ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ನಾಡಿನ ಜನತೆಗೆ ಮುಂಗಡವಾಗಿ ಹೊಸ ವರ್ಷದ ಶುಭಾಷಯಗಳನ್ನ ಹೇಳಿದ್ದಾರೆ. ಹೊಸ ವರ್ಷ ರಾಜ್ಯದ ಸವಾಲುಗಳನ್ನ ಸಮರ್ಥವಾಗಿ ಎದುರಿಸುವಂತಾಗ್ಲಿ ಎಂದಿದ್ದಾರೆ. ಇದೇ ಸಂದರ್ಭದಲ್ಲಿ ಕೊರೊನಾ ಮೂರನೇ ಅಲೆ ಎದುರಿಸಲು ರಾಜ್ಯ ಸರ್ಕಾರ ಮಾಡಿಕೊಂಡಿರುವ ತಯಾರಿ ಬಗ್ಗೆಯೂ ಅವರು ಮಾತನಾಡಿದ್ದಾರೆ. ಈ ವೇಳೆ ಒಮಿಕ್ರಾನ್ ಬಗ್ಗೆ ಮಾತನಾಡುವಾಗಲೇ ಕೆಮ್ಮಿದ್ದಾರೆ.
ವಿಧಾನಸೌಧದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳ ಸಭೆ ನಡೆದಿದೆ. ಸಭೆಯಲ್ಲಿ ಕೊವಿಡ್ ನಿರ್ವಹಣೆ ಸಬಂಧ ಚರ್ಚೆ ನಡೆದಿದೆ. ಕೊರೊನಾ ಎದುರಿಸಲು ಪೂರ್ವ ತಯಾರಿಗೆ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ. 3ನೇ ಅಲೆಯಲ್ಲಿ ಹೆಚ್ಚು ಅನಾಹುತಗಳಿಗೆ ಅವಕಾಶ ನೀಡಬೇಡಿ. ಪರಿಸ್ಥಿತಿಗನುಗುಣವಾಗಿ ಕಾಲಕಾಲಕ್ಕೆ ಒಳ್ಳೇ ನಿರ್ಧಾರ ಮಾಡಿ ಎಂದು ಸಭೆಯಲ್ಲಿ ಡಿಸಿಗಳಿಗೆ ಸೂಚಿಸಿದ್ದಾರೆ.