ಶಿಯೋಮಿ12 ಎಕ್ಸ್ ಶ್ರೇಣಿಯ ಫೋನ್​​​ಗಳನ್ನು ಲಾಂಚ್ ಮಾಡಿದರೂ ಶಿಯೋಮಿ 12 ಅಲ್ಟ್ರಾ ಫೋನ್ ಮಾತ್ರ ಮರೀಚಿಕೆಯೇ!

ಶಿಯೋಮಿ ಎಮ್ ಐ 11 ಅಲ್ಟ್ರಾ ಫೋನನ್ನು 2021 ರ ಮಾರ್ಚ್ನಲ್ಲಿ ಲಾಂಚ್ ಮಾಡಲಾಗಿತ್ತು. ಹಾಗಾಗಿ ಕಂಪನಿಯು ಶಿಯೋಮಿ 12 ಅಲ್ಟ್ರಾ ಫೋನನ್ನು ಅದೇ ಟೈಮ್ ಲೈನಲ್ಲಿ ಅಂದರೆ 2022 ಮಾರ್ಚ್​ನಲ್ಲಿ ಲಾಂಚ್ ಮಾಡಬಹುದು ಎಂದು ಮಾರ್ಕೆಟ್ ತಜ್ಞರು ಊಹಿಸುತ್ತಿದ್ದಾರೆ.

TV9kannada Web Team

| Edited By: Arun Belly

Dec 31, 2021 | 6:03 PM

ಮೂರು ದಿನಗಳ ಹಿಂದೆ ಶಿಯೋಮಿ 12 ಸಿರೀಸ್ ಫೋನ್​ಗಳು ಭಾರತದಲ್ಲಿ ಲಾಂಚ್ ಆಗಿವೆ. ಈ ಶ್ರೇಣಿಯಲ್ಲಿ ಮೂರು ಫೋನ್ಗಳು ಗ್ರಾಹಕರನ್ನು ತಲುಪಲಿವೆ. ಶಿಯೋಮಿ 12 ಹಾಗೂ ಶಾಮಿ ಪ್ರೋ-ಇವೆರಡು ಶಿಯೋಮಿ 12 ಎಕ್ಸ್ ಮಾಡೆಲ್ ನಲ್ಲಿ ಎರಡು ದುಬಾರಿ ಫೋನ್ಗಳು ಹಾಗೂ ಮತ್ತೊಂದು ಕೈಗೆಟಕುವ ಬೆಲೆಯ 12 ಎಕ್ಸ್ ಶ್ರೇಣಿ ಫೋನ್. ಆದರೆ, ಗಮನಿಸಬೇಕಾದ ಅಂಶವೇನೆಂದರೆ, ಕಂಪನಿಯು ಶಿಯೋಮಿ 12 ಅಲ್ಟ್ರಾ ಲಾಂಚ್ ಬಗ್ಗೆ ಎಲ್ಲೂ ಉಲ್ಲೇಖಿಸಿಲ್ಲ. ಈ ಪೋನಿನ ಬಗ್ಗೆ ನಮಗೆ ಯಾಕೆ ಕುತೂಹಲವೆಂದರೆ, ಅದು ಲಾಂಚ್ ಆಗುವ ಕುರಿತು ವದಂತಿಗಳು ಲಭ್ಯವಾಗುತ್ತಿವೆಯೇ ಹೊರತು ಫೋನಂತೂ ಇದುವರೆಗೆ ಕಣ್ಣಿಗೆ ಬಿದ್ದಿಲ್ಲ. 2021 ರಲ್ಲಿ ಶಿಯೋಮಿ ಜನಪ್ರಿಯ ಮತ್ತು ಪ್ರಮುಖ ಮಾಡೆಲ್ ಆಗಿದ್ದ ಎಮ್ ಐ 11 ಅಲ್ಟ್ರಾ ಅನ್ನು ಶಿಯೋಮಿ 12 ಅಲ್ಟ್ರಾ ರಿಪ್ಲೇಸ್ ಮಾಡಲಿದೆ ಎಂಬ ವದಂತಿಯೂ ಹರಡಿತ್ತು. ಆದರೆ ಲಾಂಚ್ ಈವೆಂಟ್ನಲ್ಲಿ ಶಿಯೋಮಿ ಅಲ್ಟ್ರಾ ಕಣ್ಣಿಗೆ ಬೀಳಲೇ ಇಲ್ಲ. ಹಾಗಾಗಿ, ಕಂಪನಿಯ ಫ್ಲ್ಯಾಗ್ ಶಿಪ್ ಪೋನ್ ಶಿಯೋಮಿ 12 ಅಲ್ಟ್ರಾ ಯಾವಾಗ ಲಾಂಚ್ ಆದೀತು ಎಂಬ ಕುತೂಹಲ ನಮ್ಮಲ್ಲಿ ಹಾಗೆಯೇ ಉಳಿದುಕೊಳ್ಳಲಿದೆ.

ನಿಮಗೆ ನೆನಪಿರಬಹುದು, ಶಿಯೋಮಿ ಎಮ್ ಐ 11 ಅಲ್ಟ್ರಾ ಫೋನನ್ನು 2021 ರ ಮಾರ್ಚ್ನಲ್ಲಿ ಲಾಂಚ್ ಮಾಡಲಾಗಿತ್ತು. ಹಾಗಾಗಿ ಕಂಪನಿಯು ಶಿಯೋಮಿ 12 ಅಲ್ಟ್ರಾ ಫೋನನ್ನು ಅದೇ ಟೈಮ್ ಲೈನಲ್ಲಿ ಅಂದರೆ 2022 ಮಾರ್ಚ್​ನಲ್ಲಿ ಲಾಂಚ್ ಮಾಡಬಹುದು ಎಂದು ಮಾರ್ಕೆಟ್ ತಜ್ಞರು ಊಹಿಸುತ್ತಿದ್ದಾರೆ. ಆದರೆ ಆ ಕುರಿತು ಕಂಪನಿಯು ಯಾವುದೇ ಸುಳಿವು ನೀಡಿಲ್ಲ. ಹಾಗಾಗಿ ಸದ್ಯಕ್ಕೆ ಯಾವುದನ್ನೂ ನಿರ್ದಿಷ್ಟವಾಗಿ ಹೇಳುವುದು ನಮಗೆ ಸಾಧ್ಯವಾಗುತ್ತಿಲ್ಲ.

ಸೋರಿಕೆಗಳ ಮೂಲಕ ಲಭ್ಯವಾದ ಮಾಹಿತಿಯ ಪ್ರಕಾರ ಶಿಯೋಮಿ 12 ಅಲ್ಟ್ರಾ ಲಾಂಚ್ಗೆ ಹಲವಾರು ಟೈಮ್ ಲೈನ್ಗಳನ್ನು ಸೂಚಿಸಲಾಗಿತ್ತು. ಒಂದು ಮಾಹಿತಿಯ ಪ್ರಕಾರರ ಅದು 2022ರ ಮೊದಲ ತ್ರೈಮಾಸಿಕನಲ್ಲಿ ಲಾಂಚ್ ಆಗಲಿದೆ. ಇನ್ನೊಂದು ಮಾಹಿತಿಯು ಜೂನ್ ನಲ್ಲಿ ಶಿಯೋಮಿ 12 ಅಲ್ಟ್ರಾ ಲಾಂಚ್ ಆಗಲಿದೆ ಎಂದು ತಿಳಿಸುತ್ತದೆ.

ಇಷ್ಕಕ್ಕೂ ಶಿಯೋಮಿಗೆ  ತನ್ನ ಮುಂದಿನ ಫ್ಲ್ಯಾಗ್ ಶಿಪ್ ಫೋನನ್ನು ಭಾರತದಲ್ಲಿ ಲಾಂಚ್ ಮಾಡುವ ಇಚ್ಛೆ ಇದೆಯೋ ಇಲ್ಲವೋ ಎಂಬ ಸಂಶಯ ಮೂಡುತ್ತಿದೆ. ಯಾಕೆಂದರೆ ಭಾರತದಲ್ಲಿ ಎಮ್ ಐ 11 ಅಲ್ಟ್ರಾ ಫೋನಿಗೆ ಸೃಷ್ಟಿಯಾದ ಬೇಡಿಕೆಯೊಂದಿಗೆ ಏಗುವುದು ಶಿಯೋಮಿ ಗೆ ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ:   New Year 2022 Astrology Pediction: ವರ್ಷ ಭವಿಷ್ಯ 2022 -ಹೊಸ ವರ್ಷವು 12 ರಾಶಿಗೆ ಹೇಗಿರಲಿದೆ, ವಿಡಿಯೋ ನೋಡಿ

Follow us on

Click on your DTH Provider to Add TV9 Kannada