ಶಿವಮೊಗ್ಗ: ಹತ್ಯೆಗೂ ಮುನ್ನ ಹರ್ಷನಿಗೆ ಬಂದಿತ್ತು ಇಬ್ಬರು ಹುಡುಗಿಯರ ವಿಡಿಯೋ ಕಾಲ್, ಅದೇ ಮುಳುವಾಯಿತಾ?

ಶಿವಮೊಗ್ಗ: ಹತ್ಯೆಗೂ ಮುನ್ನ ಹರ್ಷನಿಗೆ ಬಂದಿತ್ತು ಇಬ್ಬರು ಹುಡುಗಿಯರ ವಿಡಿಯೋ ಕಾಲ್, ಅದೇ ಮುಳುವಾಯಿತಾ?
ಬಜರಂಗದಳ ಕಾರ್ಯಕರ್ತ ಹರ್ಷ

ಕೊಲೆಯಾಗುವುದಕ್ಕೂ ಮೊದಲು ಆ ಇಬ್ಬರು ಹುಡುಗಿಯರು ಕರೆ ಮಾಡುತ್ತಿದ್ದರು. ನಮಗೆ ಸಮಸ್ಯೆಯಾಗಿದೆ ಸಹಾಯ ಮಾಡಿ ಎಂದು ಕರೆ ಮಾಡಿದ್ದರು. ಅವರ ಸಹಾಯಕ್ಕಾಗಿ ತೆರಳಿದ್ದಾಗ ಅನಾಹುತ ನಡೆದಿದೆ ಎಂಬ ಸ್ಫೋಟಕ ಮಾಹಿತಿ ಇದೀಗ ಬಹಿರಂಗವಾಗಿದೆ.

TV9kannada Web Team

| Edited By: sadhu srinath

Feb 23, 2022 | 1:51 PM

ಶಿವಮೊಗ್ಗ: ಕಳೆದ ಭಾನುವಾರ ನಗರದಲ್ಲಿ ಬಜರಂಗದಳದ ಯುವ ಕಾರ್ಯಕರ್ತ ಹರ್ಷನ ಕೊಲೆಗೂ ಮುನ್ನ ಇಬ್ಬರು ಹುಡುಗಿಯರಿಂದ ವಿಡಿಯೋ ಕಾಲ್ ಬಂದಿತ್ತು. ಸಹಾಯ ಕೇಳುವ ನೆಪದಲ್ಲಿ ಆ ಹುಡುಗಿಯರು ಕಾಲ್ ಮಾಡಿದ್ದರು. ಕೊಲೆಯಾಗುವುದಕ್ಕೂ ಮೊದಲು ಆ ಇಬ್ಬರು ಹುಡುಗಿಯರು ಕರೆ ಮಾಡುತ್ತಿದ್ದರು. ನಮಗೆ ಸಮಸ್ಯೆಯಾಗಿದೆ ಸಹಾಯ ಮಾಡಿ ಎಂದು ಕರೆ ಮಾಡಿದ್ದರು. ಅವರ ಸಹಾಯಕ್ಕಾಗಿ ತೆರಳಿದ್ದಾಗ ಅನಾಹುತ ನಡೆದಿದೆ ಎಂಬ ಸ್ಫೋಟಕ ಮಾಹಿತಿ ಇದೀಗ ಬಹಿರಂಗವಾಗಿದೆ.

ಪದೇ ಪದೇ ವಿಡಿಯೋ ಕಾಲ್ ಮಾಡಿದ್ದ ಹುಡುಗಿಯರು ನಾನು ನಿಮಗೆ ಫ್ರೆಂಡ್ ಎಂದು ಹೇಳುತ್ತಿದ್ದರಂತೆ. ನನ್ನಿಂದ ಏನಾಗಬೇಕು ಎಂದು ಹರ್ಷ ಕೇಳಿದ್ದನಂತೆ. ಇವರು ಯಾರು ಎಂದು ಸ್ನೇಹಿತರನ್ನೂ ಹರ್ಷ ಕೇಳಿದ್ದನಂತೆ. ಬಳಿಕ ನೆರವು ನೀಡಲು ಸ್ನೇಹಿತರ ಜೊತೆ ಹರ್ಷ ತೆರಳಿದ್ದ. ಆಗ ಕೆಲವೇ ಕ್ಷಣಗಳಲ್ಲಿ ಹರ್ಷನ ಕೊಲೆ ನಡೆದು ಹೋಗಿತ್ತು.

ಈ ಮಧ್ಯೆ, ಹರ್ಷನ ಮೊಬೈಲ್ ಪತ್ತೆ ಆಗದಿರುವುದು ನಿಗೂಢವಾಗಿದೆ. ಹರ್ಷನ ಮೊಬೈಲ್ ಎಲ್ಲಿದೆ ಅನ್ನೊದು ಇನ್ನೂ ಗೊತ್ತಾಗಿಲ್ಲ. ಹರ್ಷನ ಮೊಬೈಲ್ ಆರೋಪಿಗಳ ಬಳಿ ಇದೆಯೇ? ಹುಡುಗಿಯರನ್ನು ಕೊಲೆಗೆ ಬಳಸಿಕೊಂಡರೇ ಆರೋಪಿಗಳು? ಸಹಾಯ ಕೇಳುವ ನೆಪದಲ್ಲಿ ಕರೆ ಮಾಡಿದ್ದರಾ ಆ ಹುಡುಗಿಯರು? ಯಾರು ಏನೂ ಎಂದು ವಿಚಾರಿಸಿದರೂ ಆ ಹುಡುಗಿಯರು ಉತ್ತರಿಸಿರಲಿಲ್ಲ ಎಂದು ತಿಳೀದುಬಂದಿದೆ. ಹರ್ಷನ ಆಪ್ತ ಸ್ನೇಹಿತನ ಮಾತಲ್ಲಿ ಈ ಮಾಹಿತಿ ಹೊರಬಂದಿದೆ.

Also Read: ಒಂಟಿ ಬೇಟೆ ಹರ್ಷನನ್ನು ಕ್ಲರ್ಕ್ ಪೇಟೆ ಯುವಕರು ಹತ್ಯೆ ಮಾಡಿದ ಇಂಚಿಂಚು ಮಾಹಿತಿ ಇಲ್ಲಿದೆ -TV9 Exclusive

Also Read: ನನ್ನ ಮಗನನ್ನು ಕೊಲೆ ಮಾಡಿಸಿದ್ದು ರಮಾನಾಥ ರೈ – ಬಂಟ್ವಾಳದ ಆರ್​ಎಸ್​ಎಸ್ ​​ಕಾರ್ಯಕರ್ತ ಶರತ್ ಮಡಿವಾಳ ತಂದೆ ಆರೋಪ

Follow us on

Related Stories

Most Read Stories

Click on your DTH Provider to Add TV9 Kannada