ಸೂಪರ್​ಮ್ಯಾನ್​ ಹಾಗೆ ಜನ ಪ್ಯಾಂಟ್ ಮೇಲೆ ಒಳ ಉಡುಪು ಧರಿಸಿ ರಸ್ತೆಗಳಿಗೆ ಬಂದು ಹೊಸ ವರ್ಷ ಆಚರಿಸುವ ಬಗ್ಗೆ ಕೇಳಿದ್ದೀರಾ?

ದಕ್ಷಿಣ ಅಮೆರಿಕನಲ್ಲಿರುವ ಪೆರು ಒಂದು ಚಿಕ್ಕ ರಾಷ್ಟ್ರ. ಅಲ್ಲಿ ಹೊಸ ವರ್ಷವನ್ನು ಬಹಳ ವಿಚಿತ್ರವಾಗಿ ಆಚರಿಸಲಾಗುತ್ತದೆ. ದೇಶದ ಜನ ಅಂದು ಸ್ಮಶಾನಕ್ಕೆ ಹೋಗಿ ತಮ್ಮ ಪೂರ್ವಜರ, ಸಂಬಂಧಿಕರ ಸಮಾಧಿಯ ಮೇಲೆ ಮಲಗುತ್ತಾರೆ. ಹಾಗೆ ಮಾಡುವುದರಿಂದ ಗತಿಸಿದವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಅನ್ನೋದು ಅವರ ನಂಬಿಕೆ.

TV9kannada Web Team

| Edited By: Arun Belly

Dec 31, 2021 | 8:03 PM

ಕೆಲವೇ ಕ್ಷಣಗಳಲ್ಲಿ 2021 ನೇಪಥ್ಯಕ್ಕೆ ಸರಿದು 2022 ಉದಯಿಸಲಿದೆ. ವಿಶ್ವದೆಲ್ಲೆಡೆ ಜನ ಆ ಕ್ಷಣಕ್ಕಾಗಿ ಕಾಯುತ್ತಿದ್ದಾರೆ. ನಮ್ಮ ದೇಶದಲ್ಲಿ, ರಾಜ್ಯದಲ್ಲಿ ಮತ್ತು ರಾಜ್ಯದ ಎಲ್ಲ ಪ್ರಾಂತ್ಯಗಳಲ್ಲಿ ಜನ ಮಧ್ಯರಾತ್ರಿಯವರೆಗೆ ಎಚ್ಚರವಿದ್ದು ಹೊಸ ವರ್ಷವನ್ನು ಸ್ವಾಗತಿಸುತ್ತಾರೆ. ನಮ್ಮ ದೇಶದಲ್ಲಿ ಹೊಸ ವರ್ಷ ಆಚರಣೆ ಭಿನ್ನವಾಗಿರುವ ಹಾಗೆಯೇ, ಬೇರೆ ಬೇರೆ ದೇಶಗಳಲ್ಲೂ ಇದನ್ನು ಪ್ರತ್ಯೇಕವಾದ ರೀತಿಯಲ್ಲಿ ಆಚರಿಸಲಾಗುತ್ತದೆ. ಕುಡಿತ-ಕುಣಿತ ಮತ್ತು ಮೋಜು-ಮಸ್ತಿ ಎಲ್ಲಾ ದೇಶಗಳಲ್ಲೂ ಸಾಮಾನ್ಯ ಆದರೆ, ಒಂದಷ್ಟು ದೇಶಗಳಲ್ಲಿ ರೂಢಿಯಲ್ಲಿರುವ ಸಂಪ್ರದಾಯಗಳು ನಮ್ಮಲ್ಲಿ ಕುತೂಹಲ ಮೂಡಿಸುತ್ತವೆ.

ದಕ್ಷಿಣ ಅಮೆರಿಕನಲ್ಲಿರುವ ಪೆರು ಒಂದು ಚಿಕ್ಕ ರಾಷ್ಟ್ರ. ಅಲ್ಲಿ ಹೊಸ ವರ್ಷವನ್ನು ಬಹಳ ವಿಚಿತ್ರವಾಗಿ ಆಚರಿಸಲಾಗುತ್ತದೆ. ದೇಶದ ಜನ ಅಂದು ಸ್ಮಶಾನಕ್ಕೆ ಹೋಗಿ ತಮ್ಮ ಪೂರ್ವಜರ, ಸಂಬಂಧಿಕರ ಸಮಾಧಿಯ ಮೇಲೆ ಮಲಗುತ್ತಾರೆ. ಹಾಗೆ ಮಾಡುವುದರಿಂದ ಗತಿಸಿದವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಅನ್ನೋದು ಅವರ ನಂಬಿಕೆ.

ಸ್ವಿಜರ್ಲ್ಯಾಂಡ್ ಚಾಕೊಲೇಟ್ ಗಳಿಗೆ ಬಹಳ ಫೇಮಸ್. ಆದರೆ ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ಆ ದೇಶದ ಜನ ಪರಸ್ಪರ ಐಸ್ ಕ್ರೀಮ್ ಗಳನ್ನು ಹಂಚಿಕೊಳ್ಳುತ್ತಾ ಶುಭಾಷಯ ಕೋರುತ್ತಾರೆ. ದಕ್ಷಿಣ ಅಮೆರಿಕಾದ ಕೆಲವು ಪ್ರಾಂತ್ಯಗಳಲ್ಲಿ ಪ್ಯಾಂಟ್​ಗಳ ಮೇಲೆ ಒಳ ಉಡುಪು ಧರಿಸಿ (ಸೂಪರ್​ಮ್ಯಾನ್​ ಥರ!) ಹೊಸ ವರ್ಷವನ್ನು ಸ್ವಾಗತಿಸಲಾಗುತ್ತದೆ. ಹಾಗೆ ಮಾಡಿದರೆ ಹೊಸ ವರ್ಷ ಲಾಭಕರವಾಗಿ ಪರಣಮಿಸುತ್ತದಂತೆ!

ಯುರೋಪ್​ನಲ್ಲಿರುವ ರುಮೇನಿಯಾನಲ್ಲಿ ಜನ ಕರಡಿ ವೇಷ ಧರಿಸಿ ಹೊಸ ವರ್ಷದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ರುಮೇನಿಯದ ಇತಿಹಾಸದಲ್ಲಿ, ಕತೆ-ಕಾದಂಬರಿಗಳಲ್ಲಿ ಕರಡಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿರುವುದರಿಂದ ಜನ ಹಾಗೆ ಹೊಸ ವರ್ಷವನ್ನು ಆಚರಿಸುತ್ತಾರೆ.

ಡೆನ್ಮಾರ್ಕ್ ನಲ್ಲಿ ಹೊಸ ವರ್ಷದಂದು ಜನ ಏನು ಮಾಡುತ್ತಾರೆ ಗೊತ್ತಾ? ತಮ್ಮ ನೆರೆಹೊರೆಯವರ ಮನೆಗಳಿಗೆ ಹೋಗಿ ಅಲ್ಲಿರುವ ಪಾತ್ರೆ-ಪಗಡೆಗಳನ್ನು ಒಡೆದು ಹಾಕುತ್ತಾರೆ. ಹೆಚ್ಚು ಪಾತ್ರೆಗಳನ್ನು ಒಡೆದರೆ ಹೊಸ ವರ್ಷದಲ್ಲಿ ಲಾಭವೂ ಹೆಚ್ಚಾಗುತ್ತದೆ ಎಂಬ ನಂಬಿಕೆ ಅವರಲ್ಲಿದೆ.

ಇದನ್ನೂ ಓದಿ:  Viral Video: ಬಿಸಿ ಎಣ್ಣೆಯೊಳಗೆ ಕೈ ಹಾಕಿ ಪಕೋಡ ಮಾಡಿದ ವ್ಯಾಪಾರಿ; ಶಾಕಿಂಗ್ ವಿಡಿಯೋ ಇಲ್ಲಿದೆ

Follow us on

Click on your DTH Provider to Add TV9 Kannada