ಪ್ರಿಯಾಂಕಾ ತಿಮ್ಮೇಶ್ ಮದುವೆ ಆಗೋದು ಯಾವಾಗ? ಉತ್ತರ ಕೊಟ್ಟ ಬಿಗ್ ಬಾಸ್ ಸ್ಪರ್ಧಿ
ಪ್ರಿಯಾಂಕಾ ತಿಮ್ಮೇಶ್ ಅವರು ಗರ್ಭಿಣಿ ಪಾತ್ರ ಮಾಡಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಹೀರೋ ಚೀನಾದಲ್ಲಿ ಇರುತ್ತಾನೆ. ಅದೇ ವೇಳೆಗೆ ಕಥಾನಾಯಕಿ ತುಂಬು ಗರ್ಭಿಣಿ ಆಗಿರುತ್ತಾಳೆ. ಇಡೀ ಕಥೆಯನ್ನು ವಿಡಿಯೋ ಕಾಲ್ ಮಾದರಿಯಲ್ಲಿ ಕಟ್ಟಿಕೊಡಲಾಗಿದೆ.
ಬಿಗ್ ಬಾಸ್ ಖ್ಯಾತಿಯ ಪ್ರಿಯಾಂಕಾ ತಿಮ್ಮೇಶ್ (Priyanka Thimmesh) ಹಾಗೂ ಖ್ಯಾತ ನಟ ನಾಗಭೂಷಣ್ (Nagabhushan) ಅವರು ‘ಮೇಡ್ ಇನ್ ಚೈನಾ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಅಶ್ವಿನ್ ರಾವ್ ಪಲ್ಲಕ್ಕಿ ಕೂಡ ಒಂದು ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇತ್ತೀಚೆಗೆ ‘ಮೇಡ್ ಇನ್ ಚೈನಾ’ (Made In Chaina) ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ಒಟ್ಟಾರೆ ಸಿನಿಮಾ ಹೇಗೆ ಮೂಡಿಬಂದಿದೆ ಎಂಬುದರ ಝಲಕ್ ಇದರಲ್ಲಿ ತೋರಿಸಲಾಗಿದೆ. ವಿಶೇಷ ಏನೆಂದರೆ ಈ ಸಿನಿಮಾದಲ್ಲಿ ಪ್ರಿಯಾಂಕಾ ತಿಮ್ಮೇಶ್ ಅವರು ಗರ್ಭಿಣಿ ಪಾತ್ರ ಮಾಡಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಹೀರೋ ಚೀನಾದಲ್ಲಿ ಇರುತ್ತಾನೆ. ಅದೇ ವೇಳೆಗೆ ಕಥಾನಾಯಕಿ ತುಂಬು ಗರ್ಭಿಣಿ ಆಗಿರುತ್ತಾಳೆ. ಇಡೀ ಕಥೆಯನ್ನು ವಿಡಿಯೋ ಕಾಲ್ ಮಾದರಿಯಲ್ಲಿ ಕಟ್ಟಿಕೊಡಲಾಗಿದೆ. ಈ ಚಿತ್ರದ ಬಗ್ಗೆ ಮಾತಾಡುವಾಗ ಅವರು ತಾವು ಯಾವಾಗ ಮದುವೆ ಆಗುತ್ತೇವೆ ಎನ್ನುವುದರ ಬಗ್ಗೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ಪ್ರಜ್ವಲ್ ದೇವರಾಜ್-ಪ್ರಿಯಾಂಕಾ ತಿಮ್ಮೇಶ್ ಅಭಿನಯದ ‘ಅರ್ಜುನ್ ಗೌಡ’ ಸಿನಿಮಾ ಹೇಗಿದೆ?
‘ನಂಗೆ 4-5 ಮಕ್ಕಳು ಆಗದಿದ್ರೂ ಒಂದೆರಡು ಮಕ್ಕಳು ದತ್ತು ತಗೋಬೇಕು ಅಂತ ಆಸೆ ಇದೆ’: ಪ್ರಿಯಾಂಕಾ ತಿಮ್ಮೇಶ್