ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ: ಬಂಧಿತ ಆರೋಪಿಗಳಿಗೆ ಇದೆ ಕ್ರಿಮಿನಲ್ ಹಿನ್ನೆಲೆ!

ಬಂಧಿತ ಆರೋಪಿಗಳಿಗೆ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕೆಲವಾರು ವರ್ಷಗಳ ಹಿಂದಿನಿಂದಲೇ ಕ್ರಿಮಿನಲ್ ಆರೋಪಗಳು ಇರುವ ಬಗ್ಗೆ ಮಾಹಿತಿ ಲಭಿಸಿದೆ. ಆರೋಪಿ ಮೊಹಮ್ಮದ್ ಕಾಶಿಫ್ ವಿರುದ್ಧ ಹಲವು ಪ್ರಕರಣ ದಾಖಲಾಗಿದೆ. ಕಾಶಿಫ್ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ 5 FIR ಇದೆ.

ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣ: ಬಂಧಿತ ಆರೋಪಿಗಳಿಗೆ ಇದೆ ಕ್ರಿಮಿನಲ್ ಹಿನ್ನೆಲೆ!
ಬಜರಂಗದಳ ಕಾರ್ಯಕರ್ತ ಹರ್ಷ
Follow us
TV9 Web
| Updated By: ganapathi bhat

Updated on:Feb 23, 2022 | 3:20 PM

ಶಿವಮೊಗ್ಗ: ನಗರದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಅಷ್ಟೇ ಅಲ್ಲದೆ, ಇದೀಗ ಬಂಧಿತ ಆರೋಪಿಗಳಿಗೆ ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಕೆಲವಾರು ವರ್ಷಗಳ ಹಿಂದಿನಿಂದಲೇ ಕ್ರಿಮಿನಲ್ ಆರೋಪಗಳು ಇರುವ ಬಗ್ಗೆ ಮಾಹಿತಿ ಲಭಿಸಿದೆ. ಆರೋಪಿ ಮೊಹಮ್ಮದ್ ಕಾಶಿಫ್ ವಿರುದ್ಧ ಹಲವು ಪ್ರಕರಣ ದಾಖಲಾಗಿದೆ. ಕಾಶಿಫ್ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ 5 FIR ಇದೆ.

ಕಾಶಿಫ್ ವಿರುದ್ಧ 2012ರಲ್ಲಿ ಐಪಿಸಿ ಸೆಕ್ಷನ್ 25ರ ಅಡಿಯಲ್ಲಿ ಪ್ರಕರಣ, 2016ರಲ್ಲಿ ಕಾಶಿಫ್ ವಿರುದ್ಧ 2 FIR ದಾಖಲಾಗಿದೆ. ಐಪಿಸಿ ಸೆಕ್ಷನ್ 141, 341, 504, 506, 323, 399, 402ರ ಅಡಿಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು ಎಂದು ತಿಳಿದುಬಂದಿದೆ. 2017ರಲ್ಲಿ ಐಪಿಸಿ ಸೆಕ್ಷನ್ 395 (ದರೋಡೆ ಕೇಸ್) ದಾಖಲಾಗಿರುತ್ತದೆ. 2017ರಲ್ಲಿ ಐಪಿಸಿ 376 (ಅತ್ಯಾಚಾರ) 366ಎ (ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ) ಕೇಸ್ ದಾಖಲು ಆಗಿದೆ. ಐಪಿಸಿ 506 – ಅಪರಾಧಿಕ ಭಯೋತ್ಪಾದನೆಗೆ ದಂಡನೆ, 143 – ಸಾರ್ವಜನಿಕರ ನೆಮ್ಮದಿ ಹಾಳು ಮಾಡುವುದು, 341 – ಅಕ್ರಮ ಪ್ರತಿಬಂಧಕ್ಕಾಗಿ ದಂಡನೆ, 504 – ಶಾಂತಿ ಭಂಗ ಮಾಡಲು ಪ್ರಚೋದಿಸುವ ಉದ್ದೇಶದಿಂದ ಮಾಡುವ ಅಪಮಾನ, 323 – ಹಲ್ಲೆ ನಡೆಸುವುದು, 506 – ಅಪರಾಧಿಕ ಭಯೋತ್ಪಾದನೆಗೆ ದಂಡನೆ, 149 – ಸಾರ್ವಜನಿಕರ ನೆಮ್ಮದಿಗೆ ಭಂಗ ತರುವುದು, 399 – ದರೋಡೆಗೆ ಸಿದ್ಧತೆ, 402 – ದರೋಡೆ, 395 – ದರೋಡೆ, 376 – ಅತ್ಯಾಚಾರ, 366 ಎ – ಅಪ್ರಾಪ್ತೆಯ ಮೇಲೆ ಬಲತ್ಕಾರ ಸೆಕ್ಷನ್ ಅಡಿಯಲ್ಲಿ ಪ್ರಕರಣಗಳು ದಾಖಲಾಗಿವೆ ಎಂದು ತಿಳಿದುಬಂದಿದೆ.

ಆಸಿಫ್ ಖಾನ್ ಅಲಿಯಾಸ್ ಚಿಕ್ಕು ಮೇಲೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ 4 ಎಫ್​ಐಆರ್ ದಾಖಲಾಗಿವೆ. ಆಸಿಫ್ ಖಾನ್ (A3) 143 – ಸಾರ್ವಜನಿಕರ ನೆಮ್ಮದಿ ಹಾಳು ಮಾಡುವುದು, 147 – ದೊಂಬಿ, ಗಲಾಟೆ, 148 – ಮಾರಕಾಸ್ತ್ರ ಬಳಕೆ, 323 – ಹಲ್ಲೆ ನಡೆಸುವುದು, 324 – ಮಾರಕಾಸ್ತ್ರಗಳಿಂದ ಭಯ ಹುಟ್ಟಿಸುವುದು, 504 – ಉದ್ದೇಶ ಪೂರ್ವಕ ಪ್ರಚೋದನೆ, 307 – ಕೊಲೆ ಯತ್ನ, 149 – ಸಾರ್ವಜನಿಕರ ನೆಮ್ಮದಿಗೆ ಭಂಗ ತರುವುದು ಪ್ರಕರಣ ದಾಖಲಾಗಿದೆ. ರಿಹಾನ್ ಶರೀಫ್ (A4), ರಿಹಾನ್ ಶರೀಫ್ ಅಲಿಯಾಸ್ ಖಸೀ ಮೇಲೆ 2021 ರಲ್ಲಿ ಕೊಲೆ ಯತ್ನ ಪ್ರಕರಣದಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 307 – ಕೊಲೆ ಯತ್ನ ಅಡಿಯಲ್ಲಿ ಕೇಸ್ ದಾಖಲಾಗಿದೆ.

ಹರ್ಷ ಕೊಲೆ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಆದರೆ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಮೇಲೆ ಶಿವಮೊಗ್ಗ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿದ್ದವು ಎಂಬ ಮಾಹಿತಿ ಇದೆ. ಈ ಬಗ್ಗೆ ಸರಿಯಾದ ತನಿಖೆ ನಡೆಯಬೇಕು ಎಂದು ಉಲ್ಲೇಖಿಸಿ ಗೃಹ ಸಚಿವ ಆರಗ ಜ್ಞಾನೇಂದ್ರ ಸೂಚಿಸಿದ್ದಾರೆ. ಟಿಪ್ಪಣಿ ಈ ಕೆಳಗೆ ನೀಡಲಾಗಿದೆ.

Araga Jnanendra Shivamogga Murder Case

ಇದನ್ನೂ ಓದಿ: ಶಿವಮೊಗ್ಗ: ಹತ್ಯೆಗೂ ಮುನ್ನ ಹರ್ಷನಿಗೆ ಬಂದಿತ್ತು ಇಬ್ಬರು ಹುಡುಗಿಯರ ವಿಡಿಯೋ ಕಾಲ್, ಅದೇ ಮುಳುವಾಯಿತಾ?

ಇದನ್ನೂ ಓದಿ: ಶಿವಮೊಗ್ಗದಲ್ಲಿ ಹರ್ಷ ಕೊಲೆ ನಂತರ ಪರಿಸ್ಥಿತಿ ವಿಕೋಪಕ್ಕೆ; ಶಾಂತಿ ಕಾಪಾಡುವಂತೆ ಹರ್ಷನ ಸಹೋದರಿ ಅಶ್ವಿನಿ ಮನವಿ

Published On - 3:05 pm, Wed, 23 February 22