ನನ್ನ ಮಗನನ್ನು ಕೊಲೆ ಮಾಡಿಸಿದ್ದು ರಮಾನಾಥ ರೈ – ಬಂಟ್ವಾಳದ ಆರ್​ಎಸ್​ಎಸ್ ​​ಕಾರ್ಯಕರ್ತ ಶರತ್ ಮಡಿವಾಳ ತಂದೆ ಆರೋಪ

ರಮಾನಾಥ ರೈ, ಪ್ರಕಾಶ್ ಶೆಟ್ಟಿ, ಎಮ್ಮೆಕೆರೆ ಸಲಾಂ ಇವರೆಲ್ಲಾ ಸೇರಿ ಉದ್ದೇಶಪೂರ್ವಕವಾಗಿ ಶರತ್ ಹತ್ಯೆ (sharath madiwala) ಮಾಡಿದರು ಎಂದು ಬಂಟ್ವಾಳದ ಆರ್​ಎಸ್​ಎಸ್ ​​ಕಾರ್ಯಕರ್ತ ಶರತ್ ಮಡಿವಾಳ ತಂದೆ ತನಿಯಪ್ಪ ಮಡಿವಾಳ ಆರೋಪ ಮಾಡಿದ್ದಾರೆ.

ನನ್ನ ಮಗನನ್ನು ಕೊಲೆ ಮಾಡಿಸಿದ್ದು ರಮಾನಾಥ ರೈ - ಬಂಟ್ವಾಳದ ಆರ್​ಎಸ್​ಎಸ್ ​​ಕಾರ್ಯಕರ್ತ ಶರತ್ ಮಡಿವಾಳ ತಂದೆ ಆರೋಪ
ನನ್ನ ಮಗನನ್ನು ಕೊಲೆ ಮಾಡಿಸಿದ್ದು ರಮಾನಾಥ ರೈ - ಬಂಟ್ವಾಳದ ಆರ್​ಎಸ್​ಎಸ್ ​​ಕಾರ್ಯಕರ್ತ ಶರತ್ ಮಡಿವಾಳ ತಂದೆ ಆರೋಪ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Feb 23, 2022 | 12:41 PM

ಮಂಗಳೂರು: ನನ್ನ ಮಗ ಶರತ್ ಮಡಿವಾಳನನ್ನು ಕೊಲೆ ಮಾಡಿಸಿದ್ದು ಮಾಜಿ ಸಚಿವ ರಮಾನಾಥ ರೈ (Former minister ramanatha rai). ರಮಾನಾಥ ರೈ, ಪ್ರಕಾಶ್ ಶೆಟ್ಟಿ, ಎಮ್ಮೆಕೆರೆ ಸಲಾಂ ಇವರೆಲ್ಲಾ ಸೇರಿ ಉದ್ದೇಶಪೂರ್ವಕವಾಗಿ ಶರತ್ ಹತ್ಯೆ (sharath madiwala) ಮಾಡಿದರು ಎಂದು ಬಂಟ್ವಾಳದ ಆರ್​ಎಸ್​ಎಸ್ ​​ಕಾರ್ಯಕರ್ತ ಶರತ್ ಮಡಿವಾಳ ತಂದೆ ತನಿಯಪ್ಪ ಮಡಿವಾಳ ಆರೋಪ ಮಾಡಿದ್ದಾರೆ. ಆಗಿನ ಪೊಲೀಸ್ ಆಧಿಕಾರಿ ವಿಚಾರಣೆ ಕೂಡ ಮಾಡಿಲ್ಲ. ಆಗಿನ ಅಧಿಕಾರಿ ಆರ್​ಕೆ ದತ್ತಾ ಬಿ.ಸಿ. ರೋಡ್ ನಲ್ಲಿ ತಿರುಗಾಟ ನಡೆಸಿದ್ದರಷ್ಟೇ, ಯಾವುದೇ ರೀತಿಯ ವಿಚಾರಣೆ ನಡೆಸಿಲ್ಲವೆಂದು ಅವರು ಆರೋಪ ಮಾಡಿದ್ದಾರೆ.

ಯಾವ ಪೊಲೀಸ್ ಇಲಾಖೆಯೂ ಈವರೆಗೆ ನನ್ನನ್ನ ವಿಚಾರಿಸಿಲ್ಲ -ತನಿಯಪ್ಪ ಮಡಿವಾಳ ಆರೋಪ: ನನ್ನ ಮಗ ಶರತ್ ಮಡಿವಾಳನನ್ನು ರಮಾನಾಥ್ ರೈ, ಪ್ರಕಾಶ್ ಶೆಟ್ಟಿ ಮತ್ತು ಎಮ್ಮೆಕೆರೆ ಸಲಾಂ ಉದ್ದೇಶಪೂರ್ವಕವಾಗಿ ಕೊಲೆ ಮಾಡಿಸಿದರು. ಇವರು ಕೆಎಫ್ ಡಿ ಸಂಘಟನೆ ಮೂಲಕ ಮಾಡಿಸಿದ ಕೊಲೆ ಅಂತ ನನಗೆ ಸ್ಪಷ್ಟವಾಗಿ ಗೊತ್ತಾಗಿದೆ. ಆಗಿನ ಪೊಲೀಸ್ ಅಧಿಕಾರಿ ಆರ್‌.ಕೆ.ದತ್ತಾ ಬಿ.ಸಿ.ರೋಡ್ ನಲ್ಲಿ ತಿರುಗಿದ್ದು ಬಿಟ್ಟರೆ ನನ್ನ ವಿಚಾರಣೆ ಮಾಡಿಲ್ಲ. ಯಾವ ಪೊಲೀಸ್ ಇಲಾಖೆಯೂ ಈವರೆಗೆ ನನ್ನನ್ನ ವಿಚಾರಿಸಿಲ್ಲ. ನನಗೆ ಸರ್ಕಾರ ಯಾವ ಸೌಲಭ್ಯವನ್ನೂ ಕೊಟ್ಟಿಲ್ಲ, ನನ್ನದು ಈಗ ಕಷ್ಟದ ಜೀವನ. ಸಿದ್ದರಾಮಯ್ಯ ಶಾದಿ ಭಾಗ್ಯ ಎಲ್ಲಾ ಕೊಟ್ಟು ಮುಸಲ್ಮಾನರನ್ನೇ ನೋಡಿದ್ದು, ಹಿಂದೂಗಳನ್ನ ನೋಡಿಲ್ಲ ಎಂದು ತನಿಯಪ್ಪ ಮಡಿವಾಳ ಆರೋಪ ಮಾಡಿದ್ದಾರೆ.

’ಮುಸಲ್ಮಾನರನ್ನ ಓಲೈಸಿ ನನ್ನ ಮಗನನ್ನ ಕೊಲ್ಲಿಸೋಕೆ ಮೂಲ ಕಾರಣವೇ ರಮಾನಾಥ್ ರೈ’ ಮುಸಲ್ಮಾನರನ್ನ ಓಲೈಸಿ ನನ್ನ ಮಗನನ್ನ ಕೊಲ್ಲಿಸೋಕೆ ಮೂಲ ಕಾರಣವೇ ರಮಾನಾಥ್ ರೈ. ನನಗೆ ಬಂದ ಸ್ಥಿತಿ ಶಿವಮೊಗ್ಗದ ಹರ್ಷನ ತಂದೆಗೆ ಬರಬಾರದು. ಸರ್ಕಾರ ಅವರಿಗೆ ವ್ಯವಸ್ಥೆ ಮಾಡಬೇಕು. ನನಗೆ ಆಗಿನ ಕಾಂಗ್ರೆಸ್ ಸರ್ಕಾರ ಏನೂ ಸಹಾಯ ಮಾಡಿಲ್ಲ, ಬಿಜೆಪಿಯವರು ಅಳಿಲು ಸೇವೆ ಮಾಡಿದ್ದಾರೆ. ತಕ್ಷಣ ಪಿಎಫ್ ಐ ಮತ್ತು ಎಸ್ ಡಿಪಿಐ ಬ್ಯಾನ್ ಮಾಡಿ ನ್ಯಾಯ ಕೊಡಿಸಿ. ಹರ್ಷ ಸತ್ತದ್ದನ್ನ ಟಿವಿಯಲ್ಲಿ ‌ನೋಡಿ ನನಗೆ ಸಹಿಸಲು ಆಗಿಲ್ಲ. ನನ್ನ ಮಗನನ್ನ ಅಂಗಡಿಯೊಳಗೆ ಹೊಕ್ಕಿ ಕೊಂದದ್ದು, ಹರ್ಷನನ್ನ ಅಟ್ಟಾಡಿಸಿ ಕೊಂದದ್ದು. ನನ್ನ ಲೆಕ್ಕದಲ್ಲಿ ಈ ಎರಡೂ ಹತ್ಯೆಗಳು ಒಂದೇ ರೀತಿಯಲ್ಲಿ ಆಗಿವೆ. ಎಸ್ ಡಿಪಿಐನವರು ಕಾದು ಕೂತು ಮಾಡ್ತಾರೆ, ಹಿಂದೂಗಳನ್ನ ಟಾರ್ಗೆಟ್ ಮಾಡಿ ಕೊಲ್ತಾರೆ. ಎಸ್ ಡಿಪಿಐ ಮತ್ತು ಪಿಎಫ್ ಐಗೆ ದುಡ್ಡು ಕೊಟ್ಟು ಕೊಲೆ ಮಾಡಿಸ್ತಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ತಕ್ಷಣ ಪಿಎಫ್ ಐ ಮತ್ತು ಎಸ್ ಡಿಪಿಐ ಬ್ಯಾನ್ ಮಾಡಲಿ ಎಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ ಒಂಟಿ ಬೇಟೆ ಹರ್ಷನನ್ನು ಕ್ಲರ್ಕ್ ಪೇಟೆ ಯುವಕರು ಹತ್ಯೆ ಮಾಡಿದ ಇಂಚಿಂಚು ಮಾಹಿತಿ ಇಲ್ಲಿದೆ -TV9 Exclusive

ಇದನ್ನೂ ಓದಿ ಬೆಂಗಳೂರಲ್ಲಿ ನೇಪಾಳಿ ಗ್ಯಾಂಗ್ ರಾಬರಿ: ಮನೆಗೆಲಸದಾಕೆಯ ನಂಬಿ 1 ಕೋಟಿ ರೂ ಕಳೆದುಕೊಂಡ ಕುಟುಂಬ!

Published On - 12:26 pm, Wed, 23 February 22

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ