ಪ್ರಜ್ವಲ್​ ದೇವರಾಜ್​-ಪ್ರಿಯಾಂಕಾ ತಿಮ್ಮೇಶ್​ ಅಭಿನಯದ ‘ಅರ್ಜುನ್​ ಗೌಡ’ ಸಿನಿಮಾ ಹೇಗಿದೆ?

‘ಅರ್ಜುನ್​ ಗೌಡ’ ನೋಡಿದ ಅನೇಕರು ಪ್ರಜ್ವಲ್​ ಹಾಗೂ ಪ್ರಿಯಾಂಕಾ ನಟನೆಯನ್ನು ಮೆಚ್ಚಿಕೊಂಡಿದ್ದಾರೆ. ಇನ್ನೂ ಕೆಲವರು ಸಿನಿಮಾದಲ್ಲಿ ತಾಯಿ ಸೆಂಟಿಮೆಂಟ್​ ಹೈಲೈಟ್​ ಆಗಿದೆ ಎಂದು ಹೇಳಿಕೊಂಡಿದ್ದಾರೆ.  

TV9kannada Web Team

| Edited By: Rajesh Duggumane

Dec 31, 2021 | 3:22 PM

ಪ್ರಜ್ವಲ್​ ದೇವರಾಜ್​ ಹಾಗೂ ಬಿಗ್​ ಬಾಸ್​ ಖ್ಯಾತಿಯ ಪ್ರಿಯಾಂಕಾ ತಿಮ್ಮೇಶ್​ ಅಭಿನಯದ ‘ಅರ್ಜುನ್​ ಗೌಡ’ ಸಿನಿಮಾ ಇಂದು (ಡಿಸೆಂಬರ್​ 31) ತೆರೆಗೆ ಬಂದಿದೆ. ಇದು ಕೋಟಿ ರಾಮು ನಿರ್ಮಾಣದ ಕೊನೆಯ ಸಿನಿಮಾ. ಇಂದು ಕರ್ನಾಟಕ ಬಂದ್​ ಆಚರಿಸಲು ನಿರ್ಧರಿಸಲಾಗಿತ್ತು. ಆದರೆ, ಕೊನೇ ಕ್ಷಣದಲ್ಲಿ ಬಂದ್​ ಹಿಂಪಡೆಯಲಾಗಿದೆ. ಹೀಗಾಗಿ, ಸಿನಿಮಾಗೆ ಇದ್ದ ಅಡಚಣೆ ದೂರವಾಗಿತ್ತು. ಹೀಗಾಗಿ, ಸಿನಿಮಾ ವೀಕ್ಷಿಸೋಕೆ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಹಾಗಾದರೆ ಸಿನಿಮಾ ಹೇಗಿದೆ? ಸಿನಿಮಾ ನೋಡಿದ ಪ್ರೇಕ್ಷಕರು ಏನಂದ್ರು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ. ‘ಅರ್ಜುನ್​ ಗೌಡ’ ನೋಡಿದ ಅನೇಕರು ಪ್ರಜ್ವಲ್​ ಹಾಗೂ ಪ್ರಿಯಾಂಕಾ ನಟನೆಯನ್ನು ಮೆಚ್ಚಿಕೊಂಡಿದ್ದಾರೆ. ಇನ್ನೂ ಕೆಲವರು ಸಿನಿಮಾದಲ್ಲಿ ತಾಯಿ ಸೆಂಟಿಮೆಂಟ್​ ಹೈಲೈಟ್​ ಆಗಿದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:‘ಅರ್ಜುನ್​ ಗೌಡ’ ಚಿತ್ರದಲ್ಲಿ ಆರಂಭದಿಂದ ಕೊನೆಯವರೆಗೂ ನಾನಿರ್ತೀನಿ; ಬಿಗ್​​ ಬಾಸ್ ಪ್ರಿಯಾಂಕಾ ತಿಮ್ಮೇಶ್​ 

‘ಮಾಫಿಯಾ’ ಚಿತ್ರಕ್ಕಾಗಿ ಗೆಟಪ್​ ಬದಲಿಸಿ ಕ್ಯಾನ್ಸರ್​ ಪೀಡಿತರಿಗೆ ಕೂದಲು ದಾನ ಮಾಡಿದ ಪ್ರಜ್ವಲ್​ ದೇವರಾಜ್​

Follow us on

Click on your DTH Provider to Add TV9 Kannada