರು ಬಳಿಕ, ಮೊದಲನೇ ಫ್ಲ್ಯಾನ್​​ನಂತೆ ಎಲ್ಲರೂ ಒಂದೊಂದು ಕಡೆ ಪಾರಾರಿ ಆಗಿದ್ದರು ಎಂದು ತಿಳಿದುಬಂದಿದೆ.

ಸಂಜೆ 4 ಗಂಟೆಗೆ ಕಾರ್ ಹೊರ ತಂದಿದ್ದ ಜಿಲಾನ್​, ರಾತ್ರಿ 8.30 ರ ವರೆಗೂ​ ಸಿಟಿ ಸುತ್ತಾಡಿರುವ ಹಂತಕರು. ಸಂಜೆ 4 ಗಂಟೆಯಿಂದಲೇ ಹಂತರಕ ಟೀಂ ಶಿವಮೊಗ್ಗ ಸಿಟಿ ರೌಡ್ಸ್ ಹಾಕಿತ್ತು ಎಂದು ತಿಳಿದುಬಂದಿದೆ. ಸಿಗೆಹಟ್ಟಿ, ಭಾರತಿ ನಗರ ಆಸುಪಾಸಿನಲ್ಲಿ ಹಂತರಕ ಟೀಂ ಫುಲ್​ರೌಂಡ್ಸ್​​ ಹಾಕಿತ್ತು. ಕಾರ್​​ನಲ್ಲಿ ಸುತ್ತಾಡಿಕೊಂಡೇ ಹರ್ಷ ಚಲನವಲನದ ಬಗ್ಗೆ ಗಮನ ಹರಿಸಲಾಗಿತ್ತು ಎಂದು ಮಾಹಿತಿ ಲಭಿಸಿದೆ.

ಪ್ರಕರಣ ಸಂಬಂಧಿಸಿ ಖಾಸಿಫ್​ನನ್ನು ಭದ್ರಾವತಿಯಲ್ಲಿಯೇ ಪೊಲೀಸರು ಬಂಧಿಸಿದ್ದಾರೆ. ಹಾಸನದಲ್ಲಿ ಮೂವರು ರಿಹಾನ್, ಆಶೀಪ್, ನೀಹಾಲ್, ಶಿವಮೊಗ್ಗದಲ್ಲಿ ನದೀಮ್​, ಬೆಂಗಳೂರು ಜಿಲಾನ್, ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಫ್ನಾನ್​ ಬಂಧಿಸಲಾಗಿದೆ.

ಈ ಮಧ್ಯೆ, ಶಿವಮೊಗ್ಗ ಮೆಗ್ಗಾನ್​ ಆಸ್ಪತ್ರೆಗೆ ಸಚಿವ ಕೆ.ಎಸ್​. ಈಶ್ವರಪ್ಪ ಭೇಟಿ ನೀಡಿದ್ದಾರೆ. ಗಲಾಟೆಯಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಿದ್ದಾರೆ. ಹರ್ಷನ ಶವಯಾತ್ರೆ ವೇಳೆ ಕಲ್ಲುತೂರಾಟ, ಗಲಾಟೆ ನಡೆದಿತ್ತು. ಗಲಾಟೆಯಲ್ಲಿ ಗಾಯಗೊಂಡವರ ಆರೋಗ್ಯ ವಿಚಾರಿಸಲು ಕೆ.ಎಸ್. ಈಶ್ವರಪ್ಪ ಮೆಗ್ಗಾನ್ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗ ಪ್ರಕರಣ: ಮೃತ ಹರ್ಷನ ಮೊಬೈಲ್​ ಪತ್ತೆ, ನಾಲ್ವರು ಆರೋಪಿಗಳಿಗೆ 14 ದಿನ ನ್ಯಾಯಾಂಗ ಬಂಧನ

ಇದನ್ನೂ ಓದಿ: ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ: ಬಂಧಿತ ಆರೋಪಿಗಳಿಗೆ ಇದೆ ಕ್ರಿಮಿನಲ್ ಹಿನ್ನೆಲೆ!

Published On - 7:55 pm, Wed, 23 February 22

Follow Us
10 ಸಾವಿರ ಜನರಿಗೆ ವಿಷ್ಣುವರ್ಧನ್ ಅಭಿಮಾನಿಗಳಿಂದ ವೆಜ್, ನಾನ್-ವೆಜ್ ಊಟ
10 ಸಾವಿರ ಜನರಿಗೆ ವಿಷ್ಣುವರ್ಧನ್ ಅಭಿಮಾನಿಗಳಿಂದ ವೆಜ್, ನಾನ್-ವೆಜ್ ಊಟ
ಸಂಕಷ್ಟದ ಸಮಯದಲ್ಲಿ 63 ರನ್ ಚಚ್ಚಿದ ರಜತ್ ಪಾಟಿದರ್
ಸಂಕಷ್ಟದ ಸಮಯದಲ್ಲಿ 63 ರನ್ ಚಚ್ಚಿದ ರಜತ್ ಪಾಟಿದರ್
ಗೆಳೆಯ ಹಸುವಿಗಾಗಿ ಬ್ರೆಡ್ ಕಚ್ಚಿಕೊಂಡು ಬಂದ ನಾಯಿ; ಈ ಸ್ನೇಹಕ್ಕೆ ಏನಂತೀರಿ!
ಗೆಳೆಯ ಹಸುವಿಗಾಗಿ ಬ್ರೆಡ್ ಕಚ್ಚಿಕೊಂಡು ಬಂದ ನಾಯಿ; ಈ ಸ್ನೇಹಕ್ಕೆ ಏನಂತೀರಿ!
‘ಕೋಟಿಗೊಬ್ಬ’ ಮರು ಬಿಡುಗಡೆ: ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಪ್ರಿಯಾಂಕಾ
‘ಕೋಟಿಗೊಬ್ಬ’ ಮರು ಬಿಡುಗಡೆ: ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಪ್ರಿಯಾಂಕಾ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ವೃಂದಾವನದ ಯಮುನಾ ನದಿಯಲ್ಲಿ ಬೋಟ್ ಮುಳುಗಿ 10 ಜನ ಸಾವು
ವೃಂದಾವನದ ಯಮುನಾ ನದಿಯಲ್ಲಿ ಬೋಟ್ ಮುಳುಗಿ 10 ಜನ ಸಾವು
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ